- Home
- Entertainment
- TV Talk
- Karna Serial: ನಿಧಿ-ಕರ್ಣ ಜೀವನದಲ್ಲಿ ಮುಂದಾಗೋದನ್ನು ಹೇಳೇಬಿಟ್ಟಳು ಶಿವು ಮೈಮೇಲೆ ಬಂದ ದೇವಿ!
Karna Serial: ನಿಧಿ-ಕರ್ಣ ಜೀವನದಲ್ಲಿ ಮುಂದಾಗೋದನ್ನು ಹೇಳೇಬಿಟ್ಟಳು ಶಿವು ಮೈಮೇಲೆ ಬಂದ ದೇವಿ!
Karna Kannada Serial Written Update: ಅಣ್ಣಯ್ಯ ಧಾರಾವಾಹಿ ಹಾಗೂ ಕರ್ಣ ಧಾರಾವಾಹಿ ಮಹಾಮಿಲನ ಆಗಿದೆ. ಸದ್ಯ ಮಾರಿಗುಡಿಯಲ್ಲಿ ಎಲ್ಲರೂ ಸೇರಿದ್ದಾರೆ. ಆ ವೇಳೆ ಕಿಡಿಗೇಡಿಗಳು ಸೇರಿಕೊಂಡು ಸತ್ಯ ಹೊರಬರದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗಾದರೆ ಮುಂದೆ ಏನಾಗುವುದು? ವೀಕ್ಷಕರ ಆಸೆಯಂತೆ ನಡೆಯುತ್ತಿದೆಯಾ?

ದೇವಿಗೆ ದಿಗ್ಬಂಧನ ಹಾಕುವ ಪ್ರಯತ್ನ
ಅಣ್ಣಯ್ಯ ಧಾರಾವಾಹಿಯಲ್ಲಿ ದೇವಿಪುತ್ರ ಶಿವನ ಮೈಮೇಲೆ ದೇವಿ ಆಗಮನವಾಗಿದೆ. ಕಿಡಿಗೇಡಿಗಳು ಹಾಗೂ ನಯನತಾರಾ ಸೇರಿಕೊಂಡು ದೇವಿಗೆ ದಿಗ್ಬಂಧನ ಹಾಕುವ ಪ್ರಯತ್ನ ಮಾಡಿದ್ದರು. ಆದರೆ ಅದು ಪ್ರಯೋಜನಕ್ಕೆ ಬರಲಿಲ್ಲ. ದಿಗ್ಬಂಧನ ಹಾಕಿದ ಮಾಟಗಾರನೇ ಸತ್ತು ಹೋದನು.
ನಿತ್ಯಾ-ಕರ್ಣನ ಮದುವೆ ಬೇಸರ ತಂದಿತು
ಕರ್ಣ ಧಾರಾವಾಹಿಯಲ್ಲಿ ನಾನು ಪ್ರೀತಿಸಿದ ಹುಡುಗ ಕರ್ಣ, ತನ್ನ ಅಕ್ಕನನ್ನು ಮದುವೆ ಆಗಿದ್ದಾನೆ ಎನ್ನುವ ಬೇಸರದಲ್ಲಿದ್ದಾಳೆ. ಒಂದು ಕಡೆ ಅಕ್ಕನ ಜೀವನ, ಇನ್ನೊಂದು ಕಡೆ ಪ್ರೀತಿಸಿದ ಹುಡುಗ ಇರೋದಿಕ್ಕೆ ಏನು ಮಾಡೋದು ಎಂದು ಗೊತ್ತಾಗ್ತಿಲ್ಲ.
ಕರ್ಣನಿಗೋಸ್ಕರ ಹಂಬಲಿಸಿದ ನಿಧಿ
ಆದಷ್ಟು ಬೇಗ ತೇಜಸ್‌ನನ್ನು ಹುಡುಕಬೇಕು, ಆ ಮಗುವಿಗೆ ತಂದೆ ಪ್ರೀತಿ ಬೇಕು ಎಂದು ಕರ್ಣ ಒದ್ದಾಡುತ್ತಿದ್ದಾನೆ. ನಾನು ಪ್ರೀತಿಸಿದ ಹುಡುಗನಿಗೋಸ್ಕರ ನಿತ್ಯಾ ಹಂಬಲಿಸುತ್ತಿದ್ದಾಳೆ. ಇವರಿಬ್ಬರ ಮದುವೆ ನಾಟಕ ಎನ್ನೋದು ನಿಧಿಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ ಎರಡು ಲವ್ ಸ್ಟೋರಿ ಕಗ್ಗಂಟಾಗಿದೆ.
ನಯನತಾರಾ ಸತ್ಯ ಹೊರಬೀಳಲಿದ್ಯಾ?
ಕರ್ಣನಿಗೆ ಮನಸ್ಸಿನಲ್ಲಿ ನಿಧಿಗೆ ಮದುವೆ ಸತ್ಯ ಹೇಳಬೇಕು, ನಿತ್ಯಾ ಜೀವನ ಸರಿ ಮಾಡಿ ನಿಧಿಯನ್ನು ಮದುವೆ ಆಗಬೇಕು ಎನ್ನುವ ಆಸೆ ಇದೆ. ಆದರೆ ಸಮಯ ಅನುವು ಮಾಡಿಕೊಡ್ತಿಲ್ಲ. ಇನ್ನು ನಿಧಿ, ನಿತ್ಯಾ ತಂದೆ-ತಾಯಿಯನ್ನು ಕರ್ಣನ ಅತ್ತೆ ನಯನತಾರಾ ಕೊಂದಿರೋದು ಎನ್ನುವ ಸತ್ಯ ಹೊರಬೀಳಲಿಯದೆಯಾ ಎಂದು ಕಾದು ನೋಡಬೇಕಿದೆ.
ದೇವಿ ಹೇಳಿದ್ದೇನು?
ದೇವಿಪುತ್ರ ಶಿವು ಮೈಮೇಲೆ ಬಂದ ದೇವಿಯು ನಿಧಿ ಬಳಿ, “ಬಯಸ್ಸಿದ್ದನ್ನು ಬಿಟ್ಟುಕೊಡಬೇಡ, ಪ್ರಯತ್ನಪಡು” ಎಂದು ಹೇಳಿದೆ. ಹೀಗಾಗಿ ಕರ್ಣನನ್ನು ಬಿಟ್ಟುಕೊಡಬೇಡ, ಅವನನ್ನು ಪಡೆದುಕೋ ಎಂದು ಸಂದೇಶ ನೀಡಿದೆ. ಒಟ್ಟಿನಲ್ಲಿ ಏನಾಗಲಿದೆಯೋ ಏನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

