- Home
- Entertainment
- TV Talk
- ಶ್ರೀನಿವಾಸ್-ಲಕ್ಷ್ಮೀಗೆ ಯಾಕಿಷ್ಟು ಅವಸರ? ಇದು ಸಿನಿಮಾ ಅಲ್ಲ, ಸೀರಿಯಲ್ ಅಂದ್ರು ವೀಕ್ಷಕರು!
ಶ್ರೀನಿವಾಸ್-ಲಕ್ಷ್ಮೀಗೆ ಯಾಕಿಷ್ಟು ಅವಸರ? ಇದು ಸಿನಿಮಾ ಅಲ್ಲ, ಸೀರಿಯಲ್ ಅಂದ್ರು ವೀಕ್ಷಕರು!
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಲಲಿತಾ ಪಾತ್ರದ ಅಂತ್ಯವಾಗಿದ್ದು, ವೀಕ್ಷಕರು ಬೇಸರಗೊಂಡಿದ್ದಾರೆ. ಅತ್ತಿಗೆಯ ಅಂತಿಮ ಸಂಸ್ಕಾರಕ್ಕೂ ನಿಲ್ಲದೆ ಲಕ್ಷ್ಮೀ ಹೊರಟುಹೋಗಿದ್ದು, ಕಥೆಯನ್ನು ಅವಸರವಾಗಿ ಮುಗಿಸಲಾಗುತ್ತಿದೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರಾವಾಹಿ ಕಥೆ
ಧಾರಾವಾಹಿ ಕಥೆಯನ್ನು ರಬ್ಬರ್‌ನಂತೆ ಎಳೆಯಲಾಗುತ್ತೆ ಎಂಬ ಅಪವಾದ ಎಲ್ಲಾ ಸೀರಿಯಲ್‌ಗೂ ತಾಗಿರುತ್ತದೆ. ಇದೀಗ ಸೀರಿಯಲ್ ಕಥೆಯನ್ನು ಸ್ಪೀಡ್ ಮಾಡಿದ್ದಕ್ಕೆ ವೀಕ್ಷಕರು ಬೇಸರದ ಮಾತುಗಳನ್ನಾಡಿದ್ದಾರೆ. ಈ ರೀತಿ ಮಾತುಗಳು ಜೀ ಕನ್ನಡದ ಲಕ್ಷ್ಮೀ ನಿವಾಸದ ಸೀರಿಯಲ್ ಬಗ್ಗೆ ಕೇಳಿ ಬಂದಿವೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲಲಿತಾ ಪಾತ್ರದ ಅಂತ್ಯವಾಗಿದೆ. ಸೈಕೋ ಜಯಂತ್‌ನಿಂದಲೇ ಲಲಿತಾ ಉಸಿರು ನಿಂತಿದೆ. ಇತ್ತ ಲಲಿತಾ ಆಹ್ವಾನದ ಮೇರೆಗೆ ತವರು ಮನೆಗೆ ಗಂಡ ಶ್ರೀನಿವಾಸ್ ಜೊತೆಯಲ್ಲಿ ಲಕ್ಷ್ಮೀ ಆಗಮಿಸಿದ್ದಳು. ಮನೆ ಬಳಿ ಬರುತ್ತಿದ್ದಂತೆ ಅತ್ತಿಗೆ ಲಲಿತಾ ಸಾವು ಲಕ್ಷ್ಮೀಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು.
ಅತ್ತಿಗೆ ಸಾವು
ಅತ್ತಿಗೆ ಸಾವು, ತಂದೆಯ ಅನಾರೋಗ್ಯ ಕಂಡು ಲಕ್ಷ್ಮೀ ಕಣ್ಣೀರು ಹಾಕಿದ್ದಳು. ಲಕ್ಷ್ಮೀ ಆಗಮನದಿಂದ ತಂದೆ ಮಾತನಾಡೋದನ್ನು ಕೇಳಿ ನರಸಿಂಹ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದನು. ತಂದೆಯನ್ನು ಮನೆಯೊಳಗೆ ಬಿಟ್ಟು ಬರೋವಷ್ಟರಲ್ಲಿ ಅತ್ತಿಗೆಯ ಅಂತಿಮ ದರ್ಶನ ಪಡೆದು ಲಕ್ಷ್ಮೀ ಮತ್ತು ಶ್ರೀನಿವಾಸ್ ಅಲ್ಲಿಂದ ತೆರಳಿದ್ದರು.
ನರಸಿಂಹ ಬೇಸರ
ಮನೆಯಿಂದ ಹೊರಬರುತ್ತಲೇ ಸೋದರಿ ಕಾಣದಿದ್ದಾಗ ನರಸಿಂಹ ಬೇಸರಗೊಳ್ಳುತ್ತಾನೆ. ಇಷ್ಟು ದಿನ ಆದ್ಮೇಲೆ ಬಂದ್ರೂ ಅಂತಿಮ ಸಂಸ್ಕಾರ ಮುಗಿಯುವರೆಗೂ ನಿಲ್ಲದೇ ಅವಸರವಾಗಿ ಹೋಗಿದ್ದಕ್ಕೆ ನರಸಿಂಹ ಬೇಸರ ವ್ಯಕ್ತಪಡಿಸುತ್ತಾನೆ. ಇದೇ ಬೇಸರವನ್ನು ವೀಕ್ಷಕರು ಸಹ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: BBK 12: 'ವಿನ್ನರ್' ಎಂದ ಸ್ಪರ್ಧಿಗೆ ಮಧ್ಯರಾತ್ರಿಯ ಮಿಡ್‌ವೀಕ್ ಎಲಿಮಿನೇಷನ್ ಶಾಕ್!
ಲಕ್ಷ್ಮೀ-ಶ್ರೀನಿವಾಸ್ ಕಣ್ಣೀರು
ಸಾಮಾನ್ಯವಾಗಿ ಸಾವು ಆದ್ರೆ ಜನರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿಯೇ ಹಿಂದಿರುಗುತ್ತಾರೆ. ಅತ್ತಿಗೆ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದ ಲಕ್ಷ್ಮೀ ಬೇಗನೇ ಹೋಗಿರೋದನ್ನು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಅಲ್ಲಿಂದ ದೂರ ಬಂದು ಲಕ್ಷ್ಮೀ-ಶ್ರೀನಿವಾಸ್ ಕಣ್ಣೀರು ಹಾಕಿದ್ದಾರೆ. ಈ ದೃಶ್ಯಗಳನ್ನು ನೋಡಿದ ವೀಕ್ಷಕರು, ಇದು ಸಿನಿಮಾ ಅಲ್ಲ, ಸೀರಿಯಲ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ಕೇಳಿ ದಿಗಿಲುಬಿದ್ದ ಕರ್ಣ-ನಿಧಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

