- Home
- Entertainment
- TV Talk
- Black & White ಡ್ರೆಸ್ ಧರಿಸಿ ಪ್ಯಾರೀಸ್’ನಲ್ಲಿ ರೌಂಡ್ ಹಾಕಿದ ಈ ಬಿಗ್ ಬಾಸ್ ಬೆಡಗಿ ಯಾರು ಗೊತ್ತಾಯ್ತ?
Black & White ಡ್ರೆಸ್ ಧರಿಸಿ ಪ್ಯಾರೀಸ್’ನಲ್ಲಿ ರೌಂಡ್ ಹಾಕಿದ ಈ ಬಿಗ್ ಬಾಸ್ ಬೆಡಗಿ ಯಾರು ಗೊತ್ತಾಯ್ತ?
Anusha Rai: ಕನ್ನಡ ಬಿಗ್ ಬಾಸ್ ಮೂಲಕ ಮಿಂಚಿದ ಸಿನಿಮಾ ನಟಿ ಅನುಷಾ ರೈ ಸದ್ಯ ಪ್ಯಾರೀಸ್ ಟೂರ್ ನಲ್ಲಿದ್ದು, ಡಿಸ್ನಿ ಲ್ಯಾಂಡ್ ಗೆ ಫ್ಯಾಮಿಲಿ ಜೊತೆ ಹೋಗಿರುವ ನಟಿ, ಅಲ್ಲಿ ಮಿಕಿ ಮೌಸ್ ಹೆಡ್ ಬ್ಯಾಂಡ್ ಧರಿಸಿ ರೌಂಡ್ ಹೊಡೆದಿದ್ದಾರೆ. ಮುದ್ದಾದ ಫೋಟೊ, ವಿಡೀಯೋ ಈಗ ಸದ್ದು ಮಾಡುತ್ತಿದೆ.

ಅನುಷಾ ರೈ
ಕನ್ನಡ ಸಿನಿಮಾಗಳಲ್ಲಿ ನಟಿಸಿ ಬಿಗ್ ಬಾಸ್ ಮೂಲಕ ಮನೆಮಾತಾದ ನಟಿ ಅನುಷಾ ರೈ. ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದ ಅನುಷಾ ರೈ ತಮ್ಮ ಮುಗ್ಧತೆಯಿಂದಲೇ ಹೆಚ್ಚು ಸದ್ದು ಮಾಡಿದ್ದರು. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ಸಣ್ಣ ಬ್ರೇಕ್ ತೆಗೆದುಕೊಂಡು ವಿದೇಶಕ್ಕೆ ಹಾರಿದ್ದಾರೆ.
ಪ್ಯಾರೀಸ್ ನಲ್ಲಿ ಅನುಷಾ ರೈ
ಅನುಷಾ ರೈ ತಮ್ಮ ಫ್ಯಾಮಿಲಿ ಜೊತೆ ಅಂದ್ರೆ ತಂದೆ, ತಾಯಿ ಹಾಗೂ ಸಹೋದರನ ಜೊತೆ ಪ್ಯಾರೀಸ್ ಗೆ ತೆರಳಿದ್ದು, ಅಲ್ಲಿ ಡಿಸ್ನಿ ಲ್ಯಾಂಡ್, ಐಫೆಲ್ ಟವರ್ ಸೇರಿ ಫ್ರಾನ್ಸ್ ನ ವಿವಿಧ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದಾರೆ.
ಮುದ್ದಾದ ವಿಡಿಯೋ ವೈರಲ್
ಇನ್ನು ಅನುಷಾ ರೈ ಡಿಸ್ನಿ ಲ್ಯಾಂಡಲ್ಲಿ Black & White ಡ್ರೆಸ್ ಧರಿಸಿ, ಮಿಕ್ಕಿ ಮೌಸ್ ಹೆಡ್ ಬ್ಯಾಂಡ್ ಧರಿಸಿ, ಲಾಂಗ್ ಸ್ಕರ್ಟ್, ಟ್ಯೂಬ್ ಟಾಪ್ ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಈ ಡ್ರೆಸ್ ಧರಿಸಿ ಡಿಸ್ನಿ ಲ್ಯಾಂಡಲ್ಲಿ ನಟಿ ಓಡಾಡುತ್ತಿರುವ ಮುದ್ದಾದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಫ್ಯಾಮಿಲಿ ಜೊತೆ ಕ್ವಾಲಿಟಿ ಸಮಯ
ಹೆಚ್ಚಾಗಿ ದೇಶ ವಿದೇಶ ಸುತ್ತುತ್ತಾ ಎಂಜಾಯ್ ಮಾಡೂವ ಅನುಷಾ ರೈ, ಇದೀಗ ತಮ್ಮ ಕೆಲಸಗಳಿಗೆ ಬ್ರೇಕ್ ಕೊಟ್ಟು ತಮ್ಮ ಫ್ಯಾಮಿಲಿ ಜೊತೆ ಪ್ಯಾರೀಸ್ ನಲ್ಲಿ ಕ್ವಾಲಿಟಿ ಸಮಯ ಎಂಜಾಯ್ ಮಾಡಿದ್ದಾರೆ. ಕುಟುಂಬದ ಜೊತೆಗೆ ಲಂಚ್, ಔಟಿಂಗ್ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
ಅದ್ಧೂರಿ ಲೈಫ್ ಸ್ಟೈಲ್
ಅನುಷಾ ರೈ ಹೆಚ್ಚಾಗಿ ಅದ್ಧೂರಿಯಾಗಿ ತಮ್ಮ ಜೀವನ ಎಂಜಾಯ್ ಮಾಡುತ್ತಾರೆ. ಕಳೆದ ತಿಂಗಳು ಐಷಾರಾಮಿ ಹೊಟೇಲ್ ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟಿ, ನಂತರ ತಮ್ಮ ತಮ್ಮನ ಹುಟ್ಟುಹಬ್ಬಕ್ಕೆ ಚಿನ್ನದ ಕಡಗ ಕೊಟ್ಟಿದ್ದರು. ಅಲ್ಲದೇ ದುಬಾರಿ ಕಾರು ಖರೀದಿಸಿದ್ದರು ನಟಿ.
ಅನುಷಾ ರೈ ಸಿನಿಮಾಗಳು
ಅನುಷಾ ರೈ ಕನ್ನಡದಲ್ಲಿ ಮಹಾನುಭಾವರು, ಬಿಎಂಡಬ್ಲ್ಯೂ, ಖರ್ಷಣಂ, ದಮಯಂತಿ ಹಾಗೂ ಖಡಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಡಕ್ ಸಿನಿಮಾ ಚಿತ್ರೀಕರಣ ನಡೆದಿದ್ದು, ಬಿಡುಗಡೆಯಾಗಬೇಕಿದೆ. ಇದಲ್ಲದೇ ಅದಮ್ಯ ಚೇತನ, ತೂಫಾನ್, ಸಂಗೀತಾ ಬಾರ್ ಆಂಡ್ ರೆಸ್ಟೋರೆಂಟ್ ಸಿನಿಮಾಗಳು ಸಹ ಸೆಟ್ಟೇರಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

