- Home
- Entertainment
- TV Talk
- Bigg Bossಗೆ ಹೋಗೋ ಮೊದ್ಲೇ ದಾಖಲೆ ಹರಿದ್ರೆ, ತಲೆ ಬೋಳಿಸಿದ್ರೆ, ಸೆಗಣಿ ಹಚ್ಚಿದ್ರೆ ಮುಂದೆ ಒಳ್ಳೇದು; ಸಂಗೀತಾ ಶೃಂಗೇರಿ
Bigg Bossಗೆ ಹೋಗೋ ಮೊದ್ಲೇ ದಾಖಲೆ ಹರಿದ್ರೆ, ತಲೆ ಬೋಳಿಸಿದ್ರೆ, ಸೆಗಣಿ ಹಚ್ಚಿದ್ರೆ ಮುಂದೆ ಒಳ್ಳೇದು; ಸಂಗೀತಾ ಶೃಂಗೇರಿ
ಬಿಗ್ಬಾಸ್ 13ರ 'ಅಗ್ನಿಪರೀಕ್ಷೆ'ಯಲ್ಲಿ ಸಾಮಾನ್ಯ ಸ್ಪರ್ಧಿಗಳಿಗೆ ಗಿನ್ನೆಸ್ ದಾಖಲೆ ಹರಿಯುವಂತಹ ಕಠಿಣ ಟಾಸ್ಕ್ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಸಂಗೀತಾ ಶೃಂಗೇರಿ ಇದು ಸ್ಪರ್ಧಿಗಳ ಅನುಕೂಲಕ್ಕೆ ಎಂದು ಸಮರ್ಥಿಸಿಕೊಂಡರೂ, ಆಯ್ಕೆಗೂ ಮುನ್ನ ಇಂತಹ ಟಾಸ್ಕ್ ಔಚಿತ್ಯ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಅಗ್ನಿಪರೀಕ್ಷೆಯಲ್ಲಿ ಗೆದ್ದವರು, ಸೋತವರು
ಬಿಗ್ಬಾಸ್ 13ರಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದ್ದು, ಇದಾಗಲೇ ಅಗ್ನಿಪರೀಕ್ಷೆಯ ರೌಂಡ್ಗಳು ಮುಗಿದಿವೆ. ಕೆಲವರು ಸೆಲೆಕ್ಟ್ ಆಗಿದ್ದು, ಕೆಲವರನ್ನು ಪೆಂಡಿಂಗ್ನಲ್ಲಿ ಇಡಲಾಗಿದೆ.
ಅಗ್ನಿಪರೀಕ್ಷೆಯಲ್ಲಿ ವಿವಿಧ ಟಾಸ್ಕ್
ಆದರೆ, ಅಗ್ನಿಪರೀಕ್ಷೆಯ ಹೆಸರಿನಲ್ಲಿ ತಲೆ ಬೋಳಿಸುವಂತೆ ಮಾಡಿದ್ದು, ಸೆಗಣಿ ಮೆತ್ತಿಸಿದ್ದು, ಸಾಲದು ಎನ್ನುವುದಕ್ಕೆ ಗಿನ್ನೆಸ್ ದಾಖಲೆಯನ್ನೇ ಹರಿಯುವಂತೆ ಮಾಡಿದ್ದು, ಒಬ್ಬಾಕೆಗೆ ಫೋನ್ ಮಾಡಿ ಕೆಲಸ ಬಿಡುವಂತೆ ಹೇಳಿರುವುದು... ಇವೆಲ್ಲವೂ ಸಾಕಷ್ಟು ಟ್ರೋಲ್ ಕೂಡ ಆಗುತ್ತಿದೆ. ಗಿನ್ನೆಸ್ ದಾಖಲೆಯಂಥ ಜೀವನ ಪರ್ಯಂತದ ದಾಖಲೆಯನ್ನು, ಒಂದು ಷೋಗೋಸ್ಕರ ಹರಿದ ಹಾಗೂ ಹರಿಸುವಂತೆ ಕೆಲಸ ಮಾಡಿರುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.
ಸಂಗೀತಾ ಶೃಂಗೇರಿ ಸ್ಪಷ್ಟನೆ
ಇವುಗಳ ಬಗ್ಗೆ ತೀರ್ಪುಗಾರರಲ್ಲಿ ಒಬ್ಬರಾಗಿರುವ ಬಿಗ್ಬಾಸ್ ಸ್ಪರ್ಧಿಯಾಗಿದ್ದ, ನಟಿ ಸಂಗೀತಾ ಶೃಂಗೇರಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. televisionjanataparty ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ.
ನನಗೂ ಸಮಸ್ಯೆಯಾಗಿತ್ತು
ಇದರಲ್ಲಿ ಸಂಗೀತಾ ಅವರು, ಇದೇನೂ ಕಾಮನ್ಮ್ಯಾನ್ಗೆ ಮಾತ್ರ ಮಾಡಿದ್ದಲ್ಲ. ಸೆಲೆಬ್ರಿಟಿಗಳಿಗೂ ಸಾಕಷ್ಟು ಟಫ್ ಟಾಸ್ಕ್ ನೀಡಲಾಗಿತ್ತು. ನನಗೆ ಕಣ್ಣಿಗೆ ಸಮಸ್ಯೆಯಾಗಿದ್ದು ಗೊತ್ತಿರಬಹುದು, ವಿನಯ್ ಗೌಡ ಅವರು ಸಾಕಷ್ಟು ವರ್ಷದಿಂದ ಇದಕ್ಕಾಗಿ ಟ್ರೈ ಮಾಡಿದ್ದರು, ಆದ್ದರಿಂದ ಬಿಗ್ಬಾಸ್ಗೆ ಹೋಗುವಾಗ ಎಲ್ಲರಿಗೂ ಇದು ಕಾಮನ್ ಎಂದಿದ್ದಾರೆ.
ಮುಂದೆ ಒಳ್ಳೆಯದಾಗತ್ತೆ
ನಮಗೆಲ್ಲಾ ಬಿಗ್ಬಾಸ್ ಒಳಗೆ ಹೋದ ಮೇಲೆ ಏಕಾಏಕಿ ಟಾಸ್ಕ್ ಕೊಡಲಾಗಿತ್ತು. ಆಗ ತುಂಬಾ ತೊಂದರೆಯಾಗಿತ್ತು. ಆದರೆ ಈಗ ಕಾಮನ್ ಮ್ಯಾನ್ಗೆ ಮೊದಲೇ ಟಾಸ್ಕ್ ಕೊಟ್ಟಿರುವ ಕಾರಣ, ಅವರಿಗೆ ಮುಂದೆ ಎಲ್ಲಾ ಈಸಿಯಾಗುತ್ತದೆ. ಬಿಗ್ಬಾಸ್ ಮನೆಯೊಳಕ್ಕೆ ಹೋದಾಗ ಅವರು ನಮ್ಮ ಹಾಗೆ ಕಷ್ಟ ಪಡಬೇಕಾಗಿ ಬರುವುದಿಲ್ಲ ಎಂದಿದ್ದಾರೆ.
ನೆಟ್ಟಿಗರು ಏನಂದ್ರು?
ಆದ್ದರಿಂದ ಇಂಥ ಟಾಸ್ಕ್ ಮಾಡಿರುವುದು ತಪ್ಪೇನಲ್ಲ. ಹೀಗೆಲ್ಲಾಮಾಡಿದ್ರೆ ಅವರಿಗೆ ಮುಂದೆ ಸುಲಭವಾಗುತ್ತದೆ ಎಂದಿದ್ದಾರೆ. ಆದರೆ ಇದಕ್ಕೂ ಪರ-ವಿರೋಧ ಕಮೆಂಟ್ಸ್ ಬರುತ್ತಿವೆ. ನಿಮಗೆ ಕೊಟ್ಟಿರುವುದು ಸೆಲೆಕ್ಟ್ ಆದಮೇಲಿನ ಟಾಸ್ಕ್. ಆದರೆ ಇಲ್ಲಿ ಇರುವವರು ಸೆಲೆಕ್ಟ್ ಆಗ್ತಾರೋ ಇಲ್ಲವೋ ಗೊತ್ತಿಲ್ಲ. ಅಂಥವರ ಬಳಿ ಗಿನ್ನೆಸ್ ದಾಖಲೆಯನ್ನು ಹರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

