ಭಾನುವಾರ, ಏಕಾದಶಿಯಂದು ತುಳಸಿಗೆ ನೀರು ಹಾಕಬಾರದೇಕೆ? ಈ ನಾಲ್ಕು ತಪ್ಪನ್ನು ಎಂದಿಗೂ ಮಾಡಬೇಡಿ
ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದಿರುವ ತುಳಸಿ ಗಿಡದ ಪೂಜೆ ಮತ್ತು ಆರೈಕೆಯಲ್ಲಿ ನಾವು ತಿಳಿಯದೆ ಮಾಡುವ ಕೆಲವು ತಪ್ಪುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ರವಿವಾರ, ಏಕಾದಶಿಯಂದು ನೀರು ಹಾಕದಿರುವುದು, ಉಗುರಿನಿಂದ ಎಲೆ ಕೀಳದಿರುವುದು ಸೇರಿದಂತೆ ಪ್ರಮುಖ ನಾಲ್ಕು ನಿಯಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ತುಳಸಿಗೆ ವಿಶೇಷ ಸ್ಥಾನ
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನ ಕಲ್ಪಿಸಲಾಗಗಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲರ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ಪ್ರತಿ ನಿತ್ಯವೂ ತುಳಸಿಗೆ ಪೂಜೆ ಮಾಡುವುದು ಇದೆ. ತುಳಸಿಗಾಗಿಯೇ ದೀಪಾವಳಿ ಬಳಿಕ ಹಬ್ಬವನ್ನೂ ಮಾಡುವುದು, ಕಾರ್ತಿಕ ಮಾಸದಲ್ಲಿ ಅದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುವುದೂ ಇದೆ. ತುಳಸಿ ಒಣಗದಂತೆ ನೋಡಿಕೊಳ್ಳಲಾಗುವುದು. ಒಣಗುತ್ತಿರುವ ತುಳಸಿಯು ಹಲವಾರು ಕೆಟ್ಟ ಸೂಚನೆಗಳನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ.
ಸಮಸ್ಯೆ ಮುಗಿಯುತ್ತಿಲ್ಲವೆ?
ಧಾರ್ಮಿಕ ಭಾವನೆಯಿಂದ ಮಾತ್ರವಲ್ಲದೇ, ತುಳಸಿಯೂ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಚಿಕ್ಕ ಪುಟ್ಟ ಶೀತ ನೆಗಡಿಯಿಂದ ಹಿಡಿದು ಹಲವಾರು ಮಾರಣಾಂತಿಕ ಕಾಯಿಲೆಗಳವರೆಗೆ ತುಳಸಿಯ ಎಲೆಗಳಿಂದ ತಯಾರಿಸಿರುವ ಔಷಧಗಳನ್ನು ಸೇವನೆ ಮಾಡುವುದು ಇದೆ. ತುಳಸಿ ಮನೆಯಲ್ಲಿ ಇದ್ದರೂ, ಸಮಸ್ಯೆಗಳು ನಿಮಗೆ ಮುಗಿಯುತ್ತಲೇ ಇಲ್ಲವೆ, ಸದಾ ಅನಾರೋಗ್ಯ ಉಂಟಾಗುತ್ತಿದೆಯೆ? ಹಾಗಿದ್ದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ನೀವು ಈ ನಾಲ್ಕು ತಪ್ಪುಗಳನ್ನು ಮಾಡುತ್ತಿರುವಿರಿ.
ರವಿವಾರ, ಏಕಾದಶಿಗೆ ನೀರು ಬೇಡ
ಮೊದಲನೆಯದಾಗಿ, ತುಳಸಿಗೆ ರವಿವಾರ ಮತ್ತು ಏಕಾದಶಿಯಂತೆ ನೀರನ್ನು ಹಾಕಬಾರದು. ಈ ದಿನಗಳಲ್ಲಿ ತುಳಸಿಯು ನಿರ್ಜಲ ವೃತ ಅಂದರೆ ಜಲರಹಿತವಾಗಿ ಇರಬೇಕು ಎನ್ನುತ್ತದೆ ಶಾಸ್ತ್ರ. ಪೂಜೆ ಮಾಡಬಹುದು, ದೀಪವನ್ನು ಹಚ್ಚಬಹುದು. ಆದರೆ ಈ ದಿನಗಳಂದು ನೀರು ಹಾಕಬಾರದು.
ಉಗುರಿನಿಂದ ಕೀಳಬೇಡಿ
ತುಳಸಿಯನ್ನು ಯಾವತ್ತಿಗೂ ಉಗುರಿನಿಂದ ಕೀಳಬಾರದು. ಇದು ಅಪಶಕುನ ಎನ್ನಲಾಗುತ್ತದೆ. ಆದ್ದರಿಂದ ನಿಧಾನವಾಗಿ ಬೆರಳಿನ ಸಹಾಯದಿಂದ ಎಲೆಯನ್ನು ಕೀಳಬೇಕು. ಸೂರ್ಯಾಸ್ತದ ಬಳಿಕ ಯಾವುದೇ ಕಾರಣಕ್ಕೂ ಎಲೆಯನ್ನು ಕೀಳಬಾರದು.
ಕೊಳಕು ಇರಬಾರದು
ತುಳಸಿಯ ಸಮೀಪ, ಚಪ್ಪಲಿ, ಶೂಸ್, ಕಸಕಡ್ಡಿ, ಪೊರಕೆ ಸೇರಿದಂತೆ ಯಾವುದೇ ಕಸಗಳನ್ನು ಇಡಬಾರದು. ತುಳಸಿಯ ಸಮೀಪ ಸದಾ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
ತುಳಸಿ ಕಸ್ತ್ರಗಳನ್ನು ಬಿಡಬೇಡಿ
ತುಳಸಿಯ ಕಸ್ತ್ರಗಳನ್ನು ಅಂದರೆ ಹೂವುಗಳನ್ನು ಹಾಗೆಯೇ ಬಿಡಬಾರದು. ಅದನ್ನು ಕತ್ತರಿಸಿ ವಿಷ್ಣು ಅಥವಾ ಸಾಲಿಗ್ರಾಮಕ್ಕೆ ಹಾಕಿ.

