- Home
- Entertainment
- TV Talk
- ಜ್ಯೋತಿಷಿ ಹೇಳಿದ್ದಕ್ಕೆ ಜೀವನದ ದಾರಿ ಬದಲಿಸಿದ Mahanati Show ಗಗನಾ; ರಕ್ಷಿತಾ ಪ್ರೇಮ್, ವಿಜಯ್ ಶಾಕ್
ಜ್ಯೋತಿಷಿ ಹೇಳಿದ್ದಕ್ಕೆ ಜೀವನದ ದಾರಿ ಬದಲಿಸಿದ Mahanati Show ಗಗನಾ; ರಕ್ಷಿತಾ ಪ್ರೇಮ್, ವಿಜಯ್ ಶಾಕ್
Mahanati Show Gagana Bhari News: ಸಿನಿಮಾ ಕ್ಷೇತ್ರಕ್ಕೂ ಜ್ಯೋತಿಷ್ಯಕ್ಕೂ ನಂಟಿದೆ. ಜ್ಯೋತಿಷಿ ಹೇಳಿದರು ಎಂದು ಸಿನಿಮಾ ನಟ-ನಟಿಯರು ಹೆಸರು ಬದಲಾಯಿಸಿಕೊಂಡ ಉದಾಹರಣೆ ಇದೆ, ಸಿನಿಮಾದಿಂದ ದೂರ ಇದ್ದ ಉದಾಹರಣೆಯಿದೆ. ಈಗ ಐಟಿ ಕಂಪೆನಿ ಉದ್ಯೋಗ ಬಿಟ್ಟ ಉದಾಹರಣೆ ಕೂಡ ಇದೆ.

ರಶ್ಮಿಕಾ ಮಂದಣ್ಣ ಜ್ಯೋತಿಷ್ಯ ಕೇಳಿಸಿದ್ರು
ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಗೋಪಾಲ್ ಹೇಳುವಂತೆ, ಇವರ ಮಾತು ಕೇಳಿಯೇ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಂಡರಂತೆ. ವಿಜಯ್ ದೇವರಕೊಂಡ ಜೊತೆ ಡಿವೋರ್ಸ್ ಆಗುತ್ತದೆ, ಲವ್ ಬೇಡ ಎಂದು ಹೇಳಿದ್ದಾರಂತೆ. ಆದರೆ ರಶ್ಮಿಕಾ, ವಿಜಯ್ ಇಬ್ಬರೂ ಫೆಬ್ರವರಿ 2026ರಲ್ಲಿ ಮದುವೆ ಆಗಲು ರೆಡಿಯಾಗಿದ್ದಾರೆ ಎಂಬ ವದಂತಿಯಿದೆ.
7 ವರ್ಷ ಸಿನಿಮಾದಿಂದ ದೂರವಿದ್ದ ಕೋಮಲ್
ಜ್ಯೋತಿಷಿ ಹೇಳಿದರು, ಟೈಮ್ ಸರಿ ಇಲ್ಲ ಎಂದು ನಟ ಕೋಮಲ್ ಕೂಡ ಏಳು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಇದ್ದರು. ನಟಿ ಹರಿಪ್ರಿಯಾ, ಬಿಗ್ ಬಾಸ್ ರಿಷಾ ಗೌಡ ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೀಗೆ ಎಷ್ಟೋ ನಟ-ನಟಿಯರು ಜ್ಯೋತಿಷಿ ಮಾತು ಕೇಳಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿ
ಈಗ ಮಹಾನಟಿ ರಿಯಾಲಿಟಿ ಶೋ ಖ್ಯಾತಿಯ ಗಗನಾ ಭಾರಿ ಕೂಡ ಜ್ಯೋತಿಷಿ ಮಾತು ಕೇಳಿದ್ದಾರೆ. ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ಗಗನಾ ಅವರು ತಮ್ಮ ಮುಗ್ಧ ಮಾತುಗಳಿಂದಲೇ ಜನರ ಗಮನವನ್ನು ಸೆಳೆದಿದ್ದರು. ಆಮೇಲೆ ಅವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಗಗನಾ ಹಾಗೂ ಗಿಲ್ಲಿ ನಟ ಅವರ ಕಾಮಿಡಿ, ಬಾಂಡಿಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಐಟಿ ಉದ್ಯೋಗಕ್ಕೆ ಗುಡ್‌ಬೈ
ಅಂದಹಾಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿಯೇ ಜ್ಯೋತಿಷಿ ಹೇಳಿದರು ಎಂದು ಐಟಿ ಉದ್ಯೋಗಕ್ಕೆ ಗುಡ್‌ಬೈ ಹೇಳಿದೆ ಎಂದು ಗಗನಾ ಹೇಳಿದ್ದರು. ಆ ಮಾತು ಕೇಳಿ ನಟಿ ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ ಕೂಡ ಶಾಕ್ ಆಗಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಜ್ಯೋತಿಷ್ಯದ ಬಗ್ಗೆ ಗಗನಾ ಏನಂತಾರೆ?
“ಜ್ಯೋತಿಷ್ಯ ಎನ್ನೋದು ಮೂಢನಂಬಿಕೆ ಅಲ್ಲ, ಇದೊಂದು ಪ್ರಿಕಾಶನ್ಸ್ ಅಷ್ಟೇ. ಮಳೆ ಬರತ್ತೆ ಎಂದು ಗೊತ್ತಾದರೆ ಛತ್ರಿ ತಗೊಂಡು ಹೋಗಬಹುದು ಅಲ್ವಾ? ಹಾಗೆ ಇದು. ಕೆಲವರಿಗೆ ಮದುವೆ ಆಗೋಕೆ ಹುಡುಗಿ, ಹುಡುಗ ಸಿಕ್ಕಿಲ್ಲ ಎನ್ನೋ ಚಿಂತೆ, ಇನ್ನೂ ಕೆಲವರಿಗೆ ಮಕ್ಕಳಾಗತ್ತಾ ಎನ್ನೋ ಚಿಂತೆ, ಉದ್ಯೋಗ, ಮುಂದಿನ ಜೀವನ ಹೀಗೆ ಸಾಕಷ್ಟು ಗೊಂದಲಗಳು ಇರುತ್ತವೆ, ಅದಿಕ್ಕೆ ಜ್ಯೋತಿಷ್ಯ ಸಲಹೆ ಕೊಡುವುದು” ಎಂದು ಗಗನಾ ಹೇಳಿರುವ ವಿಡಿಯೋ ಈಗ ವೈರಲ್ ಆಗ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

