ರಾತ್ರಿಯೇ ಆಗಬೇಕಾ? ದೇಹ ಸುಖ ಪಡೆಯುಲು ಯಾವ ಹೊತ್ತಾದರೇನು?
ದಿನವಿಡೀ ಕೆಲಸದ ಒತ್ತಡದಿಂದಾಗಿ ರಾತ್ರಿ ಹೊತ್ತು ಮಂಚದ ಮೇಲೆ ಸಂಗಾತಿ ಜೊತೆ ರಸ ನಿಮಿಷ ಕಳೆದ್ರೂ ಸಹ ಅದು ಹೆಚ್ಚು ಸಂತೋಷ ನೀಡೋದೆ ಇಲ್ಲ. ಇದ್ರಿಂದ ಪ್ರಯೋಜನಾನೂ ಕಡಿಮೆ. ಹಾಗಿದ್ರೆ ಯಾವ ಸಮಯದಲ್ಲಿ ಸೆಕ್ಸ್ ಮಾಡೋದು ಬೆಸ್ಟ್? ಬೆಳಗ್ಗೆ ಸೆಕ್ಸ್ ಮಾಡೋದು ಬೆಸ್ಟ್ ಅಂತಾವೆ ಅಧ್ಯಯನಗಳು.
Image: Getty Images
ತಮ್ಮ ಬ್ಯುಸಿ ಜೀವನದಿಂದಾಗಿ ಗಂಡ -ಹೆಂಡತಿಗೆ ಸೆಕ್ಸ್ ಮಾಡಲು ಸಮಯ ಇರೋದೆ ಇಲ್ಲ. ತಮಗೆ ಮೂಡ್ ಇದ್ದರೆ ಯಾವಾಗ ಎಂದರೆ ಆವಾಗ ಮಾತ್ರ ಸೆಕ್ಸ್ ಮಾಡ್ತಾರೆ. ಆದರೆ ಸಂಭೋಗ ಮಾಡುವಾಗ ಸಮಯ ಬಹಳ ಮುಖ್ಯ ಎಂದು ನಿಮಗೆ ತಿಳಿದಿದೆಯೇ? ಹೌದು, ಬೆಳಿಗ್ಗೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮನಸನ್ನು ಉಲ್ಲಾಸಗೊಳಿಸುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೆಳಿಗ್ಗೆ ಲೈಂಗಿಕತೆಯ ಈ 8 ಪ್ರಯೋಜನಗಳ (benefits of sex) ಬಗ್ಗೆ ತಿಳಿಯೋಣ.
ಸ್ಮರಣೆ ಶಕ್ತಿ ಹೆಚ್ಚುತ್ತೆ
ಬೆಳಿಗ್ಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಲೈಂಗಿಕ ಹಾರ್ಮೋನುಗಳ (sex hormone) ಉತ್ಪಾದನೆಯಲ್ಲಿ ಮೆದುಳನ್ನು ಉತ್ತೇಜಿಸುತ್ತದೆ, ಇದು ದಿನವಿಡೀ ಜಾಗರೂಕರಾಗಿರಲು ಸಹಾಯ ಮಾಡುತ್ತದೆ ಮತ್ತು ವಿಷಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.
ಆ್ಯಂಟಿ ಏಜಿಂಗ್
ಮಾರ್ನಿಂಗ್ ಸೆಕ್ಸ್ (morning sex) ನಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಅಲ್ಲದೆ, ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗಬಹುದು, ಇದು ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತ
ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತೆ
ಕಡಿಮೆ ಸೆಕ್ಸ್ ಮಾಡುವವರಿಗೆ ಹೋಲಿಸಿದರೆ ವಾರಕ್ಕೆ ಕನಿಷ್ಠ 3 ಬಾರಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಹೃದಯಾಘಾತ (heart attack) ಮತ್ತು ಪಾರ್ಶ್ವವಾಯು ಅಪಾಯವನ್ನು 50% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಸಂಶೋಧನೆಗಳು ಬಹಿರಂಗಪಡಿಸಿವೆ. ವಿಶೇಷವಾಗಿ ಬೆಳಗಿನ ಸಮಯವನ್ನು ಇದಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ಬೆಳಗ್ಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಐಜಿಎ ಆಂಟಿಬಾಡಿಗಳ ಉತ್ಪಾದನೆಯನ್ನು ಹೆಚ್ಚಿಸುತ್ತೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಇದು ದೇಹವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಂದ್ರೆ, ಬೆಳಿಗ್ಗೆ ಲೈಂಗಿಕ ಕ್ರಿಯೆ ನಡೆಸುವುದು ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸುತ್ತದೆ.
ಒತ್ತಡ ನಿವಾರಿಸುತ್ತೆ
ಬೆಳಗ್ಗೆ ಒಂದು ಬಾರಿ ಲೈಂಗಿಕ ಕ್ರಿಯೆ ನಡೆಸುವುದರಿಂದ 7 ದಿನಗಳವರೆಗೆ ಒತ್ತಡವನ್ನು ಕಡಿಮೆ (stress control) ಮಾಡಬಹುದು ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಹಾಗಿದ್ರೆ ಮತ್ಯಾಕೆ ತಡ ಸಂಗಾತಿ ಜೊತೆ ರಾತ್ರಿ ಬದಲು, ಮುಂಜಾನೆ ಎಂಜಾಯ್ ಮಾಡಿ, ಸ್ಟ್ರೆಸ್ ದೂರವಾಗುತ್ತೆ.
30 ನಿಮಿಷಗಳ ವ್ಯಾಯಾಮದ ಪ್ರಯೋಜನ ಸಿಗುತ್ತೆ
ಬೆಳಿಗ್ಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಅರ್ಧ ಘಂಟೆಯವರೆಗೆ ವ್ಯಾಯಾಮ ಮಾಡುವಷ್ಟು ಕ್ಯಾಲೊರಿ ಬರ್ನ್ (calorie burn) ಆಗುತ್ತೆ. ಸರಾಸರಿ, ಲೈಂಗಿಕ ಕ್ರಿಯೆಯು ಪುರುಷರಲ್ಲಿ 240 ಕ್ಯಾಲೊರಿಗಳನ್ನು ಮತ್ತು ಮಹಿಳೆಯರಲ್ಲಿ 180 ಕ್ಯಾಲೊರಿ ಬರ್ನ್ ಮಾಡುತ್ತೆ.
ವೀರ್ಯದ ಗುಣಮಟ್ಟ ಸುಧಾರಿಸುತ್ತೆ
ಮುಂಜಾನೆಯ ಸೆಕ್ಸ್‌ನಿಂದ ಪುರುಷರ ವೀರ್ಯಾಣುಗಳ ಗುಣಮಟ್ಟವನ್ನು ಸುಧಾರಿಸುತ್ತದೆ (quality of sperm increase) ಮತ್ತು ಮಹಿಳೆಯರು ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಸೆಕ್ಸ್ ಡ್ರೈವ್ ಹೆಚ್ಚಿಸುತ್ತೆ
ಮುಂಜಾನೆ ಲೈಂಗಿಕ ಕ್ರಿಯೆ ನಡೆಸುವುದರಿಂದ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಡೋಪಮೈನ್ ಎಂಬ ಲೈಂಗಿಕ ಹಾರ್ಮೋನುಗಳು (Sex drive) ಹೆಚ್ಚಾಗುತ್ತವೆ, ಇದು ಲೈಂಗಿಕ ಬಯಕೆಯ ಭಾವನೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಸೆಕ್ಸ್ ಲೈಫ್ ಸಹ ತುಂಬಾನೆ ಚೆನ್ನಾಗಿರುತ್ತೆ.