ಅಕ್ಕ ನಿನ್ ಗಂಡ್ ಹೆಂಗಿರಬೇಕು? ಶಂಕ್ರಣ್ಣಂಗೆ ಇರ್ಬೇಕೆಂದ್ರು ಸೀರಿಯಲ್ ನೋಡುವ ಲೇಡಿಸ್!
'ಅಣ್ಣಯ್ಯ' ಧಾರಾವಾಹಿಯ ಶಂಕರಣ್ಣ ಪಾತ್ರವು ಮಹಿಳಾ ವೀಕ್ಷಕರ ಮನಗೆದ್ದಿದೆ. ಆರಂಭದಲ್ಲಿ ಕುಡುಕನಾಗಿದ್ದ ಈ ಪಾತ್ರವು, ಪತ್ನಿ ಶಾರದಮ್ಮ ವಾಪಸ್ ಬಂದ ನಂತರ ಬದಲಾಗಿ, ಆಕೆಯ ಮೇಲಿನ ಪ್ರೀತಿ ಮತ್ತು ಕಾಳಜಿಯಿಂದಾಗಿ 'ಗಂಡ ಎಂದರೆ ಹೀಗಿರಬೇಕು' ಎಂದು ಹೆಂಗಳೆಯರು ಮಾತನಾಡುವಂತೆ ಮಾಡಿದೆ.

ಅಕ್ಕ ನಿನ್ನ ಗಂಡ ಹೆಂಗಿರಬೇಕು?
ಮದುವೆ ವಯಸ್ಸಿಗೆ ಬಂದ ಯುವತಿಗೆ ನಿನ್ನ ಕನಸಿನ ರಾಜಕುಮಾರ ಹೇಗಿರಬೇಕೆಂದು ಕೇಳಿದ್ರೆ ಆಕೆ ನಾಚಿಕೊಂಡು ಹಾಗೆ, ಹೀಗೆ ಅಂತ ಹೇಳ್ತಾಳೆ. ಇದನ್ನೇ ನಾದಬ್ರಹ್ಮ ಹಂಸಲೇಖ ಅವರು ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ವಿವರವಾಗಿ ಹಾಡಿನ ಮೂಲಕ ಹೇಳಿದ್ದಾರೆ. ಇಂದಿಗೂ ಈ ಸಿನಿಮಾದ "ಅಕ್ಕ ನಿನ್ನ ಗಂಡ ಹೆಂಗಿರಬೇಕು" ಎಂಬ ಹಾಡು ವೈರಲ್ ಆಗ್ತಿರುತ್ತದೆ.
ಅವನು ನನ್ನೇ ನೋಡಬೇಕು
ಈ ಹಾಡಿನಲ್ಲಿ ಮದುವೆಯಾಗುವ ಗಂಡ ಶ್ರೀರಾಮಚಂದ್ರನಂತೆ, ಬೆ*ತ್ತಲೆ ಸಿನಿಮಾ ನೋಡಿರಬಾರದು, ಮೊದಲ ಬೆಸುಗೆ ನನ್ನೊಂದಿಗೆ ಆಗಿರಬೇಕೆಂದು ಹೇಳಲಾಗುತ್ತದೆ. ಇನ್ನು 'ಮೊಗ್ಗಿನ ಮನಸ್ಸು' ಸಿನಿಮಾದ "ನನಗೂ ಒಬ್ಬ ಗೆಳೆಯ ಬೇಕು" ಎಂದು ಜಯಂತ್ ಕಾಯ್ಕಿಣಿ ಅವರು ತಮ್ಮ ಲೇಖನದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಕಾಡುವಂತಹ ಗೆಳೆಯಬೇಕು, ಎಲ್ಲಾರು ಜಾತ್ರೆಯಲ್ಲಿ ತೇರನ್ನೆ ನೋಡುವಾಗ, ಅವನು ನನ್ನೇ ನೋಡಬೇಕು ಎಂಬ ಸಾಲುಗಳು ಈ ಹಾಡಿನಲ್ಲಿವೆ.
ಶಿವು ತಂದೆಯ ಪಾತ್ರವೇ ಶಂಕರಣ್ಣ
ಇದೀಗ ಸೀರಿಯಲ್ ನೋಡುವ ಹೆಂಗಳೆಯರು ಮಾತ್ರ ಮದುವೆಯಾಗುವ ಹುಡುಗ ಅಥವಾ ಗಂಡ ಹೇಗಿರಬೇಕು ಅಂತ ಕೇಳಿದ್ರೆ ಅಣ್ಣಯ್ಯ ಸೀರಿಯಲ್‌ನಲ್ಲಿ ಬರುವ ಶಂಕರಣ್ಣ (ಮಾರಿಗುಡಿ ಶಂಕರೇಗೌಡ) ಹಾಗಿರಬೇಕೆಂದು ಬಯಸುತ್ತಿದ್ದಾರೆ. ಅಣ್ಣಯ್ಯ ಸೀರಿಯಲ್‌ನಲ್ಲಿ ನಾಯಕ ಶಿವು ತಂದೆಯ ಪಾತ್ರವೇ ಶಂಕರಣ್ಣ.
ಬದಲಾಯ್ತು ಶಂಕರಣ್ಣನ ಪಾತ್ರ
ಶಿವು ತಂದೆಯ ಶಂಕರಣ್ಣನ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಸೀರಿಯಲ್ ಆರಂಭವಾದ ಕುಡುಕನಾಗಿ ವೀಕ್ಷಕರ ಮುಂದೆ ಬಂದಿದ್ದ ಶಂಕರಣ್ಣ ಇಂಥಾ ತಂದೆ ಯಾರಿಗೂ ಬೇಡ ಅಂದ್ಕೊಂಡಿದ್ರು. ಸೊಸೆ ಪಾರು ಬಂದ್ಮೇಲೆ ಶಂಕರಣ್ಣ ಸಂಪೂರ್ಣ ಬದಲಾಗಿದ್ದು, ಕುಡುಕನಾಗಲು ಕಾರಣ ಏನು ಅನ್ನೋದು ಸಹ ವೀಕ್ಷಕರಿಗೆ ಗೊತ್ತಾಗಿದೆ.
ಇದನ್ನೂ ಓದಿ: ಅಲ್ಲಿ ಲವರ್ ಅಕ್ಕ, ಇಲ್ಲಿ ತಮ್ಮನ ಲವರ್: ಒಂದೇ ಹಾದಿಯಲ್ಲಿ ಎದುರಾಳಿ ಚಾನೆಲ್‌ಗಳ ಸೀರಿಯಲ್‌ಗಳು
ಲೇಡಿಸ್ ಗುಸುಗುಸು
ಪತ್ನಿ ಶಾರದಮ್ಮಾ ದೂರವಾದ ಬಳಿಕ ಶಂಕರಣ್ಣ ಕುಡುಕನಾಗಿರುತ್ತಾನೆ. ಇದೀಗ ಮಗನೇ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಾಗ ಶಂಕರಣ್ಣ ಸಂತೋಷವಾಗಿದ್ದಾನೆ. ಮಗನಿಗೆ ವಿರುದ್ಧವಾಗಿ ನಿಂತ್ಕೊಂಡು ಶಂಕರಣ್ಣ, ಪತ್ನಿಯನ್ನು ಮನೆಯಲ್ಲಿಯೇ ಉಳಿಸಿಕೊಳ್ಳಲು ಸಕ್ಸಸ್ ಆಗಿದ್ದಾನೆ. ದೇವಿಪುತ್ರ ಮಾರಿಗುಡಿ ಶಿವುಗೆ ಶಂಕರಣ್ಣ ಸವಾಲು ಹಾಕಿದ್ದಾನೆ.
ಈ ದೃಶ್ಯ ನೋಡಿದ ನಂತರ ವಯಸ್ಸಾದ ಮೇಲೆಯೂ ಪತ್ನಿ ಮೇಲಿನ ಶಂಕರಣ್ಣನ ಕಾಳಜಿ, ಪ್ರೀತಿ ಮತ್ತು ನಂಬಿಕೆಗೆ ಮಹಿಳೆಯರು ಫಿದಾ ಆಗಿದ್ದು, ಗಂಡ ಅಂದ್ರೆ ಹಿಂಗಿರಬೇಕು ಎಂದು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Annayya: ದೂರ ದೂರದವರೆಲ್ಲಾ ಬಂದ್ರು, ಮನೆಯವರೇ ಮಿಸ್ ಆಗಿದ್ದಕ್ಕೆ ನೊಂದಕೊಂಡ ವೀಕ್ಷಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

