Kannada Tv Serial: ಕನ್ನಡ ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಸೀರಿಯಲ್‌ಗಳು ಪ್ರಸಾರ ಆಗುತ್ತಿವೆ. ಆದರೆ ಆ ಧಾರಾವಾಹಿಗಳಲ್ಲಿ ಮಾತ್ರ ಒಂದು ವಿಷಯ ಕಾಮನ್‌ ಆಗಿದೆ. ಇದನ್ನು ನೋಡಿ ವೀಕ್ಷಕರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಸಂಪೂರ್ಣ ಲೇಖನ ಓದಿ. 

ಅಮೃತಧಾರೆ ಧಾರಾವಾಹಿಯಿಂದ ಹಿಡಿದು ಇತ್ತೀಚೆಗೆ ಬಂದ ಗೌರಿ ಕಲ್ಯಾಣ ಸೀರಿಯಲ್‌ವರೆಗೆ ಬಹುತೇಕ ಧಾರಾವಾಹಿಗಳಲ್ಲಿ ಮೊದಲು ಜೋಡಿಗಳಿಗೆ ಮದುವೆ ಇಷ್ಟವೇ ಇರೋದಿಲ್ಲ, ಮದುವೆಯಾದಬಳಿಕ ಲವ್‌ ಮಾಡಲು ಆರಂಭಿಸುತ್ತಾರೆ. ಬಹುತೇಕ ಇದೇ ಚಿತ್ರಕಥೆ ಮುಂದುವರೆಯುತ್ತಿದೆ.

Add Asianetnews Kannada as a Preferred SourcegooglePreferred

ಮುದ್ದು ಸೊಸೆ ಧಾರಾವಾಹಿ

ಮುದ್ದು ಸೊಸೆ ಧಾರಾವಾಹಿಯಲ್ಲಿ ಭದ್ರ ಹಾಗೂ ವಿನಂತಿ ಮದುವೆವರೆಗೂ ತಯಾರಿ ನಡೆದಿದೆ. ಭದ್ರನಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಭದ್ರನಿಂದ ವಿನಂತಿ ಜೀವನ ಹಾಳಾಗಿದೆ ಎಂದು ಮನೆಯವರೆಲ್ಲ ಸೇರಿಕೊಂಡು ಇವರಿಬ್ಬರಿಗೂ ಮದುವೆ ಮಾಡಲು ನೋಡಿದ್ದರು. ಆಗಲೇ ಭದ್ರನಿಗೆ ವಿದ್ಯಾ ಜೊತೆ ಮದುವೆ ಆಗಿತ್ತು. ಇದೆಲ್ಲ ವಿನಂತಿ ಹಾಗೂ ಅವಳ ತಾಯಿ ಶಾರದಾ ಪ್ಲ್ಯಾನ್‌ ಆಗಿತ್ತು. ಕೊನೆಗೆ ಈ ಮದುವೆ ನಿಂತಿದೆ.

ಗೌರಿ ಕಲ್ಯಾಣ ಧಾರಾವಾಹಿ

ಅಕ್ಕ ಓಡಿ ಹೋದಳು ಎಂದು ಗೌರಿ, ವಿವೇಕ್‌ನನ್ನು ಮದುವೆ ಆಗುವ ಪರಿಸ್ಥಿತಿ ಬಂತು. ಇವರಿಬ್ಬರಿಗೂ ಈ ಮದುವೆ ಇಷ್ಟವೇ ಇರಲಿಲ್ಲ. ಆದರೂ ಕೂಡ ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಮದುವೆ ಆಗುವ ಹಾಗೆ ಆಯ್ತು.

ಗಂಧದ ಗುಡಿ ಧಾರಾವಾಹಿ

ಗಂಧದ ಗುಡಿ ಧಾರಾವಾಹಿಯಲ್ಲಿ ಕೂಡ ಮುತ್ತು, ಭಾರತಿ ಪ್ರೀತಿ ಮಾಡಿದ್ದರು. ಆದರೆ ಭಾರತಿ ಮನೆಯವರ ಹಠಕ್ಕೆ ಭಾರತಿ ಇನ್ನೊಬ್ಬನನ್ನು ಮದುವೆ ಆಗುವ ಹಾಗೆ ಆಯ್ತು.

ಅಂದಹಾಗೆ ಚಂದನಾ ಹಾಗೂ ಹರಿ ಕೂಡ ಮದುವೆ ಆಗಿದ್ದಾರೆ, ಚಂದನಾಗೆ ಈ ಮದುವೆ ಇಷ್ಟವೇ ಇಲ್ಲ.

ನಂದಗೋಕುಲ ಧಾರಾವಾಹಿ

ನಂದಗೋಕುಲ ಧಾರಾವಾಹಿಯಲ್ಲಿ ವಲ್ಲಭ ಹಾಗೂ ಅಮೂಲ್ಯ ಮದುವೆಯಾದರು. ಅಮ್ಮು ಬೇರೆಯವರನ್ನು ಪ್ರೀತಿಸಿ ಮೋಸ ಹೋದಳು. ಮನೆಯ ಮರ್ಯಾದೆ ಉಳಿಸಬೇಕು ಎಂದು ಇವರಿಬ್ಬರು ಮದುವೆ ಆಗಬೇಕಾಗಿ ಬಂತು.

ಆದಿ ಲಕ್ಷ್ಮೀ ಪುರಾಣ ಧಾರಾವಾಹಿ

ಆದಿ ಲಕ್ಷ್ಮೀ ಪುರಾಣ ಧಾರಾವಾಹಿಯಲ್ಲಿ ಕೂಡ ಆದಿ, ಲಕ್ಷ್ಮೀ ಮದುವೆ ಆಗಿದೆ. ಅತ್ತ ಸಂಜೀವ, ಅಮೃತಾ ಮದುವೆ ಆಗಿದೆ. ಲಕ್ಷ್ಮೀ, ಆದಿಗೆ ಈ ಮದುವೆ ಇಷ್ಟವೇ ಇಲ್ಲ. ಅತ್ತ ಅಮೃತಾಗೆ ಸಂಜೀವನನ್ನು ಮದುವೆ ಆಗೋದು ಇಷ್ಟವೇ ಇರಲಿಲ್ಲ.

ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿಯಲ್ಲಿ ಕೂಡ ಶಿವು ಹಾಗೂ ಪಾರು ಮದುವೆ ಆಗಿದೆ. ಈಗ ಇವರಿಬ್ಬರು ಲವ್‌ನಲ್ಲಿದ್ದಾರೆ, ಮೊದಲು ಪಾರು ಮೇಲೆ ಶಿವುಗೆ ಲವ್‌ ಇದ್ದರೂ ಕೂಡ, ಇವರಿಬ್ಬರು ಒಂದಾಗಿರಲಿಲ್ಲ.