- Home
- Entertainment
- TV Talk
- BBK 12: ಗಿಲ್ಲಿನೇ ಗೆಲ್ಬೇಕು ಅಂತ ಗಲಾಟೆ ಆಗ್ತಿರೋದು ಯಾಕೆ? ಈ ಪ್ರಚಾರದ ಹಿಂದಿನ ಕಾಣದ ಕೈ-ಬಾಯಿ ಯಾವುದು?
BBK 12: ಗಿಲ್ಲಿನೇ ಗೆಲ್ಬೇಕು ಅಂತ ಗಲಾಟೆ ಆಗ್ತಿರೋದು ಯಾಕೆ? ಈ ಪ್ರಚಾರದ ಹಿಂದಿನ ಕಾಣದ ಕೈ-ಬಾಯಿ ಯಾವುದು?
ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಆದರೆ, ದೊಡ್ಮನೆಯ ಮಿಕ್ಕೆಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚಾಗಿ ಗಿಲ್ಲಿ ನಟ ನಟರಾಜ್ ಅವರೇ ಈ ಸೀಸನ್, ಅಂದರೆ ಬಿಗ್ ಬಾಸ್ ಕನ್ನಡ 12 ಗೆಲ್ಲಬೇಕು ಎಂಬ ಕೂಗು ಕೇಳಿಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಗಿಲ್ಲಿ ಬಗ್ಗೆಯೇ ಪ್ರಚಾರ, ಚರ್ಚೆ ನಡೆಯುತ್ತಿದೆ.

ಗಿಲ್ಲಿ ನಟ ನಟರಾಜ್ ಗೆಲ್ಬೇಕು ಅಂತ ಸೋಷಿಯಲ್ ಮೀಡಿಯಾ ತುಂಬಾ ಭಾರೀ ಪ್ರಚಾರ ನಡಿತಾ ಇದೆ. ಕಳೆದ ಸೀಸನ್‌ನಲ್ಲಿ ಹನುಮಂತ ಗೆಲ್ಬೇಕು ಎಂಬ ಕೂಗು ಕೇಳಿಬಂದಿರುವಂತೆ, ಈ ಬಾರಿ ಗಿಲ್ಲಿ ಪರ ಪ್ರಚಾರ ಜೋರಾಗಿದೆ. ಏಕೆ?
ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋಗಳ ಮೂಲಕ, ಶಾರ್ಟ್ಸ್ಗಳ ಮೂಲಕ ಹಾಗೂ ಮೌತ್ ಟಾಕ್ ಮೂಲಕ ಕೂಡ ಹಲವರು ಗಿಲ್ಲಿ ಪರ ಪ್ರಚಾರ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿ ಸೀಸನ್‌ನಲ್ಲಿ ಹಲವರು ಗೆಲ್ಲುವ ಫೇವರೆಟ್ ಎನ್ನಿಸಿರುತ್ತಾರೆ. ವೀಕ್ಷಕರು ಬೇರೆಬೇರೆಯವರನ್ನು ತಮ್ಮ ಫೆವರೆಟ್ ಎಂದುಕೊಂಡಿರುತ್ತಾರೆ, ರೆಫರ್ ಮಾಡುತ್ತಿರುತ್ತಾರೆ.
ಆದರೆ, ಈ ಬಾರಿ ಹೆಚ್ಚಿನವರು ಗಿಲ್ಲಿಗೆ ವೋಟ್ ಮಾಡಿದ್ದಾರಾ? ಹಾಗಂತ ಸ್ಷಷ್ಟವಾಗಿ ಹೇಳಲು ಆಗದು. ಆದರೆ, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಗಿಲ್ಲಿ ಪರ ಪ್ರಚಾರಕ್ಕೆ ನಿಂತಿರುವಂತೆ ಕಾಣುತ್ತದೆ. ಯಾಕೆ ಹೀಗೆ?
ಗಿಲ್ಲಿ ನಟ ಬಿಗ್ ಬಾಸ್ ಶೋ ಸೀಸನ್ 12 ಶುರುವಾದಾಗಿನಿಂದಲೂ ಬೇಎಯವರಿಗಿಂತ ಹೆಚ್ಚಾಗಿಯೇ ಸೌಂಡ್ ಮಾಡುತ್ತಿದ್ದಾರೆ. ಅಶ್ವಿನಿ, ರಕ್ಷಿತಾ ಹಾಗೂ ಮಾಳು ಎಲ್ಲರೂ ಸಾಕಷ್ಟು ಸದ್ದು ಮಾಡಿದ್ದರೂ ಅವರೆಲ್ಲರಿಗಿಂತ ಗಿಲ್ಲಿ ನಟ ಒಂದು ಕೈ ಮೇಲೆ ಎನ್ನುವಂತೆಯೇ ಇದ್ದಾರೆ.
ಹಾಗಂತ ಬೇರೆಯವರೇನೂ ಡಲ್ ಅಂತಲ್ಲ. ಈ ಸೀಸನ್‌ನಲ್ಲಿ ಸಾಕಷ್ಟು ಸ್ಪರ್ಧಿಗಳು ಚೆನ್ನಾಗಿಯೇ ಪರ್ಫಾಮನ್ಸ್ ಮಾಡಿದ್ದಾರೆ. ಆದರೆ, ಗಿಲ್ಲಿ ನಟ ಸ್ಪೆಷಲ್ ಎನ್ನಿಸಲು ಕಾರಣ ಅವರ ಮಾತಿನ ಟೈಮಿಂಗ್ಸ್ ಹಾಗೂ ಲೈವ್ಲಿನೆಸ್ ಎನ್ನಬಹುದೇನೋ.
ಬಿಗ್ ಬಾಸ್ ವೀಕ್ಷಕರಲ್ಲಿ ಹೆಚ್ಚಿನವರಿಗೆ ಇಷ್ಟವಾಗುವಂತೆ ಗಿಲ್ಲಿ ನಟ ಮಾತನ್ನಾಡುವುದು, ಆಟ ಆಡುವುದು ಹಾಗೂ ತಂತ್ರಗಾರಿಗೆ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ, ಸಹಜವಾಗಿಯೇ ವೀಕ್ಷಕರು ಗಿಲ್ಲಿ ನಟನಿಗೆ ಹೆಚ್ಚಾಗಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಗಿಲ್ಲಿ ಪರ, ಗಿಲ್ಲಿಯೇ ಗೆಲ್ಲಬೇಕು ಎಂದು ಬಹಳಷ್ಟು ಸುದ್ದಿ-ಸದ್ದಗದ್ದಲ ನಡೆಯುತ್ತಿದೆ. ಆದರೆ ಇದರಲ್ಲಿ ಕಾಣದ ಕೈ ಏನೂ ಇಲ್ಲ ಎನ್ನಬಹುದು. ಅಷ್ಟಕ್ಕೂ, ಕಾಣದ ಕೈ ಬಗ್ಗೆ ಯಾರಾದರೂ ಹೇಳೋದಾದರೂ ಹೇಗೆ? ಅದೊಂದು ಗೇಮ್, ಆಟ ಚೆನ್ನಾಗಿ ಆಡಬೇಕು, ಜೊತೆಗೆ ಗೆಲ್ಲಲು ಅದೃಷ್ಟದ ಜೊತೆಗೆ, ವಿಕ್ಷಕರ ಅನುಗ್ರಹ ಕೂಡ ಇರಬೇಕು. ಗಿಲ್ಲಿಗೆ ಎಲ್ಲವೂ ಕೂಡಿ ಬಂದಿರಬಹುದೇ? ಅಥವಾ, ಕೊನೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬರಹುದೇ? ಸದ್ಯಕ್ಕೆ ಕಾದು ನೋಡುವುದೊಂದೇ ದಾರಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

