MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ದೇವರ ಕೋಣೆಯಲ್ಲಿ ಚಿಕ್ಕ ಮಡಕೆಯಲ್ಲಿ ಈ ಕೆಂಪುಬಟ್ಟೆ, ಕಲ್ಲುಪ್ಪು ಇಡೋದ್ಯಾಕೆ? ಇದಕ್ಕಿದೆ ಹಣದ ನಂಟು

ದೇವರ ಕೋಣೆಯಲ್ಲಿ ಚಿಕ್ಕ ಮಡಕೆಯಲ್ಲಿ ಈ ಕೆಂಪುಬಟ್ಟೆ, ಕಲ್ಲುಪ್ಪು ಇಡೋದ್ಯಾಕೆ? ಇದಕ್ಕಿದೆ ಹಣದ ನಂಟು

Vastu Tips: ಕೆಲವರ ಮನೆಗೆ ಹೋದಾಗ ದೇವರ ಕೋಣೆಯಲ್ಲಿ ಕಲ್ಲುಪ್ಪು, ಕೆಂಪು ಬಟ್ಟೆ ತುಂಬಿದ ಪುಟ್ಟ ಮಣ್ಣಿನ ಮಡಕೆ ಇಟ್ಟಿರುವುದನ್ನು ನೋಡಿರಬಹುದು. ಆಗ "ದೇವರ ಮುಂದೆ ಈ ಮಡಕೆ ಯಾಕಿಟ್ಟಿದ್ದಾರೆ?" ಅನ್ನೋ ಅನುಮಾನ ನಿಮಗೂ ಬಂದಿರಬಹುದು ಅಲ್ವಾ? ಇದು ಕೇವಲ ಸಾಂಪ್ರದಾಯಿಕ ಪದ್ಧತಿಯಲ್ಲ, ಮತ್ತೇ?

2 Min read
Author : Ashwini HR
Published : Sep 17 2026, 01:12 PM IST
Share this Photo Gallery
  • FB
  • TW
  • Linkdin
  • Whatsapp
15
ಪಂಚಭೂತಗಳ ಮಹತ್ವ
Image Credit : roopa0410 Instagram

ಪಂಚಭೂತಗಳ ಮಹತ್ವ

ಪಂಚಭೂತಗಳ ಮಹತ್ವ
ಎಷ್ಟೇ ದುಡಿದರೂ ಕೈಯಲ್ಲಿ ಕಾಸು ಉಳಿಯುತ್ತಿಲ್ಲ, ಅನಗತ್ಯ ಖರ್ಚುಗಳು ಹೆಚ್ಚಾಗುತ್ತಿವೆ ಅಥವಾ ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆ ಎನ್ನುವವರಿಗೆ ಸ್ವಾಮೀಜಿಗಳು ತಿಳಿಸಿದ ಅತ್ಯಂತ ಶಕ್ತಿಶಾಲಿ ಜ್ಯೋತಿಷ್ಯ ಹಾಗೂ ವಾಸ್ತು ಪರಿಹಾರವಿದು. ಈ ಪರಿಹಾರದಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೂ ಧಾರ್ಮಿಕ ಮತ್ತು ಪಂಚಭೂತಗಳ ಮಹತ್ವವಿದೆ.

ಮಣ್ಣಿನ ಮಡಕೆ: ಇದು 'ಪೃಥ್ವಿ ತತ್ವ'ವನ್ನು ಆಕರ್ಷಿಸಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.

ಕಲ್ಲುಪ್ಪು: ಲಕ್ಷ್ಮೀ ಸ್ವರೂಪವಾದ ಕಲ್ಲುಪ್ಪು ಮನೆ ಮತ್ತು ಆದಾಯಕ್ಕೆ ತಗುಲಿರುವ ಕೆಟ್ಟ ದೃಷ್ಟಿ ಹಾಗೂ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ.

ಕೆಂಪು ಬಟ್ಟೆ & ನಾಣ್ಯಗಳು: ಕೆಂಪು ಬಣ್ಣ ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದದ್ದು. ನಾಣ್ಯಗಳು ಹಣದ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು
Image Credit : roopa0410 Instagram

ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು

ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು
ಒಂದು ಸಣ್ಣ ಮಣ್ಣಿನ ಮಡಕೆ
ಅರಿಶಿನ, ಕುಂಕುಮ ಮತ್ತು ಶ್ರೀಗಂಧ
ಜಾವಾದ್ ಪೌಡರ್ (ಪೂಜಾ ಸಾಮಗ್ರಿ ಅಂಗಡಿಯಲ್ಲಿ ಸಿಗುತ್ತದೆ)
ಕಲ್ಲುಪ್ಪು (ದಪ್ಪ ಉಪ್ಪು)
ಒಂದು ಸಣ್ಣ ಕೆಂಪು ಬಟ್ಟೆ
11 ನಾಣ್ಯಗಳು (Coins)
5 ಲವಂಗಗಳು

Related Articles

Related image1
ಕಷ್ಟಪಟ್ಟರೂ ಏನೂ ಸಿಗ್ತಿಲ್ಲ ಅನ್ನೋರು ನಂಬಿಕೆಯಿಂದ ನೀರಿಗೆ ಈ 3 ಪದಾರ್ಥ ಬೆರೆಸಿ ಬಳಸಿದ್ರೆ ಪವಾಡವೇ ನಡೆಯುತ್ತೆ!
Related image2
ಬಾದಾಮಿಯನ್ನು ತಿನ್ನೋಕಷ್ಟೇ ಅಲ್ಲ, ಪರ್ಸ್‌ನಲ್ಲೂ ಇಟ್ಕೋಬೇಕು! ಯಾಕೆ ಗೊತ್ತಾ?
35
ಮಾಡುವ ಸರಳ ವಿಧಾನ
Image Credit : roopa0410 Instagram

ಮಾಡುವ ಸರಳ ವಿಧಾನ

ಮಾಡುವ ಸರಳ ವಿಧಾನ
ಮಡಕೆಯ ಸಿದ್ಧತೆ: ಮಣ್ಣಿನ ಮಡಕೆಯನ್ನು ಚೆನ್ನಾಗಿ ತೊಳೆದು ಒಣಗಿಸಿ. ಅರಿಶಿನ ಮತ್ತು ಶ್ರೀಗಂಧದ ಪೇಸ್ಟ್ ಮಾಡಿ ಮಡಕೆಯ ಹೊರಭಾಗಕ್ಕೆ ಹಚ್ಚಿ, 5 ಕಡೆ ಕುಂಕುಮದ ಬೊಟ್ಟು ಇಡಿ.

ಒಳಗೆ ಹಾಕಬೇಕಾದ ವಸ್ತುಗಳು: ಮಡಕೆಯೊಳಗೆ ಸ್ವಲ್ಪ ಅರಿಶಿನ, ಕುಂಕುಮ, ಸುಗಂಧಭರಿತ ಜಾವಾದ್ ಪೌಡರ್ ಹಾಕಿ, ನಂತರ ಕಾಲು ಭಾಗದಷ್ಟು ಕಲ್ಲುಪ್ಪನ್ನು ತುಂಬಿಸಿ.

11 ನಾಣ್ಯಗಳ ರಹಸ್ಯ: ಒಂದು ಸಣ್ಣ ಕೆಂಪು ಬಟ್ಟೆಯಲ್ಲಿ 11 ನಾಣ್ಯಗಳನ್ನಿಟ್ಟು ಗಂಟು ಕಟ್ಟಿ (ಮಡಚಿ), ಅದನ್ನು ಮಡಕೆಯೊಳಗಿನ ಕಲ್ಲುಪ್ಪಿನ ಮಧ್ಯಭಾಗದಲ್ಲಿಡಿ.

ಲವಂಗದ ಬಳಕೆ: ಆ ಬಟ್ಟೆಯ ಮೇಲೆ ಮತ್ತೆ ಸ್ವಲ್ಪ ಕಲ್ಲುಪ್ಪು ಹಾಕಿ ಮುಚ್ಚಿ, ಅದರ ಮೇಲ್ಭಾಗದಲ್ಲಿ 5 ಲವಂಗಗಳನ್ನು ಇಡಿ.

ಪೂಜೆ: ಈ ಮಡಕೆಯನ್ನು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಫೋಟೋದ ಮುಂದೆ ಇಟ್ಟು ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂವು ಇಟ್ಟು ಧೂಪ-ದೀಪಗಳಿಂದ ಭಕ್ತಿಯಿಂದ ಪೂಜೆ ಮಾಡಿ.

45
ಯಾವಾಗ ಮಾಡಬೇಕು? ನಿರ್ವಹಣೆ ಹೇಗೆ?
Image Credit : roopa0410 Instagram

ಯಾವಾಗ ಮಾಡಬೇಕು? ನಿರ್ವಹಣೆ ಹೇಗೆ?

ಯಾವಾಗ ಮಾಡಬೇಕು? ನಿರ್ವಹಣೆ ಹೇಗೆ?
ಈ ಪರಿಹಾರವನ್ನು ಹುಣ್ಣಿಮೆಯ ದಿನ ಮಾಡುವುದು ಅತ್ಯಂತ ಶ್ರೇಷ್ಠ ಮತ್ತು ಶುಭಫಲ ನೀಡುತ್ತದೆ.

ಪ್ರತಿ ಹುಣ್ಣಿಮೆಗೆ: ಮಡಕೆಯೊಳಗಿರುವ ಕಲ್ಲುಪ್ಪು ಮತ್ತು 5 ಲವಂಗಗಳನ್ನು ಮಾತ್ರ ಬದಲಾಯಿಸಿ (ಹಳೆಯ ಉಪ್ಪನ್ನು ನೀರಿನಲ್ಲಿ ಕರಗಿಸಿ ಹೊರಗೆ ಹಾಕಿ). ಕೆಂಪು ಬಟ್ಟೆಯಲ್ಲಿರುವ 11 ನಾಣ್ಯಗಳು ಹಾಗೆಯೇ ಇರಲಿ.

55
ಸಂಬಳ ಬಂದಾಗ ಮಾಡಬೇಕಾದ ಮುಖ್ಯ ಕೆಲಸ
Image Credit : roopa0410 Instagram

ಸಂಬಳ ಬಂದಾಗ ಮಾಡಬೇಕಾದ ಮುಖ್ಯ ಕೆಲಸ

ಸಂಬಳ ಬಂದಾಗ ಮಾಡಬೇಕಾದ ಮುಖ್ಯ ಕೆಲಸ
ನಿಮಗೆ ಪ್ರತಿ ತಿಂಗಳು ಸಂಬಳ (ಆದಾಯ) ಬಂದಾಗ, ಆ ಹಣವನ್ನು ಮೊದಲು ಈ ಮಡಕೆಯ ಮೇಲಿಟ್ಟು ಲಕ್ಷ್ಮೀದೇವಿಗೆ ನಮಸ್ಕರಿಸಿ. ಕನಿಷ್ಠ ಅರ್ಧ ಗಂಟೆ ಆ ಹಣವನ್ನು ಮಡಕೆಯ ಮೇಲೆಯೇ ಬಿಟ್ಟು ನಂತರ ತೆಗೆದು ಬಳಸಿ. ಹೀಗೆ ಮಾಡುವುದರಿಂದ ಹಣ ಪೋಲಾಗುವುದು ತಪ್ಪುತ್ತದೆ ಮತ್ತು ಅನಗತ್ಯ ಖರ್ಚುಗಳು ಕಡಿಮೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ವಾಸ್ತು ಸಲಹೆಗಳು
ಜ್ಯೋತಿಷ್ಯ
ಹಬ್ಬ
ಜೀವನಶೈಲಿ
 

Latest Videos
Recommended Stories
Recommended image1
ಮನೆಯ ಕಿಟಕಿಗಳು ಯಾವಾಗ್ಲೂ ಮುಚ್ಚಿಯೇ ಇರುತ್ತಾ? ಸಮಸ್ಯೆ ಮುಗಿಯೋದೆ ಇಲ್ಲ ನೋಡಿ
Recommended image2
ಅದೃಷ್ಟ ಬದಲಾಯಿಸುವ ಮಾಡರ್ನ್ ವಾಸ್ತು ಸಲಹೆಗಳು; ಮನೆಯೊಳಗಿರಲಿ ಪಂಚಭೂತಗಳ ಸಮತೋಲನತೆ
Recommended image3
Promotion ಮತ್ತು Increment ಎರಡೂ ಬೇಕಾ? ಉದ್ಯೋಗದಲ್ಲಿ ಪ್ರಗತಿಗಾಗಿ ಈ ಪರಿಹಾರ ಮಾಡಿ
Related Stories
Recommended image1
ಕಷ್ಟಪಟ್ಟರೂ ಏನೂ ಸಿಗ್ತಿಲ್ಲ ಅನ್ನೋರು ನಂಬಿಕೆಯಿಂದ ನೀರಿಗೆ ಈ 3 ಪದಾರ್ಥ ಬೆರೆಸಿ ಬಳಸಿದ್ರೆ ಪವಾಡವೇ ನಡೆಯುತ್ತೆ!
Recommended image2
ಬಾದಾಮಿಯನ್ನು ತಿನ್ನೋಕಷ್ಟೇ ಅಲ್ಲ, ಪರ್ಸ್‌ನಲ್ಲೂ ಇಟ್ಕೋಬೇಕು! ಯಾಕೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved