- Home
- Entertainment
- Sandalwood
- YASH: ಅಂದು IIFA ವೇದಿಕೆಯಲ್ಲಿ ಯಶ್ ಆಡಿದ್ದ ಮಾತೇನು? ಇಂದು 'ವಿಷಕಾರಿ' ಆಗಿರೋ ರಾಕಿಂಗ್ ಸ್ಟಾರ್ ಮಾಡಿದ್ದೇನು?
YASH: ಅಂದು IIFA ವೇದಿಕೆಯಲ್ಲಿ ಯಶ್ ಆಡಿದ್ದ ಮಾತೇನು? ಇಂದು 'ವಿಷಕಾರಿ' ಆಗಿರೋ ರಾಕಿಂಗ್ ಸ್ಟಾರ್ ಮಾಡಿದ್ದೇನು?
ನಟ ಯಶ್ ಅವರು ಮಾತನ್ನಾಡಿರುವ ಹಳೆಯ ವಿಡಿಯೋವೊಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಫಿಲಂಪೇರ್ ಅವಾರ್ಡ್ ಪಡೆದು ಅಂದು ನಟ ಯಶ್ ಅವರು ಆಡಿದ್ದ ಮಾತುಗಳು ಅವು.. ಹಾಗಿದ್ದರೆ ನಟ ಯಶ್ ಅವರು ಅದೇನು ಹೇಳಿದ್ದರು? ಯಾಕೆ ಅದು ಇಷ್ಟೊಂದು ವೈರಲ್ ಆಗ್ತಿದೆ? ಈ ಸ್ಟೋರಿ ನೊಡಿ..

ನಟ ಯಶ್ (Rocking Star Yash) ಅವರು ಮಾತನ್ನಾಡಿರುವ ಹಳೆಯ ವಿಡಿಯೋವೊಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಫಿಲಂಪೇರ್ ಅವಾರ್ಡ್ ಪಡೆದು ಅಂದು ನಟ ಯಶ್ ಅವರು ಆಡಿದ್ದ ಮಾತುಗಳು ಅವು.. ಹಾಗಿದ್ದರೆ ನಟ ಯಶ್ ಅವರು ಅದೇನು ಹೇಳಿದ್ದರು? ಯಾಕೆ ಅದು ಇಷ್ಟೊಂದು ವೈರಲ್ ಆಗ್ತಿದೆ? ಈ ಸ್ಟೋರಿ ನೊಡಿ..
ನಟ ಯಶ್ ಅವರು ಐಫಾ ವೇದಿಕೆ ಮೇಲೆ 'ನನಗೆ ತುಂಬಾ ಖುಷಿ ಆಗ್ತಿದೆ ಯಾಕೋ.. ಬಟ್, ನಿಜ ಹೇಳ್ಬೇಕು ಅಂದ್ರೆ ಸಂಚಾರಿ ವಿಜಯ್ ಇಲ್ಲಿದಾರೆ. ನ್ಯಾಷನಲ್ ಅವಾರ್ಡ್ ವಿನ್ನರ್.. ಅವ್ರ ಸಿನಿಮಾನ ನೋಡಿದೆ.. ಅವ್ರ ಪರ್‌ಫಾರ್ಮನ್ಸ್ ಮುಂದೆ ನಂದೇನೂ ಇಲ್ಲ. ಸಂಚಾರಿ ವಿಜಯ್ ನಮ್ಮ ಕರ್ನಾಟಕದ ಆಸ್ತಿ ಅಂತ ಹೇಳೋಕೆ ಇಷ್ಟಪಡ್ತೀನಿ..
ನಮ್ಮ ಕನ್ನಡ ಚಿತ್ರರಂಗಕ್ಕೆ ನ್ಯಾಷನಲ್ ಅವಾರ್ಡ್ ತಂದುಕೊಡೋ ಮೂಲಕ ನಮ್ಮೆಲ್ಲರಿಗೂ ಗೌರವ ತಂದುಕೊಟ್ಟಿದಾರೆ.. ಅಷ್ಟೇ ಅಲ್ಲ, ನಿರೂಪ್ ಭಂಡಾರಿ ಸೇರಿದಂತೆ ಹಲವಾರು ಉದಯೋನ್ಮುಖ ಕಲಾವಿದರು ಬರ್ತಿದಾರೆ..
ನಾನು ಒಂದೇ ಕೇಳೋದು.. ನಮ್ಮ ಭಾಷೆ, ನಮ್ಮ ಚಿತ್ರ, ನಮ್ಮ ಹಿರಿಯರು ಏನು ನಮ್ಮ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದಾರೆ, ಸೇವೆ ಸಲ್ಲಿಸಿದಾರೆ, ಅವೆಲ್ಲಾ ಅಪಾರವಾಗಿದೆ.. ಅದನ್ನು ಇನ್ನಷ್ಟು ಬೆಳೆಸುವಂಥ ಪ್ರಯತ್ನ ಮಾಡೋಣ..
ಶಿವಣ್ಣ ನಮಗೆಲ್ಲರಿಗೂ ಪ್ರೋತ್ಸಾಹ ಕೊಡ್ತಿದಾರೆ.. ಅವ್ರು ಇಲ್ಲಿರೋದೇ ನಮ್ಮೆಲ್ಲರಿಗೂ ಸ್ಪೂರ್ತಿ.. ಐಫಾದವ್ರಿಗೆ ಒಂದು ಹೇಳೋಕೆ ಇಷ್ಟಪಡ್ತೀನಿ.. ಹೈದ್ರಾಬಾದ್‌ನಲ್ಲಿ ನಡೆಸಿದ್ದೀರಿ, ವೆರಿಗುಡ್.. ಇಲ್ಲಿ ನಡೆಸ್ತಾ ಇದೀರ.. ಬೆಂಗಳೂರಿಗೆ ಕೂಡ ಬರ್ಲಿ...
ಕರ್ನಾಟಕಕ್ಕೆ ಸ್ವಲ್ಪ ನಮ್ ಪ್ರೀತಿ ತೋರ್ಸೋಣ.. ಬೆಂಗಳೂರು ಪ್ರೀತಿ, ಬೆಂಗಳೂರಿ ಆಡಿಯನ್ಸ್ ಖದರ್, ಹಾಗೂ ಬೆಂಗಳೂರು ಸ್ಟೈಲ್ ಸ್ವಲ್ಪ ತೋರಿಸೋಕೆ ಇಷ್ಟಪಡ್ತೀವಿ.. ಥ್ಯಾಂಕ್ಸ್ ಎಂದು ನಟ ಯಶ್ ಅವರು ಅಂದು ಐಫಾ (IIFA) ವೇದಿಕೆ ಮೇಲೆ ಹೇಳಿದ್ದರು.
International Indian Film Academy Awards (ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ನಟ ಯಶ್ ಅವರು 2014ರಲ್ಲಿ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾಗೆ ಹಾಗೂ 2018ರಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕಾಗಿ ಈ ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ನಟ ಯಶ್ ಅವರು ವೇದಿಕೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ಅಂದು ನಟ ಯಶ್ ಆಡಿರುವ ಈ ಮಾತುಗಳ ಬಗ್ಗೆ ಇಂದೂ ಸಹ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕಾಮೆಂಟ್‌ಗಳು ಹರಿದುಬರುತ್ತಲೇ ಇವೆ.
ಕಾರಣ, ಅಂದು ತಮಗೆ ಪ್ರಶಸ್ತಿ ಬಂದಿದ್ದರೂ ಕೂಡ, ಆ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದೇ, ನ್ಯಾಷನಲ್ ಅವಾರ್ಡ್ ವಿನ್ನರ್, ಈಗ ದಿವಂಗತರಾಗಿರುವ ನಟ ಸಂಚಾರಿ ವಿಜಯ್ ಬಗ್ಗೆ ಹೇಳಿದ್ದನ್ನು ಹಲವರು ಮೆಚ್ಚಿಕೊಂಡಿದ್ದಾರೆ.
ಜೊತೆಗೆ, ಶಿವಣ್ಣ, ಕನ್ನಡ ಭಾಷೆ ಹಾಗೂ ಕರ್ನಾಟಕದ ಬಗ್ಗೆ ನಟ ಯಶ್ ಅವರು ಅಂದು ಮಾತನ್ನಾಡಿದ್ದರು. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆ ಫಿಲಂಪೇರ್ ಸಮಾರಂಭ ನಡೆಯಬೇಕು, ಕನ್ನಡದ ಜನ, ಕರ್ನಾಟಕ ಹೆಸರು ಮಾಡಬೇಕು ಎಂಬ ಉದ್ದೇಶ ಹಾಗೂ ಆಸೆಯನ್ನು ಅಂದೇ ನಟ ಯಶ್ ಅವರು ವ್ಯಕ್ತಪಡಿಸಿದ್ದರು.
ಜೊತೆಗೆ, ಅ ಗುರಿಯನ್ನು ಅಂದೇ ಅವರು ತುಂಬಾ ಸ್ಪಷ್ಟವಾಗಿ ಹೊಂದಿದ್ದರು. ಅದೀಗ ಕಾರ್ಯರೂಪಕ್ಕೆ ತಂದು ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಜೊತೆಗೆ, ಬಿಗ್ ಬಜೆಟ್ ಹಾಗೂ ಇಂಟರ್‌ನ್ಯಾಷಬಲ್ ಲೆವೆಲ್‌ನ ಸಿನಿಮಾ 'ಟಾಕ್ಸಿಕ್' ನಟನೆಯ ಮೂಲಕ ಜಾಗತಿಕ ಐಕಾನ್, ಅಂದರೆ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲು ಹೊರಟಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್.
ಅಂದಹಾಗೆ, ನಟ ಯಶ್ ಅವರ ಅಪಾರ ನಿರೀಕ್ಷೆಯ ‘ಟಾಕ್ಸಿಕ್’ ಸಿನಿಮಾ 19 ಮಾರ್ಚ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಬಿಡುಗಡೆ ಆಗಿರುವ ಟೀಸರ್ ಬಳಿಕ ಟಾಕ್ಸಿಕ್ ಚಿತ್ರದ ಬಗ್ಗೆ ವಿವಾದಗಳು ಹಾಗೂ ಭಾರೀ ನಿರೀಕ್ಷೆ ಎರಡೂ ಮನೆ ಮಾಡಿವೆ. ಮುಂದಿನ ಬೆಳವಣಿಗೆಯನ್ನು ಜಗತ್ತು ಸೂಕ್ಷ್ಮವಾಗು ಕುತೂಹಲದಿಮದ ಕಾಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

