- Home
- Entertainment
- TV Talk
- ಪ್ರಿಯಾಳ ಅತಿ ಬುದ್ಧಿವಂತಿಕೆಗೆ ಸಂಕಷ್ಟದಲ್ಲಿ ಸಿಲುಕಿದ ಮಾಧವ; ಕೈ ಕೊಟ್ಟ ಮಿಜಿ ಮಿಜಿ ಅತ್ತೆ
ಪ್ರಿಯಾಳ ಅತಿ ಬುದ್ಧಿವಂತಿಕೆಗೆ ಸಂಕಷ್ಟದಲ್ಲಿ ಸಿಲುಕಿದ ಮಾಧವ; ಕೈ ಕೊಟ್ಟ ಮಿಜಿ ಮಿಜಿ ಅತ್ತೆ
ಹನಿಮೂನ್‌ಗೆಂದು ಆತುರದಲ್ಲಿ ಹೋಟೆಲ್ ಬುಕ್ ಮಾಡಿದ ಪ್ರಿಯಾ, ನಿಯಮಗಳನ್ನು ಗಮನಿಸದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಪೂರ್ತಿ ಹಣ ಕಟ್ಟಲಾಗದೆ ಮಾಧವ ಮತ್ತು ಪ್ರಿಯಾ ಇಕ್ಕಟ್ಟಿಗೆ ಸಿಲುಕಿದ್ದು, ಹಣಕ್ಕಾಗಿ ಸಹಾಯ ಕೇಳಿದಾಗ ಪ್ರಿಯಾಳ ಪೋಷಕರು ಕೈಚೆಲ್ಲಿದ್ದಾರೆ.

ಪ್ರಿಯಾಳ ಅತಿ ಬುದ್ದಿವಂತಿಕೆ
ನಂದಕುಮಾರನ ಮುದ್ದುಸೊಸೆ ಪ್ರಿಯಾಳ ಅತಿ ಬುದ್ದಿವಂತಿಕೆಯಿಂದ ಮಾಧವ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹನಿಮೂನ್ ಹೋಗುವ ಅತ್ಯುತ್ಸಾಹದಲ್ಲಿ ಹೋಟೆಲ್ ನಿಯಮಗಳನ್ನು ಸರಿಯಾಗಿ ಗಮನಿಸದೇ ಆನ್‌ಲೈನ್ ಮುಖಾಂತರ ಪ್ರಿಯಾ ರೂಮ್ ಬುಕ್ ಮಾಡಿದ್ದಳು. ಮೀನಾ ಎಚ್ಚರಿಸಿದ್ರೂ, ಪ್ರಿಯಾ ಮಾತ್ರ ಡೋಂಟ್ ಕೇರ್ ಮಾಡಿದ್ದಳು.

26 ಸಾವಿರ ರೂಪಾಯಿ
ಹೋಟೆಲ್‌ಗೆ ಹೋದ್ಮೆಲೆ ತಿಳಿದಿದ್ದು, ಅದು ಮೂರು ದಿನಕ್ಕೆ 26 ಸಾವಿರ ರೂಪಾಯಿ ಕೋಣೆ. ಆನ್‌ಲೈನ್‌ನಲ್ಲಿ ಟೋಕನ್ ಅಮೌಂಟ್ ಪಾವತಿಸಲಾಗಿದೆ. ಇನ್ನುಳಿದ 21 ಸಾವಿರ ರೂಪಾಯಿ ಪಾವತಿಸುವಂತೆ ಹೋಟೆಲ್ ಸಿಬ್ಬಂದಿ ಹೇಳಿದ್ದನ್ನು ಕೇಳಿ ಪ್ರಿಯಾ ಮತ್ತು ಮಾಧವ ಶಾಕ್ ಆಗಿದ್ದಾರೆ. ಹಣಕ್ಕಾಗಿ ಅತ್ತೆ-ಮಾವನ ಬಳಿ ಮಾಧವ ಸಹಾಯ ಕೇಳಿದ್ದಾನೆ.
ಪ್ರಿಯಾ ಅಪ್ಪ-ಾಮ್ಮ
ಮೊದಲೇ ಸಾಲದ ಸುಳ್ಳಿ, ಸುಳ್ಳಿನ ಬದುಕು ನಡೆಸುತ್ತಿರುವ ಪ್ರಿಯಾ ತಂದೆ-ತಾಯಿ ಸುಲಭವಾಗಿ ಕೈ ತೊಳೆದುಕೊಂಡಿದ್ದಾರೆ. ಇದರಿಂದ ಮಾಧವನಿಗೆ ಆಘಾತವಾಗಿದೆ. ಮಾಧವ ಹೋಟೆಲ್‌ನಲ್ಲಿ ಉಳಿದುಕೊಳ್ತಾನಾ ಅಥವಾ ನಂದಗೋಕುಲಕ್ಕೆ ಹಿಂದಿರುಗಿ ಹೋಗ್ತಾನಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಪ್ರಿಯಾಗೆ ಕ್ಲಾಸ್
ಈ ಹಿಂದೆ ಅತ್ತೆ-ಮಾವನ ಸಂಕಷ್ಟಕ್ಕೆ ಸ್ಪಂದಿಸಿದ್ದ ಮಾಧವ, 1 ಲಕ್ಷ ರೂಪಾಯಿ ಧನಸಹಾಯ ಮಾಡಿದ್ದನು. ಇದೀಗ ಬಹುಶಃ ಅದೇ ಹಣವನ್ನು ಮಾಧವ ವಾಪಸ್ ಕೇಳಿರುವ ಸಾಧ್ಯತೆಗಳಿವೆ. ಕಾಸಿಗೆ ಕಾಸು ಸೇರಿಸುವ ನಂದಕುಮಾರನಿಗೆ ಈ ವಿಷಯ ಗೊತ್ತಾದ್ರೆ ಪ್ರಿಯಾಗೆ ಕ್ಲಾಸ್ ತೆಗೆದುಕೊಳ್ಳೋದು ಗ್ಯಾರಂಟಿ ಅನ್ನಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

