- Home
- Entertainment
- TV Talk
- Bhagyalakshmi ಮಡಿಲಲ್ಲಿ ಮಗುವಾದ ಆದಿ: ಪ್ಲೀಸ್ ಇವರ ಮದ್ವೆ ಮಾಡಿಸೋದು ಬೇಡ ಅಂತಿರೋದ್ಯಾಕೆ ಫ್ಯಾನ್ಸ್?
Bhagyalakshmi ಮಡಿಲಲ್ಲಿ ಮಗುವಾದ ಆದಿ: ಪ್ಲೀಸ್ ಇವರ ಮದ್ವೆ ಮಾಡಿಸೋದು ಬೇಡ ಅಂತಿರೋದ್ಯಾಕೆ ಫ್ಯಾನ್ಸ್?
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಆದಿ ಮತ್ತು ಸುರಭಿ ಮದುವೆ ನಿಲ್ಲುವ ಹಂತದಲ್ಲಿದೆ. ಅನಾರೋಗ್ಯಕ್ಕೀಡಾದ ಆದಿಯ ಜವಾಬ್ದಾರಿಯನ್ನು ಭಾಗ್ಯ ವಹಿಸಿಕೊಂಡಿದ್ದು, ಅವಳಲ್ಲಿ ತಾಯಿಯ ಪ್ರೀತಿಯನ್ನು ಕಂಡಿದ್ದಾನೆ. ಇವರಿಬ್ಬರ ಸ್ನೇಹ ಮದುವೆಯಾಗಬಾರದು ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯವಾಗಿದೆ.

ಆದಿ-ಭಾಗ್ಯ ಮದುವೆ?
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ಈಗ ರೋಚಕ ಘಟ್ಟ ತಲುಪಿದೆ. ಭಾಗ್ಯಳೇ ಮುಂದೆ ನಿಂತು ಆದಿ ಮತ್ತು ಸುರಭಿಯ ಮದುವೆಗೆ ಮುಂದಾಗಿದ್ದಳು. ಆದರೆ ಕುಸುಮಾಗೆ ಇದು ಇಷ್ಟವಿರಲಿಲ್ಲ. ಇದಕ್ಕೆ ಕಾರಣ, ಆಕೆಗೆ ಆದಿ ಮತ್ತು ಭಾಗ್ಯ ಮದುವೆಯಾಗಬೇಕು ಎನ್ನುವ ಆಸೆ.
ಒಳ್ಳೆಯ ಸ್ನೇಹ ಸಂಬಂಧ
ಆದರೆ ಭಾಗ್ಯಳ ಪಾಲಿಗೆ ಆದಿ ಒಳ್ಳೆಯ ಸ್ನೇಹಿತ ಅಷ್ಟೇ. ಆದಿಗೂ ಭಾಗ್ಯಳ ಮೇಲೆ ಆ ರೀತಿಯ ವ್ಯಾಮೋಹವಿಲ್ಲ. ಅವರಿಬ್ಬರದ್ದೂ ಸ್ನೇಹ ಸಂಬಂಧ ಮಾತ್ರ. ಆದರೆ, ಕುಸುಮಳಂತೆ ಭಾಗ್ಯಲಕ್ಷ್ಮಿಯ ಬಹುತೇಕ ವೀಕ್ಷಕರು ಕೂಡ ಆದಿ ಮತ್ತು ಭಾಗ್ಯ ಮದುವೆಯಾಗಬೇಕು ಎಂದೇ ಹೇಳುತ್ತಾ ಬಂದವರು.
ಕುಸಿದ ಆದಿ
ಇದೀಗ ಸುರಭಿಯ ಹೆಸರು ಕೇಳುತ್ತಲೇ ಆದಿಗೆ ತನ್ನ ಮಾಜಿ ಲವರ್ ನೆನಪಾಗಿ ಕುಸಿದು ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಿದಾಗ, ಅವನನ್ನು ಗುಣಮುಖರನ್ನಾಗಿ ಮಾಡಲು ಭಾಗ್ಯಳಿಂದ ಮಾತ್ರ ಸಾಧ್ಯ ಎಂದಿದ್ದಾರೆ ವೈದ್ಯರು. ಇದೇ ಕಾರಣಕ್ಕೆ ಆದಿಯ ಆರೋಗ್ಯದ ಜವಾಬ್ದಾರಿಯನ್ನು ಭಾಗ್ಯ ವಹಿಸಿಕೊಂಡಿದ್ದಾಳೆ.
ಭಾಗ್ಯಳ ಮಡಿಲಲ್ಲಿ ಮಗು
ಭಾಗ್ಯಳ ಪ್ರೀತಿಯಲ್ಲಿ ಅಮ್ಮನ ಪ್ರೀತಿಯನ್ನು ಕಂಡಿದ್ದಾನೆ ಆದಿ. ನಿಮ್ಮ ಸೇವೆ ನೋಡುತ್ತಿದ್ದರೆ ನನ್ನ ಅಮ್ಮನೇ ನೆನಪಾದಳು ಎಂದು ಆತ ಭಾಗ್ಯಳ ಮಡಿಲಲ್ಲಿ ಮಗುವಾಗಿ ಬಿಟ್ಟಿದ್ದಾನೆ. ಅದು ಅಮ್ಮ-ಮಗನ ಬಾಂಧವ್ಯವನ್ನು ಪ್ರತಿಬಿಂಬಿಸುವಂತಿದೆ.
ಪ್ಲೀಸ್ ಮದ್ವೆ ಮಾಡಬೇಡಿ
ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಇವರಿಬ್ಬರ ಮದುವೆ ಆಗಬೇಕು ಎಂದು ಕೆಲವೇ ಜನ ಹೇಳುತ್ತಿದ್ದರೆ, ಮದುವೆಯಿಂದ ಸಂಬಂಧ ಹಾಳಾಗುತ್ತದೆ, ಅಲ್ಲಿ ಬೇರೆಯದ್ದೇ ವರ್ತನೆ ಶುರುವಾಗುತ್ತದೆ. ದಯವಿಟ್ಟು ಇವರನ್ನು ಹೀಗೆಯೇ ಸ್ನೇಹಿತರನ್ನಾಗಿ ಬಿಟ್ಟುಬಿಡಿ, ಮದುವೆ ಮಾಡಿಸಬೇಡಿ. ಇವರದ್ದು ಶುದ್ಧವಾಗಿರುವ ಪ್ರೀತಿ, ಸ್ನೇಹ. ಆ ಬಾಂಧವ್ಯ ಹಾಗೆಯೇ ಮುಂದುವರೆಯಲಿ ಎನ್ನುವವರೇ ಹೆಚ್ಚು.
ನಿಜ ಜೀವನದಲ್ಲೂ ಹಾಗೆ
ಹಾಗೆ ನೋಡಿದರೆ, ನಿಜ ಜೀವನದಲ್ಲಿಯೂ ಇದೇ ರೀತಿ ಆಗುವುದು ಇದೆ. ಪ್ರೇಮಿಗಳಾಗಿ ಎಷ್ಟೋ ವರ್ಷ ತುಂಬಾ ಪ್ರೀತಿಯಿಂದ ಇರುವವರು, ಮದುವೆ ಎನ್ನುವ ಬಂಧನಕ್ಕೆ ಒಳಗಾದ ಕೆಲವೇ ವರ್ಷಗಳಲ್ಲಿ ಬೇರೆ ಬೇರೆಯಾಗುವುದು ಇದೆ. ಅಲ್ಲಿ ನಾನು, ನನ್ನದು, ಇಗೋ ಎಲ್ಲವೂ ಶುರುವಾಗಿಬಿಡುತ್ತದೆ. ಇದೇ ಕಾರಣಕ್ಕೆ ಭಾಗ್ಯ ಮತ್ತು ಆದಿ ಕೂಡ ಹೀಗೆಯೇ ಇರಲಿ ಎನ್ನುವುದು ಹಲವರ ಅಭಿಮತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

