ಬಿಗ್ ಬಾಸ್ ಖ್ಯಾತಿಯ ಸ್ಪಂದನಾ ಸೋಮಣ್ಣ ತಮ್ಮ ಆರು ವರ್ಷಗಳ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ವರುಣ್ ಮುನಿರಾಜು ಅವರೊಂದಿಗೆ ಶೀಘ್ರದಲ್ಲೇ ಮದುವೆಯಾಗಲಿದ್ದು, ವಿವಾಹದ ನಂತರ ಫ್ಯಾಷನ್ ಕ್ಷೇತ್ರದಲ್ಲಿ ವ್ಯವಹಾರ ಮಾಡುವ ಯೋಚನೆಯಲ್ಲಿದ್ದಾರೆ. ಇದರ ನಡುವೆ ಇದೀಗ ಸ್ನೇಹಿತೆಯರ ಜೊತೆಯಲ್ಲಿ ಬ್ರೈಡ್​ ಟು ಬಿ ಪಾರ್ಟಿ ಮಾಡಿದ್ದು, ಅದರ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಬೆಂಗಳೂರು: Boss ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಸ್ಪಂದನಾ ಸೋಮಣ್ಣ (Spandana Somanna) ಈಚೆಗೆ, ತಮ್ಮ ಮದುವೆಯ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಮತ್ತು ಸಸ್ಪೆನ್ಸ್‌ಗಳಿಗೆ ತೆರೆ ಎಳೆದಿದ್ದರು. ತಮ್ಮ 6 ವರ್ಷಗಳ ಪ್ರೇಮಕಥೆಯನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ವರುಣ್ ಮುನಿರಾಜು ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಮದುವೆ ತಯಾರಿಗಾಗಿ ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದ ಅವರು, ವಿವಾಹದ ಬಳಿಕ ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಹೊಂದಿದ್ದಾರೆ. ಇದಾಗಲೇ ಅವರು, ತಮ್ಮ ಭಾವಿ ಪತಿ ವರುಣ್‌ ಅವರನ್ನೂ ಪರಿಚಯಿಸಿದ್ದಾರೆ. ವರುಣ್ ಮುನಿರಾಜು ಅವರನ್ನು ಸ್ಪಂದನಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಇಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಾಗಲೇ ಭಾವಿ ಪತಿಯ ಜೊತೆಗಿನ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ.

ಇದೀಗ ಸ್ನೇಹಿತೆಯರ ಜೊತೆಯಲ್ಲಿ ಸ್ಪಂದನಾ ಸೋಮಣ್ಣ ಅವರು, ಭಾವಿ ಮದುಮಗಳು (Bride To be)ಪಾರ್ಟಿ ಮಾಡಿದ್ದು, ಅದರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಮುಂದಿನ ನಿಲ್ದಾಣ ಮದುವೆ ಎಂದು ಹೇಳುತ್ತಲೇ ಸ್ನೇಹಿತೆಯ ಜೊತೆಯಲ್ಲಿ ಮೋಜು ಮಸ್ತಿ ಮಾಡಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. ಆದರೆ ಮದುವೆ ಮಾತ್ರ ಯಾವಾಗ ಎನ್ನೋದನ್ನೂ ಇನ್ನೂ ರಿವೀಲ್​ ಮಾಡಲಿಲ್ಲ. ಅದನ್ನು ಸಸ್ಪೆನ್ಸ್​ ಆಗಿ ಇಟ್ಟಿದ್ದಾರೆ.

ಲವ್​ ಸ್ಟೋರಿ ಕುರಿತು ನಟಿ

ಈಚೆಗೆ ನಟಿ, ಹೂವು ಮುಡಿಸುವ ಶಾಸ್ತ್ರದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಈ ಹಿಂದೆ, ನಟಿ, ತಮ್ಮ ಲವ್​ ಸ್ಟೋರಿ ಬಗ್ಗೆ ಹೇಳಿದ್ದರು. ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಕಾಲೇಜಿನ ಟೈಮ್​ನಲ್ಲಿ ಮಾತನಾಡಿರಲಿಲ್ಲ. ಆದರೆ ಕೋವಿಡ್​ ಟೈಮ್​ನಲ್ಲಿ ಮಾತನಾಡಿದ್ವಿ. ಅಲ್ಲಿಂದಲೇ ಲವ್​ ಶುರುವಾಯ್ತು ಎಂದಿದ್ದಾರೆ. ಆ ಸಮಯದಲ್ಲಿ ನಾನು ಇಷ್ಟು ಫೇಮಸ್​ ಆಗಿರಲಿಲ್ಲ. ಸೀರಿಯಲ್​ ಹುಡುಕಾಟದಲ್ಲಿ ಇದ್ದೆ. ಆಡಿಷನ್​ ಕೊಡುತ್ತಿದ್ದೆ. ಸ್ಟ್ಯಾಂಡ್​ ಆಗಿರಲಿಲ್ಲ. ಆ ಟೈಮ್​ನಲ್ಲಿ ಲವ್​ ಆಗಿದ್ದು ಎಂದು ತಮ್ಮ ಲವ್​ಸ್ಟೋರಿ ಹಂಚಿಕೊಂಡಿದ್ದರು. ಅವನು ಕೂಡ ಲಂಡನ್​ನಲ್ಲಿ ಎಂಎಸ್​ ಮಾಡಿದ್ದ. ಕೆಲಸ ಸಿಕ್ಕರೂ ಕೋವಿಡ್​ನಿಂದ ಹೋಗಲು ಆಗಿರಲಿಲ್ಲ. ಲಂಡನ್​ನಲ್ಲಿಯೇ ಇರಬೇಕೋ, ಬೇರೆ ಕಂಟ್ರಿಗೆ ಹೋಗಬೇಕೋ ಅಥ್ವಾ ಭಾರತಕ್ಕೆ ಬರಬೇಕೋ ಎನ್ನುವ ಗೊಂದಲದಲ್ಲಿ ಇದ್ದ. ಹೀಗೆ ಆರು ವರ್ಷ ನಮ್ಮ ಲವ್​ಸ್ಟೋರಿ ನಡೆಯುತ್ತಿದೆ ಎಂದಿದ್ದರು.

ಇದೀಗ ನಟಿ, ಮದುವೆಯಾದ ಮೇಲಿನ ಪ್ಲ್ಯಾನ್​ ಬಗ್ಗೆ ಮಾತನಾಡಿದ್ದಾರೆ. ಮದುವೆ ಯಾವಾಗ ಎನ್ನುವ ವಿಷಯವನ್ನು ಅವರು ರಿವೀಲ್​ ಮಾಡಲಿಲ್ಲ. ಆದರೆ ಮದುವೆಯ ನಂತರ ಬಿಜಿನೆಸ್​ ಮಾಡುವ ಪ್ಲ್ಯಾನ್​ ಇದೆ. ಅದರಲ್ಲಿಯೂ ಫ್ಯಾಷನ್​ ಕ್ಷೇತ್ರದಲ್ಲಿ ತಮಗೆ ಅಪಾರ ಆಸಕ್ತಿ ಇದ್ದು, ಅದರಲ್ಲಿ ಸಾಕಷ್ಟು ತಿಳಿವಳಿಕೆ ಕೂಡ ಇರುವ ಕಾರಣದಿಂದ, ಅದರಲ್ಲಿಯೇ ಮುಂದುವರೆಯುವ ಇಷ್ಟ ಇದೆ ಎಂದು ನಟಿ ಸ್ಪಂದನಾ ಸೋಮಣ್ಣ (Bigg Boss Spandana Somanna) sumantvkannada ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಹಾಗೆಂದು ನಟನೆ ಬಿಡುತ್ತೇನೆ ಎಂದು ಅರ್ಥವಲ್ಲ, ಒಳ್ಳೆಯ ಪ್ರಾಜೆಕ್ಟ್​ ಸಿಕ್ಕರೆ ಅದನ್ನೂ ಮಾಡುತ್ತೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.