Karna Serial: ಅಮ್ಮ ಇರಬೇಕು ಅನ್ನೋದು ಇದಕ್ಕೆ ನೋಡಿ: ಮಗ ಕರ್ಣನನ್ನು ಉಳಿಸಿದ ಮಾಲತಿ
ರಮೇಶ್ ರೂಪಿಸಿದ್ದ ಮರು ಮಾಂಗಲ್ಯಧಾರಣೆ ಸಂಚಿನಿಂದ ಕರ್ಣ ಮತ್ತು ನಿತ್ಯಾ ಸಂಕಷ್ಟಕ್ಕೆ ಸಿಲುಕಿದ್ದರು. ಈ ಅಪಾಯದಿಂದ ಮಗನನ್ನು ಪಾರು ಮಾಡಿದ್ದಾಳೆ. ಅಷ್ಟರಲ್ಲಿ ನಿಧಿ, ನಿತ್ಯಾಳ ಕೊರಳಿಗೆ ತಾಳಿ ಹಾಕುವ ಮೂಲಕ ಕರ್ಣನನ್ನು ದೊಡ್ಡ ಗಂಡಾಂತರದಿಂದ ಪಾರುಮಾಡುತ್ತಾಳೆ.

ಕರ್ಣ ಸೀರಿಯಲ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್‌ನ ಬುಧವಾರದ ಸಂಚಿಕೆಯ ನೋಡುಗರನ್ನು ಒಂದು ಕ್ಷಣ ಭಾವುಕರನ್ನಾಗಿ ಮಾಡಿತು. ಸೀರಿಯಲ್ ನೋಡಿದ ವೀಕ್ಷಕರು, ಜೊತೆಯಲ್ಲಿ ಅಮ್ಮ ಇದ್ರೆ ನೂರು ಆನೆ ಬಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ತಾಯಿ ಮಾಲತಿ ಅಪಾಯದ ಸುಳಿಯಲ್ಲಿ ಸಿಲುಕಿದ್ದ ಕರ್ಣನನ್ನು ರಕ್ಷಣೆ ಮಾಡಿದ್ದಾರೆ.
ಮರು ಮಾಂಗಲ್ಯಧಾರಣೆ
ಕರ್ಣ ಮತ್ತು ನಿತ್ಯಾ ಮದುವೆಯಾಗಿಲ್ಲ ಅನ್ನೋ ಸತ್ಯ ತಾಯಿ ಮಾಲತಿ, ನಿಧಿಗೆ ಮಾತ್ರ ಗೊತ್ತಿದೆ. ಈ ಬಗ್ಗೆ ಅನುಮಾನ ಬಂದ ಹಿನ್ನೆಲೆ ಉಪಾಯವಾಗಿ ನಿತ್ಯಾ ಕೊರಳಲ್ಲಿದ್ದ ತಾಳಿಯನ್ನು ಸಂಜಯ್ ಕತ್ತರಿಸಿದ್ದನು. ಮತ್ತೊಮ್ಮೆ ಎಲ್ಲರ ಮುಂದೆ ಮಾಂಗಲ್ಯಧಾರಣೆ ಮಾಡುವ ಸನ್ನಿವೇಶವನ್ನು ರಮೇಶ್ ಸೃಷ್ಟಿಸಿದ್ದನು. ಇದರಿಂದ ಕರ್ಣ, ನಿಧಿ ಮತ್ತು ನಿತ್ಯಾ ಸಂಕಷ್ಟದಲ್ಲಿ ಸಿಲುಕಿದ್ದರು.
ರಮೇಶ್‌ನ ಕುತಂತ್ರ
ಈ ಸಂಕಷ್ಟದಿಂದ ಪಾರಾಗಲು ಮೂವರೊಂದಿಗೆ ಮಾಲತಿ ಬೇರೆ ಬೇರೆ ಪ್ಲಾನ್ ಮಾಡಿ ಫೇಲ್ ಆಗಿದ್ದರು. ಕೊನೆಗೆ ಮಾಲತಿಯೇ ಗಂಡ ರೂಪಿಸಿದ್ದ ಸಂಚಿನಿಂದ ಕರ್ಣ ಮತ್ತು ನಿತ್ಯಳನ್ನು ಪಾರು ಮಾಡಿದ್ದಾಳೆ. ಹೊಟ್ಟೆನೋವು ಅಂತ ಸಬೂಬು ಹೇಳಿ ನಿತ್ಯಾ-ಕರ್ಣ ಮಾಂಗಲ್ಯಧಾರಣೆ ಶಾಸ್ತ್ರದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಪುರೋಹಿತರು ಸಹ ರಮೇಶ್‌ನ ಮಾತು ಕೇಳಿ ಭಯ ಹುಟ್ಟಿಸಿದ್ದರಿಂದ ಅಜ್ಜಿಯಂದಿರು ಮಾಂಗಲ್ಯಧಾರಣೆ ಆಗಲಿ ಎಂದು ಒತ್ತಾಯ ಮಾಡಿದ್ದರು.
ಕಣ್ಣು ಮಿಟುಕುವಷ್ಟರಲ್ಲಿ ನಿತ್ಯಾ ಕೊರಳಲ್ಲಿ ತಾಯಿ
ಇದರಿಂದ ಹೊಟ್ಟೆ ನೋವು ಎಂದು ಹೇಳುತ್ತಲೇ ಹಸೆಮಣೆ ಮೇಲೆ ನಿತ್ಯಾ ಕುಳಿತಿದ್ದಳು. ಕರ್ಣ ಸಹ ತಾಳಿ ಹಿಡಿದುಕೊಂಡು ಕುಳಿತಿರುತ್ತಾನೆ. ಇನ್ನೇನು ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಎಲ್ಲರ ಗಮನ ಬೇರೆಡೆ ಸೆಳೆಯಲು ಮಾಲತಿ ಸಕ್ಸಸ್ ಆಗುತ್ತಾಳೆ. ಅಷ್ಟರಲ್ಲಿಯೇ ಕರ್ಣನ ಕೈಯಲ್ಲಿದ್ದ ತಾಳಿಯನ್ನು ನಿಧಿ ತೆಗೆದುಕೊಂಡು ನಿತ್ಯಾ ಕೊರಳಿಗೆ ಹಾಕುತ್ತಾಳೆ.
ಇದನ್ನೂ ಓದಿ: Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?
ಅಮ್ಮ ಜೊತೆಯಲ್ಲಿದ್ರೆ ನೂರು ಆನೆ ಬಲ
ಮಗ ಕರ್ಣನ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ ಎಂಬ ಆತಂಕದಲ್ಲಿ ಮಾಲತಿ, ಕೋಪಿಷ್ಠ ಗಂಡ ರಮೇಶ್ ಮೇಲೆ ಬಿಸಿನೀರು ಚೆಲ್ಲುತ್ತಾಳೆ. ಇದರಿಂದ ಎಲ್ಲರ ಗಮನ ರಮೇಶ್‌ನತ್ತ ಹೋಗುತ್ತದೆ. ಅಷ್ಟರಲ್ಲಿ ನಿತ್ಯಾ ಕೊರಳಲ್ಲಿ ಮಾಂಗಲ್ಯ ಸೇರುತ್ತದೆ. ತಾಳಿ ಕಟ್ಟೋದು ನೋಡಲಿಲ್ಲ ಎಂಬ ಕೋಪಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಲು ರಮೇಶ್ ಮುಂದಾಗುತ್ತಾನೆ.
ಈ ದೃಶ್ಯ ನೋಡಿದ ವೀಕ್ಷಕರು ಅಮ್ಮ ಜೊತೆಯಲ್ಲಿದ್ರೆ ಆಕೆ ತನ್ನ ಮಕ್ಕಳಿಗೆ ತೊಂದರೆ ಆಗಲು ಬಿಡಲ್ಲ. ಗಂಡನಿಗೆ ನೋವಾದ್ರೂ ಮಗನನ್ನು ರಕ್ಷಿಸಿದ ಮಾಲತಿಗೆ ವೀಕ್ಷಕರು ಫಿದಾ ಆಗಿದ್ದಾರೆ.
ಇದನ್ನೂ ಓದಿ: Karna Kannada Serial: ತೇಜಸ್, ನಿತ್ಯಾ ಮುಖಾಮುಖಿ; ಇನ್ನು ಕರ್ಣನಿಗೆ ಉಳಿಗಾಲವೂ ಇಲ್ಲ, ನೆಮ್ಮದಿಯೂ ಇಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

