Bigg Boss Kannada 12: ತಮ್ಮ ಖುಷಿಗೆ ಮೂರು ಕಾರಣಗಳನ್ನು ನೀಡಿದ ರಕ್ಷಿತಾ ಶೆಟ್ಟಿ
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಸಂತೋಷಕ್ಕೆ ಮೂರು ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಮತ್ತು ಮೆಚ್ಚುಗೆ, ಜನರಿಂದ ಮೊದಲು ಸೇವ್ ಆಗಿದ್ದು ಹಾಗೂ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಅವರ ಖುಷಿಗೆ ಕಾರಣವಾಗಿದೆ.

ರಕ್ಷಿತಾ ಶೆಟ್ಟಿ
ಬಿಗ್‌ಬಾಸ್ ಮನೆಯ ಪುಟ್ಟಿಯಾಗಿರುವ ರಕ್ಷಿತಾ ಶೆಟ್ಟಿ ತಮ್ಮ ಖುಷಿಗೆ ಮೂರು ಕಾರಣಗಳನ್ನು ನೀಡಿದ್ದಾರೆ. ಶನಿವಾರದ ವೀಕೆಂಡ್ ಸಂಚಿಕೆ ಮುಕ್ತಾಯದ ಬಳಿಕ ತಮಗಾಗುತ್ತಿರುವ ಸಂತೋಷವನ್ನು ಮನೆಯ ಸದಸ್ಯರೊಂದಿಗೆ ಹಂಚಿಕೊಂಡಿದ್ದಾರೆ.
ಚಪ್ಪಾಳೆ
ಬಿಗ್‌ಬಾಸ್ ಸ್ಪರ್ಧಿಗಳಿಗೆ ಟ್ರೋಫಿ ಪಡೆಯೋದು ಎಷ್ಟು ಮುಖ್ಯವೋ? ವಾರಕ್ಕೊಮೆ ಶೋ ನಿರೂಪಕರಾಗಿರುವ ನಟ ಸುದೀಪ್ ನೀಡುವ ಚಪ್ಪಾಳೆ ಸಿಗಬೇಕೆಂದು ಬಯಸುತ್ತಾರೆ. ಎಂಟು ವಾರ ಕಳೆದರೂ ಕೇವಲ ನಾಲ್ಕು ಜನರು ಮಾತ್ರ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದಾರೆ.
ತಾಳ್ಮೆ ಮತ್ತು ಮಾನವೀಯತೆ
ಈ ಹಿಂದಿನ ವಾರ ತಾಳ್ಮೆ ಮತ್ತು ಮಾನವೀಯತೆಯಿಂದ ಆಟವಾಡಿ, ವಿರೋಧಿಗಳಿಂದಲೇ ಉತ್ತಮ ಪಡೆದುಕೊಂಡಿರುವ ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಈ ಹಿಂದೆ ಅನಗತ್ಯವಾಗಿ ನಾನು ಅತಿರೇಕವಾಗಿ ನಡೆದುಕೊಂಡಿದ್ದು ತಪ್ಪು. ನೀವು ಹೇಳಿದ್ಮೇಲೆ ಸರಿ ಮಾಡಿಕೊಂಡೆ ಎಂದು ತಪ್ಪನ್ನು ಯಾವುದೇ ಅಳಕಿಲ್ಲದೇ ಒಪ್ಪಿಕೊಂಡಿದ್ದರು.
ಹಳೆಯ ಆಟಕ್ಕ ಮರಳಿದ ರಕ್ಷಿತಾ ಶೆಟ್ಟಿ
ಸುದೀಪ್ ಹೇಳಿದ ಮಾತುಗಳನ್ನ ಸೂಕ್ಷ್ಮವಾಗಿ ಕೇಳಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ ತಮ್ಮ ವ್ಯಕ್ತಿತ್ವಕ್ಕಾಗುತ್ತಿದ್ದ ಹಾನಿಯನ್ನು ತಪ್ಪಿಸಿಕೊಂಡು ಹಳೆಯ ಆಟಕ್ಕ ಮರಳಿದ್ದರು. ಹಾಗೆಯೇ ಹನಿ ಹನಿ ಡ್ರಮ್ ಕಹಾನಿ ಟಾಸ್ಕ್‌ನಲ್ಲಿಯೂ ಅದ್ಭುತವಾಗಿ ಆಟವಾಡಿದ್ರು. ಹಾಗೆಯೇ ಮನೆಯಲ್ಲಿಯೂ ರಕ್ಷಿತಾ ನಡೆಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ವೇಳೆ ತಮ್ಮ ಖುಷಿಗೆ ರಕ್ಷಿತಾ ಶೆಟ್ಟಿ ಮೂರು ಕಾರಣಗಳನ್ನು ನೀಡಿದರು.
ಇದನ್ನೂ ಓದಿ: BBK 12: ಸೀರಿಯಸ್ ಟೈಮ್‌ನಲ್ಲೂ ಗಿಲ್ಲಿ ವಿಚಿತ್ರ ವರ್ತನೆ; ಇತ್ತ ರಿಷಾ ಗೌಡ ಎಲಿಮಿನೇಷನ್‌ನಲ್ಲಿತ್ತು ಅಚ್ಚರಿ
ರಕ್ಷಿತಾ ನೀಡಿದ ಮೂರು ಕಾರಣಗಳು
1. ಕಿಚ್ಚನ ಚಪ್ಪಾಳೆ ಜೊತೆ ಸುದೀಪ್ ಅವರಿಂದ ಮೆಚ್ಚುಗೆ
2. ಈ ಬಾರಿ ಜನರು ಮೊದಲು ತಮ್ಮನ್ನು ಸೇವ್ ಮಾಡಿದ್ದು.
3. ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದ್ದು.
ಇದನ್ನೂ ಓದಿ: BBK 12 ನಾಮಿನೇಷನ್: ರಣಕಹಳೆ ಮೊಳಗಿಸಿದ ಧ್ರುವಂತ್, ಬೆಕ್ಕಿನ ಹೆಜ್ಜೆ ಇಟ್ಟ ರಕ್ಷಿತಾ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

