ತ್ವಚೆ ಹೊಳೆಯುವಂತೆ ಮಾಡುವ ಬಾತ್ ಪೌಡರ್ ಮನೆಯಲ್ಲೇ ತಯಾರಿಸಿ
ಬದಲಾಗುತ್ತಿರುವ ಹವಾಮಾನದ ನಡುವೆ ಚರ್ಮದ ಟ್ಯಾನಿಂಗ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ನೀವು ಸಹ ಎದುರಿಸಿರಬಹುದು ಅಲ್ವಾ? ಇಷ್ಟೇ ಅಲ್ಲ, ಚರ್ಮವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸದಿದ್ದರೆ, ಚರ್ಮದ ಮೇಲೆ ಮೊಡವೆಗಳು ಸಹ ಹೆಚ್ಚಾಗಬಹುದು. ಇಷ್ಟೆಲ್ಲಾ ಸಮಸ್ಯೆ ನಿವಾರಣೆ ಏನು ಮಾಡ್ಬೇಕು ಅನ್ನೋದನ್ನು ನೋಡೋಣ…
ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಲು ನೀವು ಸ್ನಾನ ಮಾಡುವಾಗ ಬಾಡಿ ವಾಶ್(Body wash) ಬಳಸುವ ಬದಲು ಮನೆಯಲ್ಲಿ ತಯಾರಿಸಿದ ಬಾತ್ ಪೌಡರ್ ಬಳಸಿದ್ರೆ, ಅದು ನಿಮ್ಮ ಚರ್ಮ ಹೊಳೆಯುವಂತೆ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತೆ. ಅದನ್ನು ಮಾಡೋದು ತಿಳಿಯೋಣ.
ಕೆಮಿಕಲ್ ಪ್ರಾಡಕ್ಟ್ಸ್ ಬಳಸೋದು ಚರ್ಮದ ಮೇಲೆ ಡ್ರೈನೆಸ್ ಮತ್ತು ರಾಷಸ್(Rashes) ಸಮಸ್ಯೆ ಸುಲಭವಾಗಿ ಉಂಟುಮಾಡಬಹುದು. ಹಾಗಾಗಿ ನೀವು ಸಾಬೂನಿನ ಬದಲು ನ್ಯಾಚುರಲ್ ಪ್ರಾಡಕ್ಟ್ಸ್ ಬಳಸಿದ್ರೆ, ಅದು ಚರ್ಮಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ.
ಈ ಹೋಂ ಮೇಡ್ ಬಾತ್ ಪೌಡರ್ (Bath powder)ಬಳಸಿದ್ರೆ ಸ್ಕಿನ್ ಕ್ಲೀನ್ ಆಗುತ್ತೆ ಮತ್ತು ಚೆನ್ನಾಗಿ ಎಕ್ಸ್ಫೋಲಿಯೇಟ್ ಮಾಡಲಾಗುತ್ತೆ, ಇದು ಚರ್ಮಕ್ಕೆ ಹೊಸ ಲುಕ್ ನೀಡುತ್ತೆ. ಇದು ಚರ್ಮವನ್ನು ಉತ್ತಮ ರೀತಿಯಲ್ಲಿ ನರೀಶ್ ಮಾಡುತ್ತೆ , ಅಲ್ಲದೇ ಚರ್ಮವನ್ನು ಮೃದುವಾಗಿಸುತ್ತೆ. ಆದ್ದರಿಂದ ಮನೆಯಲ್ಲಿ ಬಾತ್ ಪೌಡರ್ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಮನೆಯಲ್ಲಿ ಬಾತ್ ಪೌಡರ್(Bath powder) ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಹಸಿ ಹೆಸರು ಬೇಳೆ - 2 ಕಪ್
ಬೇಸನ್-1 ಕಪ್
ಅಕ್ಕಿ - 1 ಕಪ್ ಅಕ್ಕಿ
ಮಸೂರ್ ದಾಲ್ - 2 ಕಪ್
ಸ್ಯಾಂಡಲ್ ವುಡ್ ಪೌಡರ್ - 1 ಟೇಬಲ್ ಸ್ಪೂನ್
ಅರಿಶಿಣ-1 ಟೀ ಚಮಚ
ಮನೆಯಲ್ಲಿಯೇ ಬಾತ್ ಪೌಡರ್ ತಯಾರಿಸುವುದು ಹೇಗೆ?
ಮನೆಯಲ್ಲಿ ಬಾತ್ ಪೌಡರ್ ತಯಾರಿಸಲು, ಮೊದಲು ಹಸಿ ಹೆಸರುಕಾಳು, ಅಕ್ಕಿ ಮತ್ತು ಮಸೂರ್ ದಾಲ್(Masoor dal) ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದು ನೈಸ್ ಆಗಿ ಪುಡಿ ಆಗಿರುವಂತೆ ನೋಡಿ/
ಈಗ ಅದಕ್ಕೆ ಅರಿಶಿನ, ಶ್ರೀಗಂಧದ ಪುಡಿ ಮತ್ತು ಬೇಸನ್(Besan) ಸೇರಿಸಿ. ನಂತರ ಈ ಎಲ್ಲಾ ವಸ್ತುಗಳನ್ನು ಮಿಕ್ಸರ್ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಎಲ್ಲವೂ ಚೆನ್ನಾಗಿ ಮಿಕ್ಸ್ ಆಗಲಿ. ಈಗ ಮನೆಯಲ್ಲಿ ಮಾಡಬಹುದಾದ ಬಾತ್ ಪೌಡರ್ ಸಿದ್ಧವಾಗಿದೆ.
ಈ ಹೋಂ ಮೇಡ್ ಬಾತ್ ಪೌಡರ್ ನ ಈ ರೀತಿ ಬಳಸಿ
ಸ್ನಾನ ಮಾಡುವ ಮೊದಲು, ಈ ಪುಡಿ 2 ರಿಂದ 3 ಟೀ ಚಮಚ ತೆಗೆದು ಒಂದು ಬೌಲ್ ಗೆ ಹಾಕಿ. ಈಗ ಅದಕ್ಕೆ ಸಮಪ್ರಮಾಣದಲ್ಲಿ ಮೊಸರು(Curd) ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ನೀವು ಅದಕ್ಕೆ ನೀರನ್ನು ಸೇರಿಸಬಹುದು.
ಈಗ ಇದನ್ನು ಪೂರ್ತಿ ದೇಹಕ್ಕೆ ಚೆನ್ನಾಗಿ ಹಚ್ಚಿ ಮತ್ತು 5 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಉಜ್ಜಿ ಅದನ್ನು ತೆಗೆದು ಸ್ನಾನ ಮಾಡಿ. ನೀವು ಇದನ್ನು ಸಾಬೂನಿನ ರೂಪದಲ್ಲಿ ಬಳಸಬಹುದು. ಇದರಿಂದ ಉತ್ತಮ ಚರ್ಮವನ್ನು(SKin) ನೀವು ಪಡೆಯಬಹುದು.