Asianet Suvarna News Asianet Suvarna News

ಯಾಕೋ ಏನೋ ಮಾಡಿದ್ರೂ ಕೆಮ್ಮು ಹುಷಾರಾಗ್ತಿಲ್ವಾ? ಇಗ್ನೋರ್ ಮಾಡ್ಬೇಡಿ

ರೋಗ ಲಕ್ಷಣಗಳು ಒಂದೇ ಆಗಿದ್ರೂ ರೋಗ ಬೇರೆಯಾಗಿರುತ್ತದೆ. ಅದ್ರಲ್ಲಿ ಕೆಮ್ಮು ಕೂಡ ಒಂದು. ಕೆಮ್ಮು ಟಿಬಿ ಹಾಗೂ ಸಾಮಾನ್ಯ ಸೋಂಕು ಎರಡರಿಂದಲೂ ಕಾಡುತ್ತದೆ. ಅದ್ರಲ್ಲಿ ವ್ಯತ್ಯಾಸ ಕಂಡು ಹಿಡಿದು ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.  
 

Difference Between Tb And Normal Cough
Author
First Published Feb 21, 2023, 5:16 PM IST

ಕೆಮ್ಮು ಒಂದು ಸಾಮಾನ್ಯ ಸಮಸ್ಯೆ. ಜ್ವರ, ನೆಗಡಿಯಾದಾಗ ಅಥವಾ ಹವಾಮಾನ ಏರುಪೇರಾದಾಗ ಕೆಮ್ಮು ಬರುವುದು ಸಹಜ. ಅಂತಹ ಕೆಮ್ಮು ಮಾತ್ರೆ, ಕಷಾಯಗಳಿಂದ ಗುಣಮುಖವಾಗುತ್ತದೆ. ಆದರೆ ಅದೇ ಕೆಮ್ಮು ಬಹಳ ದಿನಗಳ ಕಾಲ ಮುಂದುವರೆದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಅದು ಟಿಬಿ ಅಥವಾ ಕ್ಷಯ ರೋಗದ ಲಕ್ಷಣವೂ ಆಗಿರಬಹುದು. ಕೆಮ್ಮು (Cough) ಟಿಬಿ ಖಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಆದರೆ ಈಗ ಕೊರೊನಾ (Corona) ಆರಂಭವಾದ ಮೇಲೆ ಹೆಚ್ಚಿನ ಜನರು ಮತ್ತೆ ಮತ್ತೆ ಕೆಮ್ಮಿನ ತೊಂದರೆ ಅನುಭವಿಸುತ್ತಿದ್ದಾರೆ. ವಾತಾವರಣದಲ್ಲಿನ ಮಾಲಿನ್ಯ, ಕಲುಷಿತ ಗಾಳಿ, ಧೂಳು ಇವುಗಳಿಂದಲೂ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ಕೆಮ್ಮು ಟಿಬಿ (TB) ಯ ತೊಂದರೆಯಿಂದ ಉಂಟಾಗಿದೆಯೋ ಅಥವಾ ಕೊರೊನಾದ ಪರಿಣಾಮವೋ ಎಂದು ತಿಳಿಯುವುದೇ ಕಷ್ಟವಾಗಿದೆ.

ಕ್ಷಯ ರೋಗದ ಕೆಮ್ಮು ಮತ್ತು ಸಾಮಾನ್ಯ ಕೆಮ್ಮಿನ ನಡುವೆ ಇರುವ ಅಂತರವೇನು? :  ಟಿಬಿ ತೊಂದರೆಯಿಂದ ಉಂಟಾಗುವ ಕೆಮ್ಮು ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಸೋಂಕಿನಿಂದ ಉಂಟಾಗುತ್ತದೆ. ಸಾಮಾನ್ಯ ಕೆಮ್ಮು ಉಸಿರಾಟ (Breathing) ದ ಸೋಂಕಿನಿಂದ ಉಂಟಾಗುತ್ತದೆ. ಎರಡು ವಾರಕ್ಕಿಂತಲೂ ಹೆಚ್ಚು ಸಮಯ ಕೆಮ್ಮು ಮುಂದುವರೆದರೆ ಅದು ಟಿಬಿ ಖಾಯಿಲೆಯೇ ಪ್ರಮುಖ ಲಕ್ಷಣವೇ ಆಗಿದೆ.

ಅಪರಿಚಿತರನ್ನ ನೋಡಿದ ಕೂಡ್ಲೆ ಕೆಲವು ಮಕ್ಕಳು ಅಳೋದ್ಯಾಕೆ?

ಟಿಬಿ ಸೋಂಕಿಗೆ ಪ್ರಮುಖ ಕಾರಣ : 
• ದೇಹದ ಇಮ್ಯೂನ್ ಸಿಸ್ಟಮ್ ದುರ್ಬಲವಾದಾಗ ವ್ಯಕ್ತಿ ಟಿಬಿ ಗೆ ತುತ್ತಾಗುತ್ತಾನೆ.
• ಟಿಬಿ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಿಸಿದಾಗ್ಲೂ ಇದು ಬರುತ್ತದೆ.
• ಕೆಲವೊಮ್ಮೆ ಕೆಟ್ಟ ಆಹಾರ ಪದ್ಧತಿ ಇದಕ್ಕೆ ಕಾರಣವಾಗುತ್ತದೆ.
• ಧೂಮಪಾನದಿಂದ ಟಿಬಿ ಕಾಡುತ್ತದೆ.
• ಕ್ಷಯ, ದೀರ್ಘಕಾಲದ ಖಾಯಿಲೆಗಳು, ಮೂತ್ರಪಿಂಡದ ಖಾಯಿಲೆ ಅಥವಾ ಆರೋಗ್ಯ ಅಸ್ವಸ್ಥವಾಗಿದ್ದಾಗ ಕೂಡ ಟಿಬಿ ಸೋಂಕು ಬಾಧಿಸಬಹುದು.

ಟಿಬಿ ಖಾಯಿಲೆ ಲಕ್ಷಣಗಳು : 
• ಟಿಬಿ ಸೋಂಕಿಗೆ ಒಳಗಾದ ವ್ಯಕ್ತಿಗೆ ತುಂಬ ಆಯಾಸವಾಗುತ್ತೆ. 
• ಹಸಿವಿನ ಕೊರತೆಯಿಂದ ಆಹಾರವನ್ನು ಕಡಿಮೆ ಸೇವಿಸುತ್ತಾನೆ. ಇದರಿಂದ ತೂಕದಲ್ಲಿ ಇಳಿಕೆಯಾಗುತ್ತದೆ.
• ದೇಹಕ್ಕೆ ಶೀತದ ಅನುಭವವಾಗುತ್ತದೆ.
• ಜ್ವರ ಮತ್ತು ರಾತ್ರಿಯ ಸಮಯದಲ್ಲಿ ಮೈ ಬೆವರುತ್ತದೆ.
• ಟಿಬಿ ರೋಗಿ ಕೆಮ್ಮುವಾಗ ರಕ್ತ ಬರುತ್ತದೆ.

ಟಿಬಿ ಖಾಯಿಲೆಗೆ ಚಿಕಿತ್ಸೆ : 
• ಮೊದಲ ಹಂತದಲ್ಲಿ ಬ್ಯಾಕ್ಟೀರಿಯಾ ಶರೀರದಲ್ಲಿ ಹರಡದಂತೆ ಮಾತ್ರೆಗಳನ್ನು ಕೊಡಲಾಗುತ್ತದೆ. 6 ತಿಂಗಳ ಕಾಲ ಔಷಧಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ. ಆರಂಭದ ಹಂತದಲ್ಲಿ ಸೂಕ್ತ ತಪಾಸಣೆ ಮತ್ತು ಸರಿಯಾದ ಔಷಧಗಳ ಸೇವನೆಯಿಂದ ರೋಗಿ ಮತ್ತೆ ಟಿಬಿ ಸೋಂಕಿಗೆ ಒಳಗಾಗುವುದಿಲ್ಲ.
• ಎರಡನೆಯ ಹಂತದಲ್ಲಿ ದೇಹದಲ್ಲಿರುವ ನಿಷ್ಕ್ರಿಯ ಟಿಬಿಗಳನ್ನು ಸಾಯಿಸಲು 8 ರಿಂದ 9 ತಿಂಗಳು ಔಷಧಗಳ ಸೇವನೆ ಮಾಡಬೇಕು.
• ಒಬ್ಬ ವ್ಯಕ್ತಿಗೆ ಮೊದಲ ಹಂತ ಮತ್ತು ಎರಡನೇ ಹಂತಗಳಲ್ಲಿಯೂ ಟಿಬಿ ಖಾಯಿಲೆ ವಾಸಿಯಾಗದೇ ಇದ್ದಲ್ಲಿ ವ್ಯಕ್ತಿ ಮೂರನೇ ಅಥವಾ ನಾಲ್ಕನೇ ಬಾರಿ ಟಿಬಿ ಸೋಂಕಿಗೆ ಒಳಗಾಗುತ್ತಾನೆ. ಅದು ಎಂಡಿಆರ್ ಟಿಬಿ ಅಂದರೆ ಮಲ್ಟಿಡ್ರಗ್ ರೆಸಿಸ್ಟಂಟ್ ಟಿಬಿಯಾಗಿರುತ್ತದೆ.

Inner Wear ಬದಲಿಸಲೂ ಸೋಂಬೇರಿತನವಂತೆ ಜನಕ್ಕೆ, ಬರೋ ಕಾಯಿಲೆ ಒಂದೆರಡಲ್ಲ

ಈ ವಿಷಯದ ಬಗ್ಗೆ ಗಮನವಿರಲಿ : ಎಂಡಿಆರ್ ಟಿಬಿ ಗೆ ಕಟ್ಟುನಿಟ್ಟಿನ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಎಂಡಿಆರ್ ಟಿಬಿ ಗೆ ಒಂದೂವರೆಯಿಂದ ಎರಡು ವರ್ಷಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ. ಹಾಗೊಮ್ಮೆ ಚಿಕಿತ್ಸೆ ನೀಡಿದರೂ ಶೇಕಡಾ 40-50 ರಷ್ಟು ಮಂದಿ ಮಾತ್ರ ಗುಣಮುಖರಾಗುತ್ತಾರೆ. ಹಾಗಾಗಿ ಟಿಬಿ ರೋಗಿಗಳು ಸಾಧ್ಯವಾದಷ್ಟು ಮೊದಲ ಹಂತದಲ್ಲಿಯೇ ಚಿಕಿತ್ಸೆಯನ್ನು ಪಡೆಯಬೇಕು ಮತ್ತು ಚಿಕಿತ್ಸೆಯ ಅವಧಿಯನ್ನು ಪೂರ್ಣಗೊಳಿಸಬೇಕು. ರೋಗದಿಂದ ಬಳಲುತ್ತಿರುವ ವ್ಯಕ್ತಿ ಇನ್ನೊಬ್ಬರ ಜೊತೆ ನಿಕಟ ಸಂಪರ್ಕದಲ್ಲಿ ಇರದಂತೆ ಎಚ್ಚರವಹಿಸಬೇಕು.

Follow Us:
Download App:
  • android
  • ios