- Home
- Entertainment
- TV Talk
- 'ಗೌರಿ ಪುತ್ರ'ದಲ್ಲಿ ರಿತ್ವಿಕ್‌ಗೆ ಅಮ್ಮನಾಗಿ ಎಂಟ್ರಿಕೊಟ್ಟ ಅನು ಪ್ರಭಾಕರ್, ನಾಯಕಿಯಾಗಿ 'ಗಟ್ಟಿಮೇಳ' ಸುಂದರಿ!
'ಗೌರಿ ಪುತ್ರ'ದಲ್ಲಿ ರಿತ್ವಿಕ್‌ಗೆ ಅಮ್ಮನಾಗಿ ಎಂಟ್ರಿಕೊಟ್ಟ ಅನು ಪ್ರಭಾಕರ್, ನಾಯಕಿಯಾಗಿ 'ಗಟ್ಟಿಮೇಳ' ಸುಂದರಿ!
Gauri Putra serial: ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಅಮ್ಮ-ಮಗನ ಬಾಂಧವ್ಯದ ಹೊಸ ಮೆಗಾ ಧಾರಾವಾಹಿ 'ಗೌರಿ ಪುತ್ರ' ಆರಂಭವಾಗಲಿದ್ದು, ಈ ಕೌಟುಂಬಿಕ ಧಾರಾವಾಹಿಯ ಪ್ರೋಮೋ ಸದ್ಯ ಕಿರುತೆರೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಕಿರುತೆರೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ ಪ್ರೋಮೋ
ಕಿರುತೆರೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ ಪ್ರೋಮೋ
ಕಿರುತೆರೆಯ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಶೀಘ್ರದಲ್ಲೇ ಅಮ್ಮ ಮತ್ತು ಮಗನ ಭಾವನಾತ್ಮಕ ಬಾಂಧವ್ಯವನ್ನು ಸಾರುವ 'ಗೌರಿ ಪುತ್ರ' ಎಂಬ ನೂತನ ಕೌಟುಂಬಿಕ ಮೆಗಾ ಧಾರಾವಾಹಿ ಪ್ರಸಾರವಾಗಲಿದೆ. 'ಜೀವನ ಸಿರಿಯಾದ ಅಮ್ಮನಿಗೆ ತವರಿನ ಸಿರಿಯನ್ನ ಕೊಡಿಸೋಕೆ ಬರ್ತಿದ್ದಾನೆ ಗೌರಿಪುತ್ರ' ಎಂಬ ಸುಂದರ ಅಡಿಬರಹದೊಂದಿಗೆ (Tagline) ಮೂಡಿಬರುತ್ತಿರುವ ಈ ಧಾರಾವಾಹಿಯ ಪ್ರೋಮೋಗಳು ಈಗಾಗಲೇ ಬಿಡುಗಡೆಯಾಗಿದ್ದು, ಕಿರುತೆರೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿವೆ.
'ರಾಮಾಚಾರಿ' ರಿತ್ವಿಕ್ - ಮಹತಿ ಭಟ್ ಹೊಸ ಜೋಡಿ
'ರಾಮಾಚಾರಿ' ರಿತ್ವಿಕ್ - ಮಹತಿ ಭಟ್ ಹೊಸ ಜೋಡಿ
ಕಲರ್ಸ್ ಕನ್ನಡದ ಖ್ಯಾತ 'ರಾಮಾಚಾರಿ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಪ್ರತಿಭಾವಂತ ನಟ ರಿತ್ವಿಕ್ ಕೃಪಾಕರ್ ಈ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಜೋಡಿಯಾಗಿ 'ಗಟ್ಟಿಮೇಳ' ಖ್ಯಾತಿಯ ನಟಿ ಮಹತಿ ಭಟ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ಈ ಇಬ್ಬರೂ ಪ್ರತಿಭಾವಂತರ ಹೊಸ ಕಾಂಬಿನೇಷನ್ ಪರದೆಯ ಮೇಲೆ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಅಮ್ಮನ ಪಾತ್ರದಲ್ಲಿ ಹಿರಿಯ ನಟಿ ಅನು ಪ್ರಭಾಕರ್
ಅಮ್ಮನ ಪಾತ್ರದಲ್ಲಿ ಹಿರಿಯ ನಟಿ ಅನು ಪ್ರಭಾಕರ್
ಈ ಧಾರಾವಾಹಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟಿ ಅನು ಪ್ರಭಾಕರ್ ಅವರು ನಾಯಕನ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪ್ರಬುದ್ಧ ನಟನೆ ಈ ಕೌಟುಂಬಿಕ ಕಥೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಸಂಭ್ರಮ
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಸಂಭ್ರಮ
'ಗೌರಿ ಪುತ್ರ' ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..
"ಕಲರ್ಸ್ ಕನ್ನಡದ ಪ್ರತಿಭೆ ಈಗ ಜೀ ಕನ್ನಡದಲ್ಲೂ ಮಿಂಚಲಿದ್ದಾರೆ. ಇವರನ್ನು ಪರಿಚಯಿಸಿದ ಅದೇ ಪ್ರೊಡಕ್ಷನ್ ಹೌಸ್‌ನಿಂದ ಮತ್ತೊಂದು ಅದ್ಭುತ ಪ್ರಾಜೆಕ್ಟ್ ಬರುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ "ಹೀರೋಯಿನ್ ಮಹತಿ ಭಟ್ ಆಯ್ಕೆ ಸಖತ್ ಆಗಿದೆ, ಜೋಡಿ ಅದ್ಭುತವಾಗಿ ಕಾಣಿಸಲಿದೆ" ಎಂದು ನಾಯಕಿಯ ಲುಕ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ಹಾಗೆಯೇ ಯಾರೆಲ್ಲಾ "ನಮ್ಮ ಅನು ಪ್ರಭಾಕರ್ ಅವರನ್ನ ಧಾರಾವಾಹಿಯಲ್ಲಿ ನೋಡೋದಕ್ಕೆ ಕಾಯ್ತಾ ಇದೀರಾ" ಎಂದು ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೇ ಅಧಿಕೃತ ಪ್ರಸಾರ
ಶೀಘ್ರದಲ್ಲೇ ಅಧಿಕೃತ ಪ್ರಸಾರ
ತಾಯಿಯ ಸ್ವಾಭಿಮಾನ ಹಾಗೂ ಮಗನ ಪ್ರೀತಿಯ ಕಥಾಹಂದರ ಹೊಂದಿರುವ 'ಗೌರಿ ಪುತ್ರ' ಧಾರಾವಾಹಿಯು ಪ್ರಸಾರಕ್ಕೂ ಮುನ್ನವೇ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದರ ಪ್ರಸಾರದ ಸಮಯ ಮತ್ತು ದಿನಾಂಕವನ್ನು ವಾಹಿನಿಯು ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.