ಗರ್ಭಪಾತದ ನಂತರ ಗರ್ಭಿಣಿಯಾಗೋ ಚಾನ್ಸ್ ಕಡಿಮೆಯಾಗುತ್ತಾ?
ಗರ್ಭಪಾತದ ಬಗ್ಗೆ ಯೋಚಿಸುವ ಅನೇಕ ಮಹಿಳೆಯರು ಇದರ ನಂತರ ತಾಯಂದಿರಾಗಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಭಯವನ್ನು ಹೊಂದಿದ್ದಾರೆ. ಅದರ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ನೀವು ಸಹ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಯಸಿದ್ರೆ ಮುಂದೆ ಓದಿ.
ಕೆಲವು ಮಹಿಳೆಯರು ಗರ್ಭಧರಿಸಿದ ನಂತರ ಗರ್ಭಪಾತ (Abortion) ಅನುಭವಿಸುತ್ತಾರೆ ಅಥವಾ ಕೆಲವು ಮಹಿಳೆಯರು ಹಲವು ಕಾರಣಗಳಿಂದಾಗಿ ಅಬಾರ್ಶನ್ ಮಾಡಿಸಿಕೊಳ್ಳಲು ಬಯಸುತ್ತಾರೆ, ಆದರೆ, ಅಬಾರ್ಶನ್ ಅಥವಾ ಮಿಸ್ ಕ್ಯಾರೇಜ್ ನಂತರ ಅವರು ಮತ್ತೆ ಗರ್ಭಧರಿಸಲು ಸಾಧ್ಯವಾಗುತ್ತಾ ಅಥವಾ ಇದು ಗರ್ಭಿಣಿಯಾಗುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಯೂ ಅವರ ಮನಸ್ಸಿನಲ್ಲಿ ಉಳಿದಿರುತ್ತೆ.ಅದರ ಬಗ್ಗೆ ತಿಳಿಯಲು ಮುಂದೆ ಓದಿ.
ಔಷಧಿ (Medices)ಅಥವಾ ಶಸ್ತ್ರಚಿಕಿತ್ಸೆಯೊಂದಿಗೆ ಗರ್ಭಧಾರಣೆಯನ್ನು ತೆಗೆದುಹಾಕೋದನ್ನು ಗರ್ಭಪಾತ ಎಂದು ಕರೆಯಲಾಗುತ್ತೆ. ಗರ್ಭಪಾತವನ್ನು ಹೊಂದುವುದು ಮಹಿಳೆಯ ಗರ್ಭಧರಿಸುವ ಅಥವಾ ಮತ್ತೆ ಗರ್ಭಿಣಿಯಾಗುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರೋದಿಲ್ಲ, ಅಥವಾ ಇದು ಭವಿಷ್ಯದ ಗರ್ಭಧಾರಣೆಯ ತೊಡಕುಗಳ ಅಪಾಯವನ್ನು ಹೆಚ್ಚಿಸೋದಿಲ್ಲ!
ಇದು ಕೆಲವು ಸಂದರ್ಭಗಳಲ್ಲಿ ಮಾತ್ರ ಸಂಭವಿಸುತ್ತೆ.
ಕೆಲವು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇದು ಸಂಭವಿಸುತ್ತೆ, ಇದರಲ್ಲಿ ಮಹಿಳೆ ಮತ್ತೆ ಗರ್ಭಿಣಿಯಾಗಲು(Pregnant) ಸಮಸ್ಯೆಗಳನ್ನು ಎದುರಿಸಬಹುದು ಎಂದು ಡಾಕ್ಟರ್ ಹೇಳುತ್ತಾರೆ. ಇದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಗರ್ಭಾಶಯದ ಒಳಪದರಕ್ಕೆ ಹಾನಿಯಿಂದಾಗಿರಬಹುದು.
ಆಬಾರ್ಶನ್ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೆ ಅದರಿಂದ ಮುಂದೆ ಗರ್ಭಿಣಿಯಾಗೋದು ಕಷ್ಟವಾಗಬಹುದು. ಈ ಸ್ಥಿತಿಯನ್ನು ಅಶರ್ಮನ್ ಸಿಂಡ್ರೋಮ್ ಎಂದು ಕರೆಯಲಾಗುತ್ತೆ, ಇದು ಬಹಳ ಅಪರೂಪ ಮತ್ತು ಶಸ್ತ್ರಚಿಕಿತ್ಸೆಯೊಂದಿ(Surgery) ಚಿಕಿತ್ಸೆ ನೀಡಬಹುದು. ಇದರಲ್ಲಿ, ವೈದ್ಯರು ಗರ್ಭಾಶಯದಿಂದ ಹಾನಿಗೊಳಗಾದ ಅಂಗಾಂಶಗಳನ್ನು ತೆಗೆದುಹಾಕುತ್ತಾರೆ.
ಸೋಂಕು (Infection)ಆಗಬಹುದು
ಶಸ್ತ್ರಚಿಕಿತ್ಸೆಯ ನಂತರ ಮಹಿಳೆಗೆ ಗರ್ಭಾಶಯದಲ್ಲಿ ಸೋಂಕು ತಗುಲಿದ್ರೆ ಮತ್ತು ತಕ್ಷಣ ಚಿಕಿತ್ಸೆ ನೀಡದಿದ್ದರೆ, ಭವಿಷ್ಯದಲ್ಲಿ ಗರ್ಭಧಾರಣೆ ಅಥವಾ ಫರ್ಟಿಲಿಟಿ ಹಾನಿಯ ಸ್ವಲ್ಪ ಅಪಾಯವಿರಬಹುದು ಎಂದು ವೈದ್ಯರು ಹೇಳುತ್ತಾರೆ. ಈ ಸೋಂಕು ಅಂಡಾಶಯ, ಫೆಲೋಪಿಯನ್ ಟ್ಯೂಬ್ಗಳಿಗೆ ಹರಡಬಹುದು ಮತ್ತು ಎಕ್ಟೋಪಿಕ್ ಗರ್ಭಧಾರಣೆ ಅಥವಾ ಬಂಜೆತನದ ಅಪಾಯವನ್ನು ಹೆಚ್ಚಿಸುತ್ತೆ.
ಹೆಚ್ಚಿನ ಗರ್ಭಪಾತ ಪ್ರಕರಣಗಳಲ್ಲಿ, ಅಂತಹ ಸೋಂಕಿನ ಅಪಾಯ ಕಡಿಮೆ ಮಾಡಲು ವೈದ್ಯರು ಗರ್ಭಪಾತಕ್ಕೆ ಮೊದಲು ಆಂಟಿಬಯೋಟಿಕ್ಸ್ ನೀಡುತ್ತಾರೆ. ಗರ್ಭಪಾತದ ನಂತರ ತೀವ್ರ ಹೊಟ್ಟೆ ನೋವು(Stomach pain), ಹೆಚ್ಚಿನ ಜ್ವರ, ರಕ್ತಸ್ರಾವ, ಯೋನಿಯಿಂದ ವಾಸನೆಯ ವಿಸರ್ಜನೆ ಮುಂತಾದ ಯಾವುದೇ ರೋಗಲಕ್ಷಣ ಅನುಭವಿಸಿದ್ರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.
ಇಂಡ್ಯೂಸ್ಡ್ ಗರ್ಭಪಾತ(Indused abortion)
ಗರ್ಭಪಾತ ಎಂದರೆ ಆರಂಭಿಕ ಗರ್ಭಧಾರಣೆಯ ಅಂತ್ಯ ಎಂದು ಹೇಳುತ್ತಾರೆ, ಇದು ಗರ್ಭಪಾತ ಅಥವಾ ಅನಗತ್ಯ ಗರ್ಭಧಾರಣೆಯ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಗರ್ಭಪಾತದಿಂದ ಉಂಟಾಗಬಹುದು. ಇಂಡ್ಯೂಸ್ಡ್ ಗರ್ಭಪಾತವನ್ನು ತೊಡೆದುಹಾಕಲು ಸ್ವಯಂ-ಗರ್ಭಪಾತದ ಪರಿಣಾಮಗಳ ಬಗ್ಗೆ ತಿಳಿಯಬೇಕು.
ಮತ್ತೆ ಗರ್ಭಿಣಿಯಾಗಬಹುದೇ?
ಸಾಮಾನ್ಯ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯ ಅಬಾರ್ಶನ್ ಭವಿಷ್ಯದಲ್ಲಿ ಗರ್ಭಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರೋದಿಲ್ಲ ಅಥವಾ ಇದು ಗರ್ಭಧಾರಣೆಯ ತೊಡಕುಗಳನ್ನು ಹೆಚ್ಚಿಸೋದಿಲ್ಲ ಎಂದು ಡಾಕ್ಟರ್(Doctor) ಹೇಳುತ್ತಾರೆ, ಆದರೆ ಕೆಲವು ಸಂದರ್ಭಗಳು ವಿಭಿನ್ನವಾಗಿರಬಹುದು.
ಮೊದಲನೆಯದಾಗಿ, ರಿಪೀಟೆಡ್ ಸರ್ಜಿಕಲ್ ಅಬಾರ್ಶನ್ (Repeated surgical abortion)ನಿಂದಾಗಿ ಗರ್ಭಾಶಯದ ಒಳ ಪದರವು ತುಂಬಾ ಒರಟಾಗಲು ಕಾರಣವಾಗಬಹುದು, ಇದರಿಂದಾಗಿ ಗರ್ಭಾಶಯಕ್ಕೆ ಹಾನಿಯಾಗಬಹುದು, ಇದು ಬಂಜೆತನಕ್ಕೆ ಕಾರಣವಾಗುತ್ತೆ. ಈ ಬಗ್ಗೆ ಮಹಿಳೆಯರು ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗಿದೆ.
ಪದೇ ಪದೇ ಗರ್ಭಪಾತಕ್ಕೆ ಕಾರಣವೇನು?
ಸರ್ಜಿಕಲ್ ಅಬಾರ್ಶನ್ ತೊಡಕುಗಳು ಗರ್ಭಾಶಯ ಅಥವಾ ಗರ್ಭಕಂಠದಲ್ಲಿ ಸೋಂಕು ಅಥವಾ ಗಾಯಗಳಿಗೆ ಕಾರಣವಾಗಬಹುದು, ಇದು ಗರ್ಭಧಾರಣೆಯ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು ಅಥವಾ ಪ್ರಿ ಟರ್ಮ್ ಡೆಲಿವರಿ(Pre term delivery) ಮತ್ತು ಕಡಿಮೆ ಜನನ ತೂಕದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.
ರಿಪಿಟೇಡ್ ಗರ್ಭಪಾತಗಳು ಪೆಲ್ವಿಕ್ ಸೋಂಕುಗಳಿಗೆ(Pelvic infection) ಕಾರಣವಾಗಬಹುದು, ಅದು ಟ್ಯೂಬ್ ಮತ್ತು ಅಂಡಾಶಯಗಳಿಗೆ ಹರಡಬಹುದು, ಭವಿಷ್ಯದಲ್ಲಿ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತೆ ಅಥವಾ ಟ್ಯೂಬ್ನಲ್ಲಿ ಪ್ರೆಗ್ನನ್ಸಿ ಉಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದನ್ನು ಎಕ್ಟೋಪಿಕ್ ಗರ್ಭಧಾರಣೆ ಎಂದು ಕರೆಯಲಾಗುತ್ತೆ. ಇದಕ್ಕಾಗಿ ಸರಿಯಾದ ಸಮಯದಲ್ಲಿ ಸರಿಯಾದ ಟ್ರೀಟ್ಮೆಂಟ್ ಅತ್ಯಗತ್ಯ.