ಇನ್ನೇನು ಬಿಗ್ ಬಾಸ್ ಮುಗಿಯುವ ಹಂತಕ್ಕೆ ಬಂದಿದೆ. ಯಾರು ವಿನ್ನರ್, ಯಾರು ರನ್ನರ್ ಅಪ್‌, ಯಾರಿಗೆ ಮೂರನೆಯ ಸ್ಥಾನ ಎಂಬುದನ್ನಷ್ಟೇ ತಿಳಿಯುವ ಕುತೂಹಲ ಹಲವು ಸೀರಿಯಲ್‌ ಪ್ರಿಯರಿಗೆ (Serials) ಇದೆ. ಕಾರಣ, ಅವರಿಗೆ ಬಿಗ್‌ ಬಾಸ್‌ಗಿಂತ ಸೀರಿಯಲ್ ಕಥೆಗಳೇ ಇಷ್ಟ. ಅಂಥವರಿಗೆ ಈ ಸ್ಟೋರಿ..

ಬಿಗ್ ಬಾಸ್ ಬಳಿ ಈ ಸೀರಿಯಲ್ ಬರಲಿದೆ..!

ಇನ್ನೇನು ಬಿಗ್ ಬಾಸ್ (Bigg Boss Kannada) ಮುಗಿಯುವ ಹಂತಕ್ಕೆ ಬಂದಿದೆ. ಯಾರು ವಿನ್ನರ್, ಯಾರು ರನ್ನರ್ ಅಪ್‌, ಯಾರಿಗೆ ಮೂರನೆಯ ಸ್ಥಾನ ಎಂಬುದನ್ನಷ್ಟೇ ತಿಳಿಯುವ ಕುತೂಹಲ ಹಲವು ಸೀರಿಯಲ್‌ ಪ್ರಿಯರಿಗೆ (Serials) ಇದೆ. ಕಾರಣ, ಅವರಿಗೆ ಬಿಗ್‌ ಬಾಸ್‌ಗಿಂತ ಸೀರಿಯಲ್ ಕಥೆಗಳೇ ಇಷ್ಟ. ಅಂತಹವರಿಗೆ ಇದು ಹೊಸ ಹಾಗೂ ಎಕ್ಸೈಟಿಂಗ್ ಸುದ್ದಿ.. ಹೌದು, ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಮುಗಿದ ತಕ್ಷಣ ಬರುವ ಧಾರಾವಾಹಿ ಯಾವುದು ಎಂಬ ಪ್ರಶ್ನೆಗೆ ಒಂದು ಉತ್ತರ ಸಿಕ್ಕಿದೆ. ಅದು 'ರಾಣಿ'..

ಯಾವ ಧಾರಾವಾಹಿ?

'ಕೃಷ್ಣ ಸುಂದರಿ' ಹಾಗೂ 'ಮುದ್ದು ಮಣಿಗಳು' ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಐಶ್ವರ್ಯಾ ಅವರ ಹೊಸ ಧಾರಾವಾಹಿ ಇದು. 'ರಾಣಿ' ಹೆಸರಿನ ಈ ಧಾರಾವಾಹಿಯಲ್ಲಿ ಧನ್ವಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. 'ಜೈಲಿನ ಕೈದಿಯೊಬ್ಬಳಿಗೆ ಹುಟ್ಟಿದ ಮಗುವಿನ ಕಥೆ ಇದು..' ಎಂಬುದು ಪ್ರೊಮೋ ನೋಡಿದರೇ ಗೊತ್ತಾಗುತ್ತದೆ. ಬಿಳಿ ಸೀರೆ ಉಟ್ಟು ಜೈಲಿನಲ್ಲಿ ಅಡುಗೆ ಮಾಡುತ್ತಿರುವ ಹೆಂಗಸೊಬ್ಬಳು, ತನ್ನ ಮಗುವನ್ನು ನೋಡಿ ಖುಷಿ ಪಡುವ, ಕಣ್ಣೀರು ಸುರಿಸುವ ಪ್ರೋಮೋ ಕಲರ್ಸ್ ಕನ್ನಡದ ಅಧಿಕೃತ ಪೇಜ್‌ನಲ್ಲಿ ಬಿಡುಗಡೆ ಆಗಿದೆ. ಹಲವರು ಈ ಪ್ರೋಮೋ ವಿಭಿನ್ನವಾಗಿದೆ ಎಂಬ ಕಾಮೆಂಟ್ ಹಾಕಿದ್ದಾರೆ.

ಸದ್ಯಕ್ಕೆ ಬಿಗ್ ಬಾಸ್ ನೋಡಿ..

ಒಟ್ಟಿನಲ್ಲಿ, ಬಿಗ್ ಬಾಸ್ ಮುಗಿದ ತಕ್ಷಣ ಶುರುವಾಗಲಿರುವ ಸೀರಿಯಲ್‌ ಯಾವುದು ಎಂಬುದಕ್ಕೆ 'ರಾಣಿ' ಒಂಉ ಉತ್ತರವಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಕಲರ್ಸ್ ಕನ್ನಡವು ಇನ್ನೂ ಹೆಚ್ಚಿನ ಪ್ರೋಮೋಗಳನ್ನು ಬಿಡುಗಡೆ ಮಾಡುವ ಮೂಲಕ ಸೀರಿಯಲ್ ಪ್ರಿಯರನ್ನು ಕುತೂಹಲವನ್ನು ತಣಿಸುವ ಕೆಲಸ ಮಾಡಲಿರುವು ಖಂಡಿತ. ಸರಿ, ಇನ್ನೇನು.. ಈಗ ಬಿಗ್ ಬಾಸ್ ನೋಡಿ ಎಂಜಾಯ್ ಮಾಡಿ.. ಬರಲಿರುವ ಸೀರಿಯಲ್‌ಗೆ ಕುತೂಹಲದಿಂದ ಕಾಯುತ್ತಾ ಇರಿ..

View post on Instagram