MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಗರ್ಭಾಶಯ ಬಲಪಡಿಸಲು ಪ್ರತಿದಿನ ಈ ಕೆಲಸ ಮಾಡಿ, ಬೇಗನೆ ಗರ್ಭಿಣಿಯಾಗ್ತೀರಿ!

ಗರ್ಭಾಶಯ ಬಲಪಡಿಸಲು ಪ್ರತಿದಿನ ಈ ಕೆಲಸ ಮಾಡಿ, ಬೇಗನೆ ಗರ್ಭಿಣಿಯಾಗ್ತೀರಿ!

ಆರೋಗ್ಯಕರ ಗರ್ಭಾಶಯವು ಮಹಿಳೆಯ ಆರೋಗ್ಯಕರ ದೇಹದ ಸಂಕೇತ. ನಾವು ನಮ್ಮ ಗರ್ಭಾಶಯದ ಬಗ್ಗೆ ಕಾಳಜಿ ವಹಿಸೋದು ಮುಖ್ಯ ಮತ್ತು ಈ ಇಲ್ಲಿ ಹೇಳಿರುವ ತಂತ್ರಗಳು ಗರ್ಭಾಶಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಇಲ್ಲಿ ನೀವು ಶಕ್ತಿ ಮುದ್ರೆ ಬಗ್ಗೆ ತಿಳಿದುಕೊಳ್ಳಬಹುದು

2 Min read
Author : Suvarna News
Published : Jan 30 2023, 05:40 PM IST
Share this Photo Gallery
  • FB
  • TW
  • Linkdin
  • Whatsapp
17

ಹೌದು, ಆರೋಗ್ಯಕರ ಗರ್ಭಾಶಯವು(Uterus) ಮುಖ್ಯ ಏಕೆಂದರೆ ಇದು ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಅನೇಕ ಮಹಿಳೆಯರ ಆರೋಗ್ಯ ಸಮಸ್ಯೆಗಳು ಗರ್ಭಾಶಯಕ್ಕೆ ಸಂಬಂಧಿಸಿವೆ. ಗರ್ಭಾಶಯದ ಸಮಸ್ಯೆಯಿಂದಾಗಿ ಮಗುವನ್ನ ಪಡೆಯಲು ತೊಂದರೆ ಉಂಟಾಗುತ್ತದೆ. ಫೈಬ್ರಾಯ್ಡ್ಸ್,  ಸೋಂಕು, ಪಾಲಿಪ್ಸ್, ಪ್ರೊಲ್ಯಾಪ್ಸ್, ಗರ್ಭಾಶಯದ ನೋವು ಮುಂತಾದ ಗರ್ಭಾಶಯದ ಸಮಸ್ಯೆಗಳನ್ನು ತಪ್ಪಿಸಲು ಈ ಟಿಪ್ಸ್ ಬಳಸಬಹುದು. 

27

ಶಕ್ತಿ ಮುದ್ರೆ(Shakti mudra), ಈ ಹೆಸರು ಮಾ ಶಕ್ತಿ ಅಥವಾ ಪಾರ್ವತಿಯಿಂದ ಬಂದಿದೆ ಮತ್ತು ಇದು ನಮ್ಮ ದೇಹದಲ್ಲಿನ ಸ್ತ್ರೀ ಶಕ್ತಿಯನ್ನು ಪ್ರತಿನಿಧಿಸುತ್ತೆ. ಈ ಭಂಗಿಯು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತೆ. ಇದನ್ನು ಹೇಗೆ ಮಾಡೋದು ಮತ್ತು ಇತರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

37
ಶಕ್ತಿ ಮುದ್ರೆ ಮಾಡೋದು ಹೇಗೆ?

ಶಕ್ತಿ ಮುದ್ರೆ ಮಾಡೋದು ಹೇಗೆ?

ಇದನ್ನು ಮಾಡಲು, ಮೊದಲು ಸುಖಾಸನ ಭಂಗಿಯಲ್ಲಿ ಕುಳಿತುಕೊಳ್ಳಿ. 
ನಂತರ ಎರಡೂ ಕೈಗಳ ಹೆಬ್ಬೆರಳುಗಳನ್ನು ಅಂಗೈಯ ಮೇಲೆ ಇರಿಸಿ ಮತ್ತು ಮುಷ್ಠಿ ಕಟ್ಟಿ.
ಈಗ ಎರಡೂ ಕೈಗಳ ಉಂಗುರ ಬೆರಳು ಮತ್ತು ಕಿರಿಯ ಬೆರಳುಗಳನ್ನು ನೇರಗೊಳಿಸಿ ಮತ್ತು ಅವುಗಳನ್ನು ಒಟ್ಟಿಗೆ ಮಾಡಿ.

47

ಈ ಸಮಯದಲ್ಲಿ, ಎರಡೂ ಕೈಗಳ ತೋರು ಮತ್ತು ಮಧ್ಯದ ಬೆರಳುಗಳ ಹೆಬ್ಬೆರಳನ್ನು ಒತ್ತಿ.
ಈ ಭಂಗಿಯಲ್ಲಿ, ಸಾಮಾನ್ಯವಾಗಿ ಉಸಿರಾಡುತ್ತಲೇ ಇರಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. 
ಕೆಲವು ನಿಮಿಷಗಳ ನಂತರ, ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. 
ಈ ಮುದ್ರೆಯನ್ನು ಯಾವುದೇ ಧ್ಯಾನ(Meditation) ಭಂಗಿಯಲ್ಲಿ ಪ್ರತಿದಿನ 5-10 ನಿಮಿಷಗಳ ಕಾಲ ಮಾಡಿ. 

57
ಶಕ್ತಿ ಮುದ್ರೆಯ ಪ್ರಯೋಜನಗಳೇನು?

ಶಕ್ತಿ ಮುದ್ರೆಯ ಪ್ರಯೋಜನಗಳೇನು?

ಆರೋಗ್ಯಕರ ಗರ್ಭಾಶಯದ ಭಂಗಿ ಅನಿಯಮಿತ ಋತುಚಕ್ರವನ್ನು(Periods) ಎದುರಿಸಲು ಸಹಾಯ ಮಾಡುತ್ತೆ.
ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಗಳ ವಿರುದ್ಧ ರಕ್ಷಿಸುತ್ತೆ ಮತ್ತು ಅದನ್ನು ಎದುರಿಸಲು ಸಹಾಯ ಮಾಡುತ್ತೆ.
ಹಾರ್ಮೋನುಗಳ ಸಮತೋಲಿತ ಸ್ಥಿತಿಯನ್ನು ನೀಡುತ್ತೆ.
 

67

ಪಿಸಿಓಎಸ್(PCOS) ಮತ್ತು ಎಂಡೊಮೆಟ್ರಿಯೋಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಅಂಡಾಶಯಗಳ ಸುಧಾರಿತ ಕಾರ್ಯನಿರ್ವಹಣೆಗೆ ಈ ಮುದ್ರೆ ಸಹಾಯ ಮಾಡುತ್ತೆ.
ಆರೋಗ್ಯಕರ ಮತ್ತು ಬಲವಾದ ಬರ್ತ್ ಕೆನಾಲ್ಗೆ ಸಹಾಯ ಮಾಡುತ್ತೆ. ಹಾಗಾಗಿ ಈ ಮುದ್ರೆಯನ್ನು ಮಾಡುವುದನ್ನು ಮರೆಯಬೇಡಿ.

77
ಶಕ್ತಿ ಮುದ್ರೆಯ ಇತರ ಪ್ರಯೋಜನಗಳ ಬಗ್ಗೆ ತಿಳಿಯೋಣ

ಶಕ್ತಿ ಮುದ್ರೆಯ ಇತರ ಪ್ರಯೋಜನಗಳ ಬಗ್ಗೆ ತಿಳಿಯೋಣ

ಒತ್ತಡವನ್ನು ನಿವಾರಿಸುತ್ತೆ
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತೆ. 
ಶಕ್ತಿ ಮತ್ತು ಸಕಾರಾತ್ಮಕ ಮನೋಭಾವ ಹೆಚ್ಚಿಸುತ್ತೆ.
ಮೆದುಳಿನ(Bain) ಕಾರ್ಯನಿರ್ವಹಣೆಯ ಸಾಮರ್ಥ್ಯ ಹೆಚ್ಚಾಗುತ್ತೆ.
ಮನಸ್ಸನ್ನು ಶಾಂತಗೊಳಿಸುತ್ತೆ. 
ಏಕಾಗ್ರತೆಯನ್ನು ಸುಧಾರಿಸಲು ಸಹ ಇದು ಸಹಾಯಕವಾಗಿದೆ.
ಈ ಸಲಹೆಗಳ ಸಹಾಯದಿಂದ ನೀವು ನಿಮ್ಮ ಗರ್ಭಾಶಯವನ್ನು ಬಲಪಡಿಸಬಹುದು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ

Latest Videos
Recommended Stories
Recommended image1
ಅದೊಂದು ಟಿಪ್ಸ್‌ ಫಾಲೋ ಮಾಡಿ, ತಳ ಸೀದು ಹೋದ ಕುಕ್ಕರ್‌, ಕಾಫಿ ಪಾತ್ರೆ ಕ್ಷಣಾರ್ಧದಲ್ಲೆ ಕ್ಲೀನ್‌ ಆಗುತ್ತೆ!
Recommended image2
Red Chutney: ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!
Recommended image3
ಮುಖದ ಮೇಲೆ ಮೊಡವೆ ಜಾಸ್ತಿಯಾಗಲು ನೀವ್ ತಿನ್ನೋ ಈ ಆಹಾರಗಳೇ ಕಾರಣ! ತಜ್ಞರು ಹೇಳೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved