Karna Serial: ಮದುವೆಯಾದ್ಮೇಲೆ ಮತ್ತೆ ಉಲ್ಟಾ ಹೊಡೆದ ಕರ್ಣ; ನಿಗಿ ನಿಗಿ ಕೆಂಡವಾದ ನಿಧಿ
Karna Serial Today Episode Update: ಕರ್ಣ ಧಾರಾವಾಹಿಯಲ್ಲಿ ಮತ್ತೆ ಕರ್ಣ, ನಿಧಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವಿಡಿಯೋ ಈಗ ನಿಧಿಗೆ ಸಿಕ್ಕಿದೆ. ಅಂದಹಾಗೆ ನಿಧಿಯ ಟೆಡ್ಡಿ ಬೇರ್‌ನ್ನು ಕರ್ಣನ ಮನೆಯವರು ಹೊರಗಡೆ ಹಾಕಿದ್ದರು. ಈಗ ಅದನ್ನೇ ಕರ್ಣ ತಂದಿದ್ದು, ನಿಧಿ ಕೆಂಡಕಾರಿದ್ದಾಳೆ.

ಕಣ್ಣೀರು ಹಾಕಿದ ನಿಧಿ
ನಿಧಿ ಮೊಬೈಲ್ ಫೋನ್ ಹಾಳಾಗಿತ್ತು. ಅದನ್ನು ಈಗ ಸರಿಪಡಿಸಲಾಗಿದೆ. ಅದರಲ್ಲಿ ಕರ್ಣ ಅಂದು ಪ್ರಪೋಸ್ ಮಾಡಿದ ವಿಡಿಯೋ ಇತ್ತು. ಇದನ್ನು ನೋಡಿ ನಿಧಿ ಕಣ್ಣೀರು ಹಾಕಿದ್ದಾಳೆ. ಕರ್ಣ ಟೆಡ್ಡಿಬೇರ್ ತಂದಾಗ ನಿಧಿ ಸಿಟ್ಟಾಗಿದ್ದು, ಬೈದಿದ್ದಾಳೆ.
ಅಕ್ಕಂಗೆ ತಾಳಿ ಕಟ್ಟಿ ಹೀಗೆ ಮಾತಾಡ್ತೀರಾ?
“ಸಾಕು ನಿಲ್ಲಿಸಿ, ನಿಮ್ಮ ನಾಟಕವನ್ನು ನಿಲ್ಲಿಸಿ. ಇಷ್ಟೆಲ್ಲ ಆದಮೇಲೂ ಏನು ನಿರ್ಧಾರ ತಗೊಳೋಕೆ ಹೋಗಿದೀರಾ? ಪ್ರೀತಿಸಿದ ಹುಡುಗಿಯ ಹೃದಯ ಚೂರಾದರೂ, ಅಕ್ಕಂಗೆ ತಾಳಿ ಕಟ್ಟಿದಮೇಲೆ ಏನು ನಿರ್ಧಾರ ತಗೊಳೋಕೆ ರೆಡಿಯಾಗಿದ್ದೀರಾ? ಎಂದು ನಿಧಿ ಹೇಳಿದ್ದಾಳೆ.
ಸತ್ಯ ತುಂಬ ಇದೆ
ಆಗ ಕರ್ಣ, “ಹೇಳದೆ ಇರೋ ಸತ್ಯ ತುಂಬ ಇದೆ” ಎಂದಿದ್ದಾರೆ. ಒಟ್ಟಿನಲ್ಲಿ ನಾನು ನಿತ್ಯಾಗೆ ತಾಳಿ ಕಟ್ಟಿಲ್ಲ, ನಾವು ಮದುವೆ ಆಗಿರುವ ನಾಟಕ ಮಾಡಿದ್ದೇವೆ, ಅವಳ ಹೊಟ್ಟೆಯಲ್ಲಿ ಮಗು ಇದೆ” ಎಂದು ಹೇಳುತ್ತಾನಾ? ಕಾದು ನೋಡಬೇಕಿದೆ.
ತಲೆಕೆಡಿಸಿಕೊಂಡ ಕೇಡಿ ಗ್ಯಾಂಗ್
ಅತ್ತ ಕರ್ಣ ಹಾಗೂ ನಿತ್ಯಾ ಇಬ್ಬರೂ ಚೆನ್ನಾಗಿದ್ದಾರೆ, ಹನಿಮೂನ್‌ಗೆ ಹೋಗಿದ್ದಾರೆ ಎಂದು ರಮೇಶ್, ಸಂಜಯ್, ನಯನತಾರಾ ಬೇಸರ ಮಾಡಿಕೊಂಡಿದ್ದಾರೆ. ಕರ್ಣನ ಖುಷಿಯನ್ನು ಹೇಗೆ ಹಾಳು ಮಾಡೋದು? ಇವರಿಗೆ ಮಕ್ಕಳಾದರೆ ಏನು ಮಾಡೋದು ಎಂದು ಇವರು ತಲೆ ಕೆಡಿಸಿಕೊಂಡಿದ್ದಾರೆ.
ಮುಂದೆ ಏನಾಗುವುದು?
ಅಂದಹಾಗೆ ಕರ್ಣ, ನಿತ್ಯಾ ಮುಚ್ಚಿಟ್ಟ ಸತ್ಯ ಮನೆಯವರಿಗೆ ಗೊತ್ತಾಗತ್ತಾ? ನಿತ್ಯಾ ಪ್ರಗ್ನೆಂಟ್ ಎನ್ನೋದು ತಿಳಿಯತ್ತಾ? ಎಂದು ಕಾದು ನೋಡಬೇಕಿದೆ. ಅಂದಹಾಗೆ ಕರ್ಣ, ನಿಧಿ ಪ್ರೀತಿ ಕಥೆ ಯಾವ ಸ್ವರೂಪ ಪಡೆಯತ್ತೋ ಏನೋ ಎಂದು ಕಾದು ನೋಡಬೇಕಿದೆ.