- Home
- Entertainment
- TV Talk
- ಭಾರತೀಯ ನಾರಿ ಅಂತ ಹೇಳ್ತಾರಲ್ಲ, ಅವಳೇ ನನಗಿಷ್ಟ: ಕನಸಿನ ಕನ್ಯೆ ಕುರಿತು Karna Serial ಕಿರಣ್ ರಾಜ್
ಭಾರತೀಯ ನಾರಿ ಅಂತ ಹೇಳ್ತಾರಲ್ಲ, ಅವಳೇ ನನಗಿಷ್ಟ: ಕನಸಿನ ಕನ್ಯೆ ಕುರಿತು Karna Serial ಕಿರಣ್ ರಾಜ್
'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ನಿಜ ಜೀವನದಲ್ಲಿ ತಮ್ಮ ಕನಸಿನ ಕನ್ಯೆ ಸಂಸ್ಕೃತಿ, ಸಂಪ್ರದಾಯ ಬಲ್ಲ ಅಪ್ಪಟ ಭಾರತೀಯ ನಾರಿಯಾಗಿರಬೇಕು ಎಂದು ಹೇಳಿದ್ದಾರೆ. ಸದ್ಯ ಲವ್ ಮ್ಯಾರೇಜ್ ಒಂದೇ ಆಯ್ಕೆ ಎಂದಿರುವ ಅವರು, ನಿಜ ಜೀವನದಲ್ಲೂ ಸಮಾಜ ಸೇವೆಯ ಮೂಲಕ 'ಕರ್ಣ' ಎನಿಸಿಕೊಂಡಿದ್ದಾರೆ.

ಕರ್ಣನ ಮದುವೆ
Karna Serial ಕರ್ಣ ಉರ್ಫ್ ನಟ ಕಿರಣ್ ರಾಜ್ ನಿಜ ಜೀವನದಲ್ಲಿ ಇನ್ನೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಸದ್ಯ ಸೀರಿಯಲ್‌ನಲ್ಲಿ ನಿಧಿಯನ್ನು ಲವ್ ಮಾಡಿ ನಿತ್ಯಾಳ ಮನಸ್ಸನ್ನು ಕದ್ದಿರೋ ಕರ್ಣನಿಗೆ ಸಂಕಷ್ಟ ಎದುರಾಗಿದೆ. ಆದರೂ ನಿಧಿಗೆ ತನ್ನ ಮತ್ತು ನಿತ್ಯಾಳ ಲವ್ ವಿಷ್ಯ ಗೊತ್ತಾಗುವಂತೆ ಮಾಡಿ ನಿಧಿಯ ಜೊತೆ ಮದುವೆಯಾಗಲು ರೆಡಿಯಾಗಿದ್ದಾನೆ.

ಕನಸಿನ ಹುಡುಗಿ ಹೇಗಿರಬೇಕು
ಆದರೆ, ರಿಯಲ್ ಲೈಫ್‌ನಲ್ಲಿ ಮಾತ್ರ ಕರ್ಣ ಅಂದ್ರೆ ಕಿರಣ್ ರಾಜ್ ಅವರ ಬ್ಯಾಚುಲರ್ ಆಗಿದ್ದು, ಮದುವೆ ಯಾವಾಗ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಇದಾಗಲೇ ಹಲವಾರು ಬಾರಿ ಈ ಬಗ್ಗೆ ಮಾತನಾಡಿರುವ ಕಿರಣ್ ರಾಜ್ ಅವರು ಇದೀಗ, ತಮ್ಮ ಕನಸಿನ ಕನ್ಯೆ ಹೇಗಿರಬೇಕು ಎಂದು ತಿಳಿಸಿದ್ದಾರೆ.
ಅಪ್ಪಟ ಭಾರತೀಯ ನಾರಿ
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಿರಣ್ ರಾಜ್ (Kiran Raj) ಅವರು, ನಾವೆಲ್ಸ್ ಮತ್ತು ಇಂಡಿಯನ್ ಸಿನಿಮಾಗಳಲ್ಲಿ ಅಪ್ಪಟ ಭಾರತೀಯ ನಾರಿ ಅಂತಾರಲ್ಲ ಆ ರೀತಿ ಇರಬೇಕು ನನ್ನ ಹುಡುಗಿ ಎಂದಿದ್ದಾರೆ. ಭಾರತೀಯ ನಾರಿ ಅಂದರೆ ಸಂಪ್ರದಾಯ ಅಂತಲ್ಲ. ಸಂಸ್ಕೃತಿ ಬಗ್ಗೆ ಅರಿವು ಇರಬೇಕು. ಎಲ್ಲಿ ಹೇಗೆ ಇರಬೇಕು,ಎಲ್ಲಿ ಹೋಗುವಾಗ ಯಾವ ರೀತಿ ಇರಬೇಕು ಎನ್ನುವ ಅರಿವು ಇರಬೇಕು ಎಂದು ಹೇಳಿದ್ದಾರೆ ಕಿರಣ್ ರಾಜ್.
ನನ್ನ ಮಗಳನ್ನು ಮದುವೆಯಾಗು
ಹಿಂದಿನ ಸಂದರ್ಶನವೊಂದರಲ್ಲಿ ತಮಗೆ ಬರುತ್ತಿರುವ ಪ್ರಪೋಸ್ ಬಗ್ಗೆ ನಟ ಮಾತನಾಡಿದ್ದರು. ಶೂಟಿಂಗ್ ಸೆಟ್‌ನಲ್ಲಿ ಬರುವ ಕೆಲವರು ನನ್ನ ಮಗಳನ್ನು ಮದುವೆಯಾಗು ಎನ್ನುತ್ತಾರೆ. ನನ್ನ ಹಿಂದೆ ಮುಂದೆ ಗೊತ್ತಿರಲ್ಲ. ನಟನಾಗಿರುವ ಕಾರಣ ಹೀಗೆ ಹೇಳುತ್ತಾರೆ. ತಮ್ಮ ಮಗಳನ್ನು ಮದುವೆ ಮಾಡಿಸಲು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರೆ ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟಿದ್ದಾರೆ ಎನ್ನುವ ಖುಷಿಯಾಗುತ್ತದೆ ಎಂದಿದ್ದರು.
ಲವ್ ಮ್ಯಾರೇಜೋ, ಅರೇಂಜೋ
ಲವ್ ಮ್ಯಾರೇಜೋ, ಅರೇಂಜೋ ಎಂದು ಕೇಳಿದ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಕಿರಣ್ ರಾಜ್. ಒಂದು ವಯಸ್ಸಿನವರೆಗೆ ಮನೆಯವರು ಹುಡುಗಿ ನೋಡ್ತೇನೆ ಅಂದ್ರು ನಾನು ಬೇಡ ಎಂದೆ. ಈಗ ಅಪ್ಪ-ಅಮ್ಮ ಕೈಎತ್ತುಬಿಟ್ಟಿದ್ದಾರೆ. ಆದ್ದರಿಂದ ಸದ್ಯ ಇರೋ ಆಪ್ಷನ್ ಲವ್ ಮ್ಯಾರೇಜ್ ಮಾತ್ರ ಎಂದಿದ್ದರು.
ನಿಜ ಜೀವನದಲ್ಲಿಯೂ ಕರ್ಣನೇ
ಅಷ್ಟಕ್ಕೂ ಕಿರಣ್ ರಾಜ್ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್ ರಾಜ್ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

