ಬೇಸಿಕ್ ಸೈನ್ಸ್ ಬಳಸಿ ವೀರಭದ್ರನಿಗೆ ಶಾಕ್ ಕೊಟ್ಟ ರತ್ನಾಗೆ ಸೂಪರ್ ಐಡಿಯಾ ಕೊಟ್ಟ ಲೇಡಿಸ್
Ratna Vs Veerabhadra: ಮಾವ ವೀರಭದ್ರ ನೀಡಿದ ಕಠಿಣ ಸವಾಲನ್ನು ಸೊಸೆ ರತ್ನಾ ತನ್ನ ಜಾಣ್ಮೆಯಿಂದ ಎದುರಿಸಿದ್ದಾಳೆ. ಒಣಮೆಣಸಿನಕಾಯಿ ಮತ್ತು ಕಡಲೆಕಾಳನ್ನು ಬೇರ್ಪಡಿಸಲು, ಅವಳು ಶಾಲೆಯಲ್ಲಿ ಕಲಿತ ಬೇಸಿಕ್ ಸೈನ್ಸ್ ತಂತ್ರವನ್ನು ಬಳಸಿ ಮಾವನಿಗೆ ಚಮಕ್ ನೀಡಿದ್ದಾಳೆ.

ವೀರಭದ್ರನಿಗೆ ಸೊಸೆಯ ಚಮಕ್
ಗುಂಡಮ್ಮನ ಸಂಸಾರ ಸರಿ ಮಾಡೋಕೆ ಹೊರಟ್ಟಿದ್ದ ರತ್ನಾಗೆ ಮಾವು ಅಡ್ಡಗಾಲು ಹಾಕಿದ್ದನು. ರತ್ನಾ ಮೊದಲೇ ಟೀಚರ್ ಆಗಿ ಕೆಲಸ ಮಾಡಿದಾಕೆ. ಮಾರಿಗುಡಿ ದೇವ್ರು ವೀರಭದ್ರ ಕೊಟ್ಟ ಸವಾಲಿಗೆ ರತ್ನಾ ಬೇಸಿಕ್ ಸೈನ್ಸ್‌ನಿಂದಲೇ ಉತ್ತರ ನೀಡಿದ್ದಾಳೆ. ಸೊಸೆಯ ಜಾಣ್ಮೆಗೆ ವೀರಭದ್ರ ಕೈ ಕೈ ಹಿಸುಕಿಕೊಂಡಿದ್ದಾನೆ.

ಒಣಮೆಣಸಿನಕಾಯಿ ಮತ್ತು ಕಡಲೆಕಾಳು
ಹೌದು, ತವರಿಗೆ ಹೊರಟಿದ್ದ ರತ್ನಾ, ಚೀಲದಲ್ಲಿರುವ ಮೆಣಸಿನಕಾಯಿ ಮತ್ತು ಕಡಲೆಕಾಳು ಬೇರೆ ಮಾಡಬೇಕು. ಈ ಎಲ್ಲಾ ಕೆಲಸ ಮುಗಿದ್ಮೇಲೆ ಇಲ್ಲಿಂದ ಹೋಗಬೇಕೆಂದು ವೀರಭದ್ರ ಷರತ್ತು ಹಾಕಿದ್ದನು. ಮೂಟೆಗಳನ್ನು ನೋಡಿ, ಇದಕ್ಕೆ ನಾಲ್ಕೈದು ಜನರು ಬೇಕೆಂದು ವೀರಭದ್ರನ ಪತ್ನಿಯರು ಹೇಳುತ್ತಾರೆ.
ಶಾಲೆಯಲ್ಲಿ ಪಾಠ ಮಾಡಿದ ನೆನಪು
ಇದಕ್ಕೆ ಕೆರಳಿ ಕೆಂಡವಾದ ಹೆಂಡ್ತಿಯರಿಬ್ಬರಿಗೂ ಸೊಸೆ ರತ್ನಾಗೆ ಸಹಾಯ ಮಾಡುವಂತಿಲ್ಲ ಎಂದು ಎಚ್ಚರಿಸಿ ಅಲ್ಲಿಂದ ಹೊರಡುತ್ತಾನೆ. ನಂತರ ಒಣಮೆಣಸಿನಕಾಯಿ ಮತ್ತು ಕಡಲೆಕಾಳು ಹೇಗೆ ಬೇರ್ಪಡಿಸಬೇಕು ಎಂದು ಯೋಚಿಸುತ್ತಿರುವಾಗ ಶಾಲೆಯಲ್ಲಿ ಮಕ್ಕಳಿಗೆ ಮಾಡಿದ ಪಾಠ ಕಣ್ಮುಂದೆ ಬರುತ್ತದೆ. ಅದುವೇ ಬೇಸಿಕ್ ಸೈನ್ಸ್. ಇದು ಎಲ್ಲರಿಗೂ ತಿಳಿದಿರುವ ವಿಚಾರ.
ರತ್ನಾ ಬಳಸಿದ ಬೇಸಿಕ್ ಸೈನ್ಸ್
ನೀರಿನಲ್ಲಿ ಭಾರವಾದ ವಸ್ತುಗಳು ಮುಳುಗುತ್ತವೆ ಮತ್ತು ಹಗುರುವಾದ ವಸ್ತು ತೇಲಾಡುತ್ತದೆ. ಈ ಬೇಸಿಕ್ ಸೈನ್ಸ್ ಟ್ರಿಕ್‌ನ್ನು ರತ್ನಾ ಕಾರ್ಯರೂಪಕ್ಕೆ ತಂದಿದ್ದಾಳೆ. ದೊಡ್ಡವಾದ ಪಾತ್ರೆಯಲ್ಲಿ ನೀರು ಹಾಕುತ್ತಾಳೆ. ನಂತರ ಇದಕ್ಕೆ ಮೆಣಸಿನಕಾಯಿ ಮತ್ತು ಕಡಲೆಕಾಳು ಹಾಕ್ತಾಳೆ. ತದನಂತರ ಸುಲಭವಾಗಿ ತೇಲುವ ಒಣಮೆಣಸಿನಕಾಯಿ ತೆಗೆಯುತ್ತಾಳೆ. ನಂತರ ಕೆಳಭಾಗದಲ್ಲಿ ಕಡಲೆಕಾಳು ತೆಗೆದು ಮತ್ತೊಂದು ಪಾತ್ರೆಯಲ್ಲಿ ಹಾಕುತ್ತಾಲೆ. ಈ ಎರಡನ್ನೂ ಬಿಸಿಲಿನಲ್ಲಿ ಒಣಗಿಸಿದ್ರೆ ಸಾಕು ಎಂದು ಅತ್ತೆಯಂದಿರಿಗೆ ಹೇಳುತ್ತಾಳೆ.
ಇದಕ್ಕಿಂತಲೂ ಸೂಪರ್ ಐಡಿಯಾ ಕೊಟ್ಟ ಲೇಡಿಸ್
ರತ್ನಾ ಬಳಕೆ ಮಾಡಿದ ಟೆಕ್ನಿಕ್‌ಗಿಂತಲೂ ಸೂಪರ್ ಐಡಿಯಾವೊಂದನ್ನು ಗೃಹಿಣಿಯರು ನೀಡಿದ್ದಾರೆ. ಕಡಲೆಕಾಳು ಮತ್ತು ಒಣಮೆಣಸಿನಕಾಯಿ ನೆಲದ ಹರಡಿಕೊಳ್ಳಬೇಕು. ಆಗ ಸರಳವಾಗಿ ಒಣಮೆಣಸಿಕಾಯಿ ತೆಗೆದ್ರೆ, ಕೆಳಗಡೆ ಕಡಲೆಕಾಳು ಉಳಿಯುತ್ತದೆ. ಇದರಿಂದ ಕೆಲಸ ಮತ್ತಷ್ಟು ಸುಲಭವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

