- Home
- Entertainment
- TV Talk
- BBK 12 Finale: ಬಿಗ್‌ಬಾಸ್ ಘೋಷಣೆಗೂ ಮುನ್ನವೇ ವಿನ್ನರ್ ಹೆಸರು ಲೀಕ್ ಮಾಡಿದ ವಿಕಿಪೀಡಿಯಾ
BBK 12 Finale: ಬಿಗ್‌ಬಾಸ್ ಘೋಷಣೆಗೂ ಮುನ್ನವೇ ವಿನ್ನರ್ ಹೆಸರು ಲೀಕ್ ಮಾಡಿದ ವಿಕಿಪೀಡಿಯಾ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೂ ಮುನ್ನವೇ ವಿಜೇತರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಧಿಕೃತ ಘೋಷಣೆಗೂ ಮುನ್ನ ವಿಕಿಪಿಡಿಯಾದಲ್ಲಿ ವಿನ್ನರ್ ಎಂದು ಒಬ್ಬರ ಹೆಸರು ತೋರಿಸುತ್ತಿದ್ದು, ಇದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಫಿನಾಲೆ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬಿಗ್‌ಬಾಸ್ ಫಿನಾಲೆ ಸಂಚಿಕೆ
ಬಿಗ್‌ಬಾಸ್ ಫಿನಾಲೆ ಸಂಚಿಕೆ ಇಂದು ಸಂಜೆಮ 6 ಗಂಟೆಯಿಂದ ಪ್ರಸಾರವಾಗಲಿದ್ದು, ಕಾರ್ಯಕ್ರಮದ ಕೊನೆಗೆ ವಿನ್ನರ್ ಯಾರು ಎಂದು ಘೋಷಿಸಲಾಗುತ್ತದೆ. ಅದಕ್ಕೂ ಮುನ್ನವೇ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯೇ ವಿನ್ನರ್ ಎಂದು ಬರೆದುಕೊಳ್ಳುತ್ತಿದ್ದಾರೆ. ಇದೀಗ ವಿಕಿಪಿಡಿಯಾದಲ್ಲಿ ವಿನ್ನರ್ ಯಾರು ಎಂದು ನಮೂದಿಸಲಾಗಿದೆ.
ಗೂಗಲ್ ಸರ್ಚ್
ಗೂಗಲ್‌ನಲ್ಲಿ ಏನೇ ಸರ್ಚ್ ಮಾಡಿದ್ರೂ ವಿಕಿಪಿಡಿಯಾ ಒಂದಿಷ್ಟು ವಿವರವಾದ ಮಾಹಿತಿಯನ್ನು ನೀಡುತ್ತದೆ. ಗೂಗಲ್‌ನಲ್ಲಿ Bigg Boss Kannada season 12 ಅಂತ ಸರ್ಚ್ ಮಾಡಿ ವಿಕಿಪಿಡಿಯಾ ಪೇಜ್ ಓಪನ್ ಮಾಡಿದಾಗ, ಶೋನ ಒಂದಿಷ್ಟು ಮಾಹಿತಿಯನ್ನು ಕಾಣಬಹುದು. ವಿಕಿಪಿಡಿಯಾ ಅಧಿಕೃತ ಮಾಹಿತಿ ಹೊರಬೀಳುವ ಮುನ್ನವೇ ವಿನ್ನರ್ ಹೆಸರನ್ನು ನಮೂದಿಸಿದೆ. ವಿಕಿಪಿಡಿಯಾ ಪೇಜ್‌ನ್ನು ಸಾರ್ವಜನಿಕರು ಸಹ ಎಡಿಟ್ ಮಾಡಬಹುದಾಗಿದೆ.
ವಿಕಿಪಿಡಿಯಾ ಹೇಳಿದ್ದೇನು?
ವಿಕಿಪಿಡಿಯಾದಲ್ಲಿರುವ ಮಾಹಿತಿ ಪ್ರಕಾರ, ಸೀಸನ್ 12ರ ವಿನ್ನರ್ ಗಿಲ್ಲಿ ನಟ ಮತ್ತು ಮೊದಲ ರನ್ನರ್ ರಕ್ಷಿತಾ ಶೆಟ್ಟಿ ಎಂದು ದಾಖಲಿಸಲಾಗಿದೆ. ಕೆಲ ಸಮಯದ ಹಿಂದೆಯಷ್ಟೇ ರಕ್ಷಿತಾ ಶೆಟ್ಟಿ ವಿನ್ನರ್ ಎಂದು ತೋರಿಸಲಾಗಿತ್ತು. ಇದೀಗ ಗಿಲ್ಲಿ ಹೆಸರು ಬರುತ್ತಿದ್ದಂತೆ ಅಭಿಮಾನಿಗಳು ಖುಷಿಯಾಗಿ, ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಫಿನಾಲೆ
ಬಿಗ್‌ಬಾಸ್ ಸೀಸನ್ 12ರ ಫಿನಾಲೆಯಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಮ್ಯೂಟಂಟ್ ರಘು, ಕಾವ್ಯಾ ಶೈವ ಮತ್ತು ಧನುಷ್ ಇದ್ದಾರೆ. ವರದಿಗಳ ಪ್ರಕಾರ ಟಾಪ್ ಮೂರರಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಇರ್ತಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಬಿಗ್‌ಬಾಸ್ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಇದನ್ನೂ ಓದಿ: BBK 12: ಬಿಗ್‌ಬಾಸ್ ಶೋಗೆ ಮತ್ತೆ ಸಂಕಷ್ಟ: ಫಿನಾಲೆ ಸಂದರ್ಭದಲ್ಲಿಯೇ ಹೋಯ್ತು ನೋಟಿಸ್
ಪೊಲೀಸ್ ಭದ್ರತೆ
ಬಿಗ್‌ಬಾಸ್ ಕಾರ್ಯಕ್ರಮ ಬಿಡದಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಇಂದು ಫಿನಾಲೆ ಆಗಿರೋದರಿಂದ ಜಾಲಿವುಡ್ ಸ್ಟುಡಿಯೋ ಮುಂದೆಯೇ ಅಭಿಮಾನಿಗಳು ಬ್ಯಾನರ್ ಹಾಕಲಾರಂಭಿಸಿದ್ದಾರೆ. ಮತ್ತೊಂದೆಡೆ ಜಾಲಿವುಡ್ ಸ್ಟುಡಿಯೋದತ್ತ ಆಗಮಿಸುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: BBK 12 Grand Finale: ಬಿಗ್‌ಬಾಸ್ ಕನ್ನಡ 12 ಕಿರೀಟ ಯಾರ ಪಾಲು? ಟಾಪ್ 3ರಲ್ಲಿ ಅಚ್ಚರಿ ಅಭ್ಯರ್ಥಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

