- Home
- Entertainment
- TV Talk
- Bigg Boss 13ಕ್ಕೆ ಆಯ್ಕೆ: ಇವರಿಗೆ ಹೊಡೆಯಿತು ಜಾಕ್ಪಾಟ್? ಫೈನಲಿಸ್ಟ್ ಆದ ಅದೃಷ್ಟವಂತರು ಇವರೇ ನೋಡಿ
Bigg Boss 13ಕ್ಕೆ ಆಯ್ಕೆ: ಇವರಿಗೆ ಹೊಡೆಯಿತು ಜಾಕ್ಪಾಟ್? ಫೈನಲಿಸ್ಟ್ ಆದ ಅದೃಷ್ಟವಂತರು ಇವರೇ ನೋಡಿ
ಬಿಗ್ಬಾಸ್ 13ಕ್ಕೆ ಜನಸಾಮಾನ್ಯರ ಪ್ರವೇಶಕ್ಕಾಗಿ ನಡೆದ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ಸೆಗಣಿ ಮೆತ್ತಿಕೊಳ್ಳುವುದು, ತಲೆ ಬೋಳಿಸಿಕೊಳ್ಳುವಂತಹ ಕಠಿಣ ಸವಾಲುಗಳನ್ನು ನೀಡಲಾಯಿತು. ಈ ಎಲ್ಲಾ ಪರೀಕ್ಷೆಗಳನ್ನು ದಾಟಿ, 20 ವರ್ಷದ ಯುವತಿ ಮತ್ತು 72 ವರ್ಷದ ಹಿರಿಯ ಮಹಿಳೆ ಸ್ಪರ್ಧಿಗಳಾಗಿ ಗಮನ ಸೆಳೆದಿದ್ದಾರೆ

ಬಿಗ್ಬಾಸ್ 13 ಕ್ಕೆ ಕೆಲವೇ ದಿನ ಬಾಕಿ
ಬಿಗ್ಬಾಸ್ 13 (Bigg Boss 13) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಬಿಗ್ಬಾಸ್ ವಿಶೇಷತೆ ಎಂದರೆ ಜನ ಸಾಮಾನ್ಯರಿಗೂ ಅವಕಾಶ ಕಲ್ಪಿಸಿರುವುದು. ಇದಕ್ಕಾಗಿ ಲಕ್ಷಾಂತರ ಮಂದಿ ಬಿಗ್ಬಾಸ್ ಕನಸು ಕಂಡು ವಿಡಿಯೋ ಮಾಡಿ ಕಳುಹಿಸಿದ್ರು. ಅದರಲ್ಲಿ ಫೈನಲ್ ಆಗಿ ಸೆಲೆಕ್ಟ್ ಆಗಿದ್ದು 60 ಮಂದಿ ಮಾತ್ರ.
60 ಮಂದಿ ಫೈನಲಿಸ್ಟ್
ಈ 60 ಜನರ ಪೈಕಿ ಯಾರು ಬಿಗ್ಬಾಸ್ ಮನೆಗೆ ಫೈನಲ್ ಆಗಿ ಹೋಗಲಿದ್ದಾರೆ ಎನ್ನುವ ಬಗ್ಗೆ ಅವರಿಗೆ ಅಗ್ನಿ ಪರೀಕ್ಷೆ ನಡೆದಿದೆ. ಇದಕ್ಕೆ ಬಿಗ್ಬಾಸ್ ಅಗ್ನಿ ಪರೀಕ್ಷೆಗೆ ತೀರ್ಪುಗಾರರಾಗಿ ಬಿಗ್ಬಾಸ್ ವಿನ್ನರ್ಸ್, ಫೈನಲಿಸ್ಟ್ಸ್ ಹಾಗೂ ನಟರಾಗಿರುವ ಶೃತಿ, ಸಂಗೀತಾ ಶೃಂಗೇರಿ, ವಿನಯ್ ಗೌಡ ಹಾಗೂ ಚಂದನ್ ಶೆಟ್ಟಿ ಬಂದಿದ್ದರು. ಇವರು ಸ್ಪರ್ಧಿಗಳಿಗೆ ಥಹರೇವಾರಿ ಚಾಲೆಂಜಸ್ ಕೊಟ್ಟಿದ್ದರು.
ವಿವಿಧ ಟಾಸ್ಕ್
ಸ್ಪರ್ಧಿಗಳಿಗೆ ವಿವಿಧ ಟಾಸ್ಕ್ ನೀಡಲಾಗಿತ್ತು. ಕೆಲವರಿಗೆ ಸೆಗಣಿ ಮೆತ್ತಿಕೊಳ್ಳಲು ಹೇಳಿದ್ರೆ, ಅವರು ಮೆತ್ತಿಕೊಂಡಿದ್ದರು. ಮತ್ತೊಬ್ಬರಿಗೆ ಅವರಿಗೆ ಸಿಕ್ಕಿರುವ ಗಿನ್ನೆಸ್ ಅವಾರ್ಡ್ ಸರ್ಟಿಫಿಕೇಟ್ ಹರಿಯಲು ಹೇಳಿದ್ರೆ ಅದನ್ನೂ ಮಾಡಿದ್ದರು. ಮತ್ತೆ ಕೆಲವರಿಗೆ ಇನ್ನೇನೋ ಮಾಡಲು ಹೇಳಿದ್ದರು. ಇನ್ನೋರ್ವ ಸ್ಪರ್ಧಿಗೆ ನೀವಾಗಿಯೇ ನೀವು ತಲೆ ಬೋಳಿಸಿಕೊಳ್ಳಿ ಎಂದರೆ, ಆ ಸ್ಪರ್ಧಿ ಅದನ್ನೂ ಮಾಡಿದ್ದರು. ಮತ್ತೊಬ್ಬ ಸ್ಪರ್ಧಿಗೆ ನಿಮಗೆ ಸಂಗೀತಾ ಕಂಡರೆ ಇಷ್ಟ ಎನ್ನಬೇಕು ಎಂದಾಗ, ಆ ಸ್ಪರ್ಧಿ, ನಾನು ಹೀಗೆಯೇ ಇರೋದು, ಹೀಗೆಯೇ ಹೋಗೋದು ಎಂದಿದ್ದಾರೆ. ಆಗ ಅವರಿಗೆ ವಿನಯ್ ಗೌಡ ಹಾಗಿದ್ರೆ ಇಲ್ಲಿಗೆ ಬಂದದ್ದು ಯಾಕೆ, ಔಟ್ ಎಂದು ಗದರಿಸಿದ್ದರು.
20ರ ಕುಮಾರಿ
ಇವೆಲ್ಲವುಗಳ ಬಳಿಕ, ಈಗ ಅಂತಿಮವಾಗಿ ಇಬ್ಬರು ಫೈನಲಿಸ್ಟ್ ಆಗಿರುವ ಬಗ್ಗೆ ವಾಹಿನಿ ಪ್ರೊಮೋ ಶೇರ್ ಮಾಡಿಕೊಂಡಿದೆ. 20 ವರ್ಷದ ಕುಮಾರಿ ಫೈನಲಿಸ್ಟ್ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿದೆ. ಛೋಟಾ ಪ್ಯಾಕೆಟ್, ಬಡಾ ಧಮಾಕಾ ಎನ್ನುತ್ತಲೇ ವೇದಿಕೆ ಮೇಲೆ ಬಂದ ಕುಮಾರಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟಿ ಶ್ರುತಿ ಅವರು ಈಕೆಯ ಮುಗ್ಧತೆ ನನಗೆ ಇಷ್ಟವಾಯ್ತು ಎಂದಿದ್ದಾರೆ. ಕೊನೆಗೆ ಆಕೆಯನ್ನು ಫೈನಲಿಸ್ಟ್ ಎಂದು ಘೋಷಿಸಿದಾಗ, ತೀರ್ಪುಗಾರರಾಗಿರುವ ಸಂಗೀತಾ ಶೃಂಗೇರಿ ಅವರು ಮುತ್ತು ಕೊಟ್ಟು ಶುಭ ಹಾರೈಸಿದ್ದಾರೆ.
ಹಿರಿಯ ಸ್ಪರ್ಧಿ
ಇನ್ನೋರ್ವರು ಸುಮಾರು 72 ವರ್ಷದ ರತ್ನಾ ಅವರು. ಬಹುಶಃ ಇಲ್ಲಿಯವರೆಗಿನ ಅತಿ ಹಿರಿಯ ಸ್ಪರ್ಧಿ ಇವರೇ ಇರಬಹುದು. ಇವರ ಟ್ಯಾಲೆಂಟ್ ನೋಡಿ, ತೀರ್ಪುಗಾರರು ಮೆಚ್ಚಿಕೊಂಡಿದ್ದು, ಇವರೂ ಫೈನಲಿಸ್ಟ್ ಆಗುವ ಸಾಧ್ಯತೆ ಇದೆ. ಇವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು.
ಬಂಗಾರಪೇಟೆಯ ಆನೆ
ರತ್ನಾ ಅವರಿಗೆ ವಿನಯ್ ಗೌಡ ಅವರು ಊಟದ ಕೊರತೆ ಎದುರಾದರೆ ಏನು ಮಾಡುವಿರಿ ಎಂದು ಪ್ರಶ್ನಿಸಿದಾಗ, ರತ್ನಾ ಅವರು ತೊಡೆ ತಟ್ಟಿ ಆಡುತ್ತೇನೆ ಎಂದರು. ಇದು ತೀರ್ಪುಗಾರರಿಗೆ ಇಷ್ಟವಾಗಿ, ವಿನಯ್ ಅವರು ರತ್ನಾ ಅವರಿಗೆ ಬಂಗಾರಪೇಟೆಯ ಆನೆ ಎಂದು ಹೆಸರು ಇಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

