Asianet Suvarna News Asianet Suvarna News

Yoga Health : ಜಿಮ್ ನಂತೆ ದೈಹಿಕ ಶಕ್ತಿ ಹೆಚ್ಚಿಸುತ್ತೆ ಈ ಯೋಗಾಸನ

Yogasana Tips in Kannada: ಯೋಗವು ದೇಹಕ್ಕೆ ಬಹಳ ಒಳ್ಳೆಯದು. ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಯೋಗ ಮಾಡುತ್ತದೆ. ಕೆಲ ಯೋಗಗಳನ್ನು ನಿರಂತರವಾಗಿ ಮಾಡುವುದ್ರಿಂದ ದೇಹ ಸದೃಢವಾಗುವ ಜೊತೆಗೆ ಮಾನಸಿಕ ಶಕ್ತಿಯನ್ನೂ ನೀಡುತ್ತದೆ.
 

Yoga For Body Strength
Author
Bangalore, First Published Jun 27, 2022, 6:09 PM IST

ದೇಹ (Body) ವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಶಕ್ತಿಯ ಅಗತ್ಯವಿದೆ. ದೇಹದ ಬಲವನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರ (Food) ದ ಜತೆಗೆ ನಿತ್ಯ ವ್ಯಾಯಾಮ (Exercise) ರೂಢಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಅನೇಕರು ವ್ಯಾಯಾಮದ ಬದಲು ಯೋಗಾಸನದ ಅಭ್ಯಾಸ ಮಾಡ್ತಾರೆ. ಯೋಗದಿಂದಲೂ ವ್ಯಾಯಾಮದ ಫಿಟ್ನೆಸ್ (Fitness) ದೇಹಕ್ಕೆ ಸಿಗುತ್ತಾ ಎಂದು ಕೆಲವರು ಪ್ರಶ್ನೆ ಮಾಡುವುದಿದೆ. ಯಾಕೆಂದ್ರೆ ಯೋಗ (Yoga) ದಲ್ಲಿ ಹೆಚ್ಚು ಬೆವರು ಬರುವುದಿಲ್ಲ. ಹಾಗೆಯೇ ಉಸಿರಾಟ ವೇಗವಾಗಿ ನಡೆಯುವುದಿಲ್ಲ. ಈ ಕಾರಣಕ್ಕೆ ವ್ಯಾಯಾಮದಲ್ಲಿ ಸಿಗುವ ಲಾಭ ಯೋಗದಿಂದ ಸಿಗಲು ಸಾಧ್ಯವಿಲ್ಲವೆಂದು ಕೆಲವರು ಭಾವಿಸಿದ್ದಾರೆ. ಆದ್ರೆ ಇದು ತಪ್ಪು. ವ್ಯಾಯಾಮಕ್ಕಿಂತ ಹೆಚ್ಚು ಲಾಭ ಯೋಗದಿಂದ ಸಿಗುತ್ತದೆ ಎನ್ನಬಹುದು. ಯೋಗ ಬರೀ ದೈಹಿಕ ಆರೋಗ್ಯವನ್ನು ಮಾತ್ರ ಕಾಪಾಡುವುದಿಲ್ಲ. ನಿಮ್ಮ ಫಿಟ್ನೆಸ್ ದಿನಚರಿಯಲ್ಲಿ ಯೋಗದ ಆಸನಗಳನ್ನು ಸೇರಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಯೋಗ ತಜ್ಞರು ಹೇಳುತ್ತಾರೆ. ದೈಹಿಕ ಶಕ್ತಿ ಮತ್ತು ಸಮತೋಲನವನ್ನು ಹೆಚ್ಚಿಸುವಲ್ಲಿ ಯೋಗಾಸನಗಳು ತುಂಬಾ ಪ್ರಯೋಜನಕಾರಿ.

ತಜ್ಞರು ಹೇಳುವಂತೆ ಯೋಗಾಭ್ಯಾಸ ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿಮ್ಮನ್ನು ರೋಗಗಳಿಂದ ರಕ್ಷಿಸುವ ಜೊತೆಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.  ಯೋಗಾಸನಗಳಲ್ಲಿ ಶಕ್ತಿ ತರಬೇತಿ ಮತ್ತು ತೀವ್ರವಾದ ಅಭ್ಯಾಸವನ್ನು ಸೇರಿಸುವುದರಿಂದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಯಾವ ಯೋಗಾಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂದು ನಾವು ಹೇಳ್ತೇವೆ.

ಈ ಬ್ಲಡ್ ಗ್ರೂಪ್‌ನವರನ್ನು ಹೆಚ್ಚು ಕಾಡುತ್ತೆ PANCREAS CANCER

ವೀರಭದ್ರಾಸನ : ವೀರ ಅಂದ್ರೆ ಪೌರುಷ, ವೀರ, ಪರಾಕ್ರಮಿ ಎಂದರ್ಥವಾಗುತ್ತದೆ. ಭದ್ರ ಅಂದ್ರೆ ಉತ್ತಮವಾದ. ಆಸನ ಅಂದ್ರೆ ಭಂಗಿ ಎಂದರ್ಥ. ವೀರಭದ್ರಾಸನ ಯೋಗವು ದೈಹಿಕ ಶಕ್ತಿಯನ್ನು ಉತ್ತೇಜಿಸುವ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ಸೊಂಟ ಮತ್ತು ಭುಜಗಳಿಗೆ ಬಲ ನೀಡುತ್ತದೆ. ಜೊತೆಗೆ ತೋಳುಗಳನ್ನು ಟೋನ್ ಮಾಡುವ ಮೂಲಕ ಎದೆಯನ್ನು ವಿಸ್ತರಿಸುತ್ತದೆ. ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವ ವ್ಯಾಯಾಮಗಳಲ್ಲಿ ಒಂದಾಗಿದೆ. ಎದೆಯ ಸ್ನಾಯುಗಳನ್ನು ಬಲಪಡಿಸಲು ಮತ್ತು ದೈಹಿಕ ಶಕ್ತಿಯನ್ನು ಉತ್ತೇಜಿಸಲು ವೀರಭದ್ರಾಸನ ಯೋಗವನ್ನು ಅಭ್ಯಾಸ ಮಾಡಬೇಕು. ವೀರಭದ್ರಾಸನವನ್ನು ನಿಯಮಿತವಾಗಿ ಮಾಡಿದ್ರೆ ಕೆಲವೇ ದಿನಗಳಲ್ಲಿ ನೀವು ಫಲಿತಾಂಶವನ್ನು ನೋಡ್ಬಹುದು. 

ಬಾಲಾಸನ ಯೋಗ : ಮಗುವಿನ ಭಂಗಿಯನ್ನು ಬಾಲಾಸನ ಎಂದೂ ಕರೆಯುತ್ತಾರೆ. ಇದು ಸೌಮ್ಯವಾದ ವ್ಯಾಯಾಮ ಆಗಿದ್ದರೂ, ಇದು ಇಡೀ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ಅಭ್ಯಾಸವು ದೇಹ ಮತ್ತು ಮನಸ್ಸು ಎರಡರ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.  ಬಾಲಾಸನ ದೇಹವನ್ನು ಉತ್ತಮವಾಗಿ ಹಿಗ್ಗಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸರಿಗೊಳಿಸುತ್ತದೆ. ಬಾಲಾಸನ ಅಭ್ಯಾಸ ಮಾಡುವುದ್ರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.  ಇದು ವಿಶ್ರಾಂತಿಯ ಭಂಗಿಯಾಗಿದೆ. ಇದನ್ನು ಮಾಡುವುದ್ರಿಂದ ಒತ್ತಡ ಕಡಿಮೆಯಾಗುತ್ತದೆ. ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುತ್ತದೆ. ಇದಲ್ಲದೆ ಬಾಲಾಸನ ಮಾಡುವುದ್ರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ ಎಂದು ಯೋಗ ತಜ್ಞರು ಹೇಳ್ತಾರೆ. ಗರ್ಭಿಣಿಯರು ಈ ಆಸನವನ್ನು ಮಾಡಬಾರದು. ಮಂಡಿಯಲ್ಲಿ ನೋವಿರುವವರು ಕೂಡ ಈ ಆಸನದಿಂದ ದೂರವಿರುವುದು ಒಳ್ಳೆಯದು. 

ಮನುಷ್ಯ ನಿದ್ದೆಯೇ ಮಾಡದೆ ಎಷ್ಟು ದಿನ ಬದುಕಬಹುದು ಗೊತ್ತಾ?

ಅಧೋ ಮುಖ ಶ್ವಾನಾಸನ : ಅಧೋ ಮುಖ ಶ್ವಾನಾಸನವನ್ನು ಕೂಡ ಪ್ರತಿ ನಿತ್ಯ ಮಾಡ್ಬೇಕು. ಇದು ತಲೆಯಿಂದ ಪಾದದವರೆಗೆ ದೇಹವನ್ನು ಹಿಗ್ಗಿಸಲು ನೆರವಾಗುತ್ತದೆ. ದೇಹದ ಶಕ್ತಿಯನ್ನು ಹೆಚ್ಚಿಸಲು ಇದು ಪರಿಣಾಮಕಾರಿ ಯೋಗಾಭ್ಯಾಸವೆಂದು ಪರಿಗಣಿಸಲಾಗಿದೆ. ಮಂಡಿರಜ್ಜುಗಳು ಮತ್ತು ಕಾಲುಗಳನ್ನು ಭುಜಗಳಿಗೆ ತೆರೆಯಲು ಮತ್ತು ದೇಹದಾದ್ಯಂತ ರಕ್ತ ಪರಿಚಲನೆಯನ್ನು ಕ್ರಮವಾಗಿ ಇರಿಸಿಕೊಳ್ಳಲು ಈ ಯೋಗವನ್ನು ಅಭ್ಯಾಸ ಮಾಡಬೇಕು. ಇದು ಸ್ವಲ್ಪ ಕಷ್ಟಕರವಾದ ವ್ಯಾಯಾಮವಾಗಿದೆ. ಇದಕ್ಕೆ ಸೂಕ್ತ ತರಬೇತುದಾರರಿಂದ ತರಬೇತಿ ಪಡೆದ್ರೆ ಒಳ್ಳೆಯದು.  
 

Follow Us:
Download App:
  • android
  • ios