MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ದಿ ಹಾಲಿವುಡ್​ ರಿಪೋರ್ಟರ್​ನಲ್ಲಿ Lakshmi Nivasa ಭಾವನಾ: ನಟಿ ದಿಶಾ ಮದನ್​ ಬಾಲ್ಯದ ಕನಸು ನನಸಾಯ್ತು

ದಿ ಹಾಲಿವುಡ್​ ರಿಪೋರ್ಟರ್​ನಲ್ಲಿ Lakshmi Nivasa ಭಾವನಾ: ನಟಿ ದಿಶಾ ಮದನ್​ ಬಾಲ್ಯದ ಕನಸು ನನಸಾಯ್ತು

'ಲಕ್ಷ್ಮೀ ನಿವಾಸ' ಧಾರಾವಾಹಿ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿಯಾಗಿ, ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಅವಕಾಶಕ್ಕಾಗಿ ಅವರು ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ಧನ್ಯವಾದ ತಿಳಿಸಿದ್ದಾರೆ.

2 Min read
Author : Suchethana D
Published : Feb 10 2026, 06:22 PM IST
Share this Photo Gallery
  • FB
  • TW
  • Linkdin
  • Whatsapp
16
ಲಕ್ಷ್ಮೀ ನಿವಾಸ ಭಾವನಾ
Image Credit : Instagram

ಲಕ್ಷ್ಮೀ ನಿವಾಸ ಭಾವನಾ

ನಟಿ ದಿಶಾ ಮದನ್​ (Disha Madan) ಎಂದರೆ ಕಿರುತೆರೆ ವೀಕ್ಷಕರಿಗೆ ಯಾರೆಂದು ತಿಳಿಯದೇ ಹೋಗಬಹುದು. ಆದರೆ ಲಕ್ಷ್ಮೀನಿವಾಸ ಸೀರಿಯಲ್​ ಭಾವನಾ, ಸಿದ್ದೇಗೌಡ್ರ ಮುದ್ದಿನ ಹೆಂಡ್ತಿ ಎಂದರೆ, ಸಾಫ್ಟ್​ ಆಗಿರೋ ತುಂಬಾ ಮಿತವಾಗಿ ಮಾತನಾಡುವ ಹೆಣ್ಣುಮಗಳೊಬ್ಬಳು ಕಣ್ಣೆದುರು ಬರುತ್ತಾಳೆ. ಆಕೆಯೇ ನಿಜ ಜೀವನದಲ್ಲಿ ಸ್ಟೈಲಿಷ್​ ಆಗಿರೋ ನಟಿ ದಿಶಾ ಮದನ್​.

26
ಕೇನ್ಸ್​ ಫಿಲ್ಮ್ ​ಫೆಸ್ಟಿವಲ್​
Image Credit : instagram

ಕೇನ್ಸ್​ ಫಿಲ್ಮ್ ​ಫೆಸ್ಟಿವಲ್​

ಕಳೆದ ವರ್ಷ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ನ ರೆಡ್​​ ಕಾರ್ಪೆಟ್​ ಮೂಲಕ ಮಿಂಚುವ ಮೂಲಕ ಕರುನಾಡಿಗೂ ಕೀರ್ತಿ ತಂದಿರುವ ನಟಿ ಈಕೆ. ಅಸಲಿ ಜೀವನದಲ್ಲಿ ಇಬ್ಬರು ಮಕ್ಕಳಾದ ಮೇಲೂ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ ನಟಿ.

Related Articles

Related image1
ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth
Related image2
ಕುತೂಹಲದ ಲವ್​ಸ್ಟೋರಿ ಹೇಳಿದ ನಟಿ ದಿಶಾ: ಪೂರ್ಣ ಸಂದರ್ಶನದಲ್ಲಿ 8 ಕನ್ನಡ ಪದ ಬಳಕೆಗೆ ನೆಟ್ಟಿಗರ ಧನ್ಯವಾದ!
36
ಬಾಲ್ಯದ ಕನಸು
Image Credit : Instagram

ಬಾಲ್ಯದ ಕನಸು

ಇದೀಗ ಅವರು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಒಂದು ಪೋಸ್ಟ್​ ಶೇರ್​ ಮಾಡಿದ್ದಾರೆ. ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್​ ಅವರ ಜೊತೆಗೆ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಬಾಲ್ಯದಿಂದಲೂ ಕರಣ್ ಜೋಹರ್​ ಅವರನ್ನು ನೋಡುತ್ತಾ ಬೆಳೆದವಳು. ಇದೀಗ ಅವರ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಅವಕಾಶ ಸಿಕ್ಕಿರುವುದು ತಮ್ಮ ಪುಣ್ಯ ಎಂದು ಹೇಳಿದ್ದಾರೆ.

46
ಹಾಲಿವುಡ್ ರಿಪೋರ್ಟರ್ ಇಂಡಿಯಾ
Image Credit : Instagram

ಹಾಲಿವುಡ್ ರಿಪೋರ್ಟರ್ ಇಂಡಿಯಾ

ಇದಕ್ಕಾಗಿ ಅವರು, ಹಾಲಿವುಡ್ ರಿಪೋರ್ಟರ್ ಇಂಡಿಯಾ (The Hollywood Reporter India)ಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇದು ಪ್ರತಿಷ್ಠಿತ ಜಾಗತಿಕ ಮನರಂಜನಾ ಬ್ರ್ಯಾಂಡ್‌ನ ಭಾರತೀಯ ಆವೃತ್ತಿಯಾಗಿದ್ದು, ಇದನ್ನು 2024 ರಲ್ಲಿ RPSG ಲೈಫ್‌ಸ್ಟೈಲ್ ಮೀಡಿಯಾ ಪ್ರಾರಂಭಿಸಿತು. ಇದು ಸುದ್ದಿ, ವಿಮರ್ಶೆಗಳು ಮತ್ತು ಸಂದರ್ಶನಗಳ ಮೂಲಕ ಪ್ರದೇಶಗಳು ಮತ್ತು ಭಾಷೆಗಳಲ್ಲಿ ಭಾರತೀಯ ಸಿನಿಮಾ, ಸ್ಟ್ರೀಮಿಂಗ್, ದೂರದರ್ಶನ, ಫ್ಯಾಷನ್ ಮತ್ತು ಜೀವನಶೈಲಿಯನ್ನು ಒಳಗೊಂಡ ಪ್ರಮುಖ, ಸಮಗ್ರ ಮಾಧ್ಯಮ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಕರಣ್​ ಜೋಹರ್​ ಅವರನ್ನು ಭೇಟಿಯಾಗಲು ನಟಿಗೆ ಅವಕಾಶ ಸಿಕ್ಕಿದೆ.

56
ಸೀರಿಯಲ್​, ಸಿನಿಮಾಗಳಲ್ಲಿ ನಟನೆ
Image Credit : Radiocity Kannada Instagram

ಸೀರಿಯಲ್​, ಸಿನಿಮಾಗಳಲ್ಲಿ ನಟನೆ

ಇನ್ನು ನಟಿ ಕುರಿತು ಹೇಳುವುದಾದರೆ, ಕನ್ನಡ ಕಿರುತೆರೆಯ ಜನಪ್ರಿಯ ನಟಿ ದಿಶಾ ಮದನ್. ಇವರು ಕುಲವಧು ಸೀರಿಯಲ್ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಬಳಿಕ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ, ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು.

66
ಅಳುಮುಂಜಿ ಪಾತ್ರ
Image Credit : our own

ಅಳುಮುಂಜಿ ಪಾತ್ರ

ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಆಗಿ ಮಿಂಚುತ್ತಿದ್ದಾರೆ. ತುಂಬಾನೇ ಪಾಪದ ಹುಡುಗಿಯ ಪಾತ್ರಕ್ಕೆ ದಿಶಾ ಜೀವ ತುಂಬಿದ್ದಾರೆ. ಈ ಧಾರಾವಾಹಿಯಲ್ಲಿ ಅಳುಮುಂಜಿ ಪಾತ್ರ ಎಂದೂ ಫೇಮಸ್​ ಆಗಿತ್ತು. ಆದರೆ ಇದೀಗ ಭಾವನಾ ಸ್ಟ್ರಾಂಗ್​ ಆಗಿ ಹೊರಹೊಮ್ಮಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಕೇನ್ಸ್ ಚಲನಚಿತ್ರೋತ್ಸವ
ಬಾಲಿವುಡ್
ಕರಣ್ ಜೋಹರ್

Latest Videos
Recommended Stories
Recommended image1
Bhagyalakshmi Serial: ಎಲ್ಲರ ಅಂದಾಜು ಮೀರಿ ದುಡುಕಿದ ತಾಂಡವ್;‌ ಹೀಗೆ ಮಾಡ್ತಾನೆ ಅಂತ ನಂಬ್ತೀರಾ?
Recommended image2
ಕನ್ನಡ ಸೀರಿಯಲ್​ಗಳಲ್ಲಿ ಈಗ ಫಸ್ಟ್​ನೈಟ್​ ಸಮಯ: Shravani-Subramanya ಕೊಟ್ರು ಚಾಲನೆ!
Recommended image3
ಯಾರಿಗೆ 3 ಗಂಡಂದಿರು ಇದ್ದಾರೆ? Bigg Boss Kannada ಮಹಿಳಾ ಸ್ಪರ್ಧಿ ಬಗ್ಗೆ ಬಾಂಬ್‌ ಹಾಕಿದ ಚೈತ್ರಾ ಕುಂದಾಪುರ
Related Stories
Recommended image1
ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth
Recommended image2
ಕುತೂಹಲದ ಲವ್​ಸ್ಟೋರಿ ಹೇಳಿದ ನಟಿ ದಿಶಾ: ಪೂರ್ಣ ಸಂದರ್ಶನದಲ್ಲಿ 8 ಕನ್ನಡ ಪದ ಬಳಕೆಗೆ ನೆಟ್ಟಿಗರ ಧನ್ಯವಾದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved