ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ ಎಂದರೇನು ಗೊತ್ತಾ ?
ಆಲ್ಕೋಹಾಲ್ ಚಟಕ್ಕೆ ಬಿದ್ರೆ ಅದ್ರಿಂದ ಹೊರಗೆ ಬರೋದು ಕಷ್ಟ. ಈಗಿನ ಕಾಲದಲ್ಲಿ ಮದ್ಯ ಸೇವನೆಯಲ್ಲಿ ಮಹಿಳೆಯೂ ಮುಂದಿದ್ದಾರೆ. ಗರ್ಭ ಧರಿಸಿದಾಗ್ಲೂ ಅನೇಕರು ಮದ್ಯಪಾನ ಮಾಡ್ತಾರೆ. ಇದ್ರಿಂದ ಮುಂದಾಗುವ ಸಮಸ್ಯೆ ಏನು ಎಂಬುದು ಅವರಿಗೆ ತಿಳಿದಿರೋದಿಲ್ಲ.
ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಇದು ತಿಳಿಯದಿರುವ ವಿಷ್ಯವೇನಲ್ಲ. ಮದ್ಯದ ಬಾಟಲಿಯಿಂದ ಹಿಡಿದು ಅನೇಕ ಕಡೆ ನಾವೆಲ್ಲ ಆಲ್ಕೋಹಾಲ್ ಸೇವನೆಯಿಂದ ಸಾವು ಸಂಭವಿಸುತ್ತದೆ ಎಂಬ ವಾಕ್ಯವನ್ನು ಓದಿರ್ತೇವೆ. ಹೆಚ್ಚು ಆಲ್ಕೋಹಾಲ್ ಸೇವನೆಯು ಯಕೃತ್ತನ್ನು ಹಾನಿಗೊಳಪಡಿಸುತ್ತದೆ. ಯಕೃತ್ತು ಮಾತ್ರವಲ್ಲದೆ ಇತರ ಕಾಯಿಲೆಗಳ ಅಪಾಯವನ್ನು ಕೂಡ ಆಲ್ಕೋಹಾಲ್ ಹೆಚ್ಚಿಸುತ್ತದೆ.
ಮದ್ಯ (Alcohol) ವನ್ನು ಸಾಮಾನ್ಯ ವ್ಯಕ್ತಿ ಸೇವನೆ ಮಾಡಿದ್ರೆ ಸಾಕಷ್ಟು ಅನಾರೋಗ್ಯ (Illness) ಕಾಡುತ್ತದೆ. ಇನ್ನು ಗರ್ಭಿಣಿಯರು ಮಧ್ಯೆ ಸೇವನೆ ಮಾಡಿದ್ರೆ ಇದ್ರ ದುಷ್ಪರಿಣಾಮ ದುಪ್ಪಟ್ಟಿರುತ್ತದೆ. ಗರ್ಭಿಣಿ ಮದ್ಯ ಸೇವಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮಹಿಳೆಯರು ಗರ್ಭ ಧರಿಸಿದ ನಂತ್ರ ಮದ್ಯ ಸೇವನೆ ಮಾಡದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಇಂದು ನಾವು ಗರ್ಭಿಣಿಯರು ಮದ್ಯ ಸೇವನೆ ಮಾಡಿದ್ರೆ ಏನೆಲ್ಲ ಅಪಾಯ ಎದುರಿಸಬೇಕು ಎಂಬುದನ್ನು ಹೇಳ್ತೆವೆ.
ಗರ್ಭಿಣಿ (Pregnant) ಯರು ಮದ್ಯ ಸೇವನೆ ಮಾಡಿದ್ರೆ ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ಮೆದುಳಿನ ರಚನೆಯಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿರುತ್ತದೆ. ತಾಯಿಯ ಮದ್ಯ ಸೇವನೆಯಿಂದ ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಅನೇಕ ಅಧ್ಯಯನಗಳು ಕೂಡ ನಡೆದಿವೆ. ಗರ್ಭಿಣಿಯರು ಯಾವ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡ್ತಾರೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ರೂ ಮೆದುಳಿನ ರಚನೆಯಲ್ಲಿ ಬದಲಾವಣೆಯನ್ನು ನೋಡಬಹುದು. ಆಲ್ಕೋಹಾಲ್ ಅತಿಯಾದ ಸೇವನೆ ಮಗುವಿನ ಮೆದುಳಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಮಗುವಿನಲ್ಲಿ ಮಾತಿನ ಸಮಸ್ಯೆ, ನಡವಳಿಕೆ ಸಮಸ್ಯೆ , ಕಲಿಕೆಯಲ್ಲಿ ಸಮಸ್ಯೆ ಕಂಡುಬರುತ್ತವೆ. ಇದನ್ನು ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ ಎಂದರೇನು ಗೊತ್ತಾ ?
ಗರ್ಭಾವಸ್ಥೆಯಲ್ಲಿ ಮಹಿಳೆಯರು ಅನೇಕ ಎಚ್ಚರಿಕೆ ಹೆಜ್ಜೆ ಇಡಬೇಕು. ಇಂದ್ರಿಯ ನಿಗ್ರಹಕ್ಕೆ ಮಹತ್ವ ನೀಡಬೇಕು. ಅದ್ರಲ್ಲಿ ಮದ್ಯವೂ ಸೇರಿದೆ. ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಕೂಡ ಮದ್ಯ ಸೇವನೆ ನಿಲ್ಲಿಸುವುದಿಲ್ಲ. ಗರ್ಭಿಣಿಯರು ಮದ್ಯ ಸೇವನೆ ಮಾಡಿದಾಗ ಅದು ಭ್ರೂಣವನ್ನು ತಲುಪುತ್ತದೆ. ಭ್ರೂಣ ಸಂಪೂರ್ಣವಾಗಿ ಅಭಿವೃದ್ಧಿಯಾಗದ ಕಾರಣ ಅದಕ್ಕೆ ಆಲ್ಕೋಹಾಲ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದ್ರಿಂದ ಆಲ್ಕೋಹಾಲ್ ಗರ್ಭಾಶಯದಲ್ಲಿ ಸಂಗ್ರಹವಾಗುತ್ತದೆ. ಇದ್ರಿಂದಾಗಿ ಮಗುವಿನ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗಲು ಶುರುವಾಗುತ್ತದೆ. ಇದನ್ನು ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್ (FAS) ಎಂದು ಕರೆಯಲಾಗುತ್ತದೆ. ಭ್ರೂಣದಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳನ್ನು ಹುಟ್ಟಿದ ನಂತ್ರ ಪರಿಹರಿಸಲು ಸಾಧ್ಯವಿಲ್ಲ. ಅದಕ್ಕೆ ಯಾವುದೇ ಚಿಕಿತ್ಸೆಯಿಲ್ಲ.
ಮಾನಸಿಕ ಆರೋಗ್ಯಕ್ಕಲ್ಲ, ಯೋನಿ ಅನಾರೋಗ್ಯಕ್ಕೆ ಕಾರಣವಾಗುತ್ತೆ ವೈಫಲ್ಯದ ಸಂಭೋಗ
ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್ ಮಕ್ಕಳಿಗೆ ಏನೆಲ್ಲ ಸಮಸ್ಯೆ ಕಾಡುತ್ತದೆ : ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್ ಹೊಂದಿರುವ ಮಕ್ಕಳಲ್ಲಿ ಅನೇಕ ದೈಹಿಕ ಸಮಸ್ಯೆಗಳು ಕಂಡುಬರುತ್ತವೆ. ಇದರಲ್ಲಿ ತೂಕ ಕಡಿಮೆಯಾಗುವುದು, ಬೆಳವಣಿಗೆ ಕಡಿಮೆಯಾಗುವುದು, ಮಗುವಿನ ಮುಖಭಾವದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ಸೇರಿದೆ. ಸಣ್ಣ ಕಣ್ಣು, ಮೂಗಿನ ರಚನೆಯಲ್ಲಿ ಬದಲಾವಣೆ, ತೆಳುವಾದ ತುಟಿ, ಚಿಕ್ಕ ಮೆದುಳು ಹೀಗೆ ಸಾಕಷ್ಟು ಸಮಸ್ಯೆಯನ್ನು ನೀವು ಮಗುವಿನಲ್ಲಿ ಕಾಣಬಹುದಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆ : ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್‌ನಿಂದಾಗಿ ಜನನದ ನಂತರ ಮಕ್ಕಳಲ್ಲಿ ಅಧ್ಯಯನಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಕಂಡುಬರುತ್ತವೆ. ಮಕ್ಕಳಲ್ಲಿ ಕಲಿಯುವ ಸಾಮರ್ಥ್ಯ ಕಡಿಮೆ ಆಗುತ್ತದೆ. ಶಾಲಾಯಲ್ಲಿ ಪಾಠಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಲಿಕೆಯಲ್ಲಿ ಈ ಮಕ್ಕಳು ಹಿಂದೆ ಬೀಳ್ತಾರೆ.
ಪ್ರೊ ನಂತೆ ಲಿಪ್ ಲೈನರ್ ಹಚ್ಚುವ ಸೂಕ್ತ ವಿಧಾನ ತಿಳಿದುಕೊಳ್ಳಿ!
ಸಾಮಾಜಿಕ ಸಮಸ್ಯೆ : ಈ ಮಕ್ಕಳಲ್ಲಿ ಸಾಮಾಜಿಕ ಸಮಸ್ಯೆಗಳು ಸಹ ಕಂಡುಬರುತ್ತವೆ. ಮಕ್ಕಳನ್ನು ಒಂದೇ ಸ್ಥಳದಲ್ಲಿ ಕೇಂದ್ರೀಕರಿಸುವುದು ಕಷ್ಟವಾಗುತ್ತದೆ. ಅವರು ಎಲ್ಲರ ಜೊತೆ ಬೆರೆಯುವುದಿಲ್ಲ.
ಕಾಡುತ್ತೆ ಈ ಸಮಸ್ಯೆ : ಆಲ್ಕೋಹಾಲ್ ಸಿಂಡ್ರೋಮಾದಿಂದ ಹೃದ್ರೋಗ, ಮೂಳೆ ಸಮಸ್ಯೆ ಮತ್ತು ಮೂತ್ರಪಿಂಡದ ಸಮಸ್ಯೆ ಕೂಡ ಮಕ್ಕಳನ್ನು ಕಾಡುತ್ತದೆ.