- Home
- Entertainment
- TV Talk
- Karna Serial Twist: ಡಾ.ನಿಧಿ ಈಗ ಲಾಯರ್ ನಿಧಿ! Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?
Karna Serial Twist: ಡಾ.ನಿಧಿ ಈಗ ಲಾಯರ್ ನಿಧಿ! Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?
ಕರ್ಣ ಸೀರಿಯಲ್ನಲ್ಲಿ, ರಮೇಶ್‌ನ ಸಂಚಿನಿಂದ ಕರ್ಣ ಜೈಲಿನಲ್ಲಿದ್ದಾನೆ. ಸರಿಯಾದ ಸಮಯಕ್ಕೆ ಲಾಯರ್ ಕೈಕೊಟ್ಟಾಗ, ಲಾಯರ್ ಆಗಿ ಕೋರ್ಟ್‌ಗೆ ಪ್ರವೇಶಿಸಿ ಎಲ್ಲರಿಗೂ ಆಘಾತ ನೀಡಿದ್ದಾಳೆ. ಕಾನೂನು ಪದವಿ ಇಲ್ಲದೆ ವಾದಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಲೇಖನ ಚರ್ಚಿಸುತ್ತದೆ.

ಕರ್ಣ ಸೀರಿಯಲ್ ಟ್ವಿಸ್ಟ್
ಕರ್ಣ ಸೀರಿಯಲ್ನಲ್ಲಿ (Karna Serial)ನಲ್ಲಿ ಈಗ ಭಾರಿ ಅಂದ್ರೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಕರ್ಣನನ್ನು ಪರ್ಮನೆಂಟ್ ಆಗಿ ಜೈಲಿನಲ್ಲಿಯೇ ಉಳಿಸುವ ಸಲುವಾಗಿ ಭ್ರಷ್ಟ ಆರೋಗ್ಯ ಸಚಿವನಿಗೂ ಲಂಚ ಕೊಟ್ಟು, ಕರ್ಣ ಪರವಾಗಿ ವಾದಿಸ್ತಿರೋ ಲೇಡಿ ಲಾಯರ್ಗೂ ಲಂಚ ಕೊಟ್ಟ ರಮೇಶ್, ಬಹುತೇಕ ಸಕ್ಸಸ್ ಆಗಿ ಹೋಗಿದ್ದ.
ಲಂಚ ಪಡೆದ ಲಾಯರ್ ಗಾಯಬ್
ಇತ್ತ ಕರ್ಣನನ್ನು ಕಾಪಾಡಲು ಸಾಕ್ಷಿ ಸಹಿತ ಬಂದಿದ್ದ ವಿವಿಧ ಸೀರಿಯಲ್ ನಟಿಮಣಿಗಳ ಕಾರನ್ನು ಅಪಘಾತ ಮಾಡಿಸಿದ್ದಾನೆ ರಮೇಶ್. ನಿತ್ಯಾ ಅಪಘಾತದಲ್ಲಿ ಗಾಯಗೊಂಡಿದ್ದಾಳೆ. ಉಳಿದವರು ಕೂಡ ಅಪಘಾತಕ್ಕೆ ಸಿಲುಕಿದ್ದಾರೆ. ರಮೇಶ್ನಿಂದ ಲಂಚದ ರುಚಿ ಕಂಡ ಲಾಯರ್ ಸರಿ ಟೈಮ್ಗೆ ಕೈಕೊಟ್ಟಿದ್ದಾಳೆ. ಕೋರ್ಟ್‌ಗೆ ಹಾಜರು ಆಗಲಿಲ್ಲ. ಮತ್ತೆ ಯಾವುದೇ ಲಾಯರ್ ಕರ್ಣನ ಪರವಾಗಿ ವಾದ ಮಂಡಿಸುವುದಕ್ಕೂ ಅಡ್ಡಿ ಪಡಿಸಿದ್ದಾನೆ ರಮೇಶ್. ಇನ್ನೇನು ಕೇಸ್ ಆರಂಭವಾಗ್ತಿದ್ದಂತೆಯೇ ಲಾಯರ್ ಬರದ ಕಾರಣ, ಕೇಸ್ ಅನ್ನು ಮುಂದಕ್ಕೆ ಹಾಕುವುದಾಗಿ ಜಡ್ಜ್ ಹೇಳುತ್ತಿದ್ದಂತೆಯೇ ನಾನು ವಾದ ಮಾಡ್ತೇನೆ ಎಂದು ನಿಧಿ ಲಾಯರ್ ಆಗಿ ಬಂದಿದ್ದಾಳೆ.
ನಿಧಿಯ ಭರ್ಜರಿ ಎಂಟ್ರಿ
ನಿಧಿಯ ಎಂಟ್ರಿ ಏನಾದರೂ ಸಿನಿಮಾದಲ್ಲಿ ಆಗಿದ್ರೆ ಅಭಿಮಾನಿಗಳು ಶಿಳ್ಳೆ ಹೊಡೆಯುತ್ತಿದ್ದರು. ಆದರೆ ಸೀರಿಯಲ್ನ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಬಿಸಿಬಿಸಿ ಚರ್ಚೆ ಶುರುವಾಗಿದೆ. ನಿಧಿ ಲಾ ಡಿಗ್ರಿ ಪಡೆದದ್ದು ಯಾವಾಗ, ಅವಳು ಮಾಡಿದ್ದು ಎಂಬಿಬಿಎಸ್ ಅಲ್ವಾ? ಅಯ್ಯಬ್ಬಾ ಈ ಸೀರಿಯಲ್ಗಳಲ್ಲಿ ಏನ್ ಬೇಕಾದ್ರೂ ಆಗತ್ತೆ, ಸ್ವಲ್ಪವೂ ಸೆನ್ಸ್ ಅನ್ನೋದೇ ಇರಲ್ಲ ಎಂದೆಲ್ಲಾ ಹೇಳಲಾಗುತ್ತಿದೆ.
ಲಾಯರ್ ಆಗಿದ್ದು ಯಾವಾಗ?
ಹಾಗಿದ್ರೆ ಕಾನೂನು ಏನ್ ಹೇಳತ್ತೆ ನೋಡೋಣ. ಈ ಸೀರಿಯಲ್ನಲ್ಲಿ ನಿಧಿ ಕೂಡ ಎಂಬಿಬಿಎಸ್ ಮಾಡುವ ಮೊದಲು ಲಾ ಓದಿದ್ದಳು ಅಂತೇನೋ ಒಂದಿಷ್ಟು ಕಥೆ ಕಟ್ಟಿದರೂ ಅಚ್ಚರಿಯಿಲ್ಲ. ಈ ಹಿಂದೆ ಕೆಲವು ಸೀರಿಯಲ್ಗಳಲ್ಲಿಯೂ ಇದೇ ಆಗಿದ್ದು. ಆದರೆ ಕಾನೂನು ಪದವಿ ಪಡೆಯದೇ ಕೋರ್ಟ್‌ಗೆ ಹೋಗಬಹುದಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಅದೂ ಕಪ್ಪು ಕೋಟ್ ಧರಿಸಿ ಈ ನಿಧಿಯಂತೆ ಹೋಗಬಹುದಾ?
ಕಾನೂನು ಹೇಳುವುದು ಏನು?
ಕಾನೂನಿನ ಪ್ರಕಾರ, ನಮ್ಮ ಕೇಸ್ ನಲ್ಲಿ ನಾವೇ ವಾದ ಮಾಡಬಹುದು. (ನೆನಪಿರಲಿ... ಸ್ವಂತ ಕೇಸ್ ಮಾತ್ರ-ಬೇರೆಯವರ ಪರ ಅಲ್ಲ) ಅದಕ್ಕೆ ಕೋರ್ಟ್ ಭಾಷೆಯಲ್ಲಿ (Party in Person) ಎನ್ನುತ್ತಾರೆ. ಅದಕ್ಕೆ ಯಾವುದೇ ಪದವಿ, ಲಾ ಡಿಗ್ರಿ ಏನೂ ಬೇಕೆಂದೇನೂ ಇಲ್ಲ. ಯಾರು ಬೇಕಾದರೂ ವಾದಿಸಬಹುದು. ವಕೀಲರ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ. ಆ ಸಂದರ್ಭದಲ್ಲಿ ವಕೀಲರ ಕೋಟ್ ಅಲ್ಲ, ಮಾಮೂಲಿ ಬಟ್ಟೆ ಧರಿಸಿಯೇ ಕೋರ್ಟ್ನಲ್ಲಿ ವಾದ ಮಾಡುವ ಅವಕಾಶವಿದೆ. ವಾದ ಮಾಡುವಾಗ, ನಮ್ಮ ಕೇಸ್ಗೆ ಸಂಬಂಧಿಸಿದ ಒಂದಿಷ್ಟು ಕಾನೂನು ವಿಷಯಗಳನ್ನು ತಿಳಿದುಕೊಂಡರೆ, ವಾದ ಮಂಡಿಸಲು ಅನುಕೂಲ ಆಗುತ್ತದೆ ಅಷ್ಟೇ.
ಬೇರೆಯವರ ಪರ ವಾದಿಸುವಂತಿಲ್ಲ
ಆದರೆ ಬೇರೆಯವರ ಪರವಾಗಿ ವಕೀಲಿ ವೃತ್ತಿಯಲ್ಲಿ ಎನ್ರೋಲ್ ಆದವರು ಬಿಟ್ಟರೆ ಯಾರೂ ವಾದಿಸುವಂತಿಲ್ಲ. ಇದಕ್ಕೆ ಅವಕಾಶ ಇಲ್ಲ. ಹಾಗೊಂದು ವೇಳೆ ಆಗಿದ್ದರೆ ಯಾರು ಬೇಕಾದರೂ ವಾದ ಮಾಡಬಹುದಿಲ್ಲ. ಲಾ ಡಿಗ್ರಿ ಎನ್ನುವುದು ಬೇಕೆಂದೇ ಇರಲಿಲ್ಲವಲ್ಲ! ಆದರೆ ಈಗ ನಿಧಿ ಬಂದಿದ್ದಾಳೆ. ಸೀರಿಯಲ್ ಸಕತ್ ಟ್ವಿಸ್ಟ್ ಪಡೆದುಕೊಂಡಿದೆ ಅಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

