- Home
- Entertainment
- TV Talk
- ಇದು ಮುಕ್ತಾಯ ಅಲ್ಲ ಹೊಸ ಆರಂಭ, ಶೀಘ್ರದಲ್ಲೇ ಬರಲಿದೆ ‘ಅಮೃತಧಾರೆ Part 2’... ಇದು ಹಿಂದೆ ರಿಮೇಕ್ ಧಾರಾವಾಹಿನಾ?!
ಇದು ಮುಕ್ತಾಯ ಅಲ್ಲ ಹೊಸ ಆರಂಭ, ಶೀಘ್ರದಲ್ಲೇ ಬರಲಿದೆ ‘ಅಮೃತಧಾರೆ Part 2’... ಇದು ಹಿಂದೆ ರಿಮೇಕ್ ಧಾರಾವಾಹಿನಾ?!
Amruthadhaare 2: ಇಡೀ ಕರ್ನಾಟಕದ ಮನಸ್ಸನ್ನು ಗೆದ್ದ ಗೌತಮ್ ದಿವಾನ್ ಮತ್ತು ಭೂಮಿಕಾರ ಒಲವಿನ ಕಥೆ ಅಮೃತಧಾರೆ. ಈಗಷ್ಟೇ ಕಥೆಗೆ ಅಂತ್ಯ ಹಾಡಿದ್ದು, ವೀಕ್ಷಕರು ಬೇಸರವ್ಯಕ್ತಪಡಿಸಿದ್ದರು. ಆದರೆ ಇದೀಗ ಜೀ ವಾಹಿನಿಯು ‘ಅಮೃತಧಾರೆ ೨’ ಶೀಘ್ರದಲ್ಲಿ ಪ್ರಸಾರವಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಲವ ಅಮೃತಧಾರೆ
ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ಅಮೃತಧಾರೆ’. ಗೌತಮ್ ದಿವಾನ್ ಮತ್ತು ಭೂಮಿಕಾ ತಮ್ಮ ಒಲವಿನ ಅಮೃತಧಾರೆಯ ಮೂಲಕ ಇಡೀ ಕರ್ನಾಟಕದ ಮನ ಗೆದ್ದಿದ್ದರು. ಆದರೆ ಎಲ್ಲಾದಕ್ಕೂ ಒಂದು ಅಂತ್ಯ ಇರುವಂತೆ, ಇತ್ತೀಚೆಗೆ ಅಮೃತಧಾರೆ ಧಾರಾವಾಹಿಯೂ ಅಂತ್ಯ ಕಂಡಿದೆ. ಇದರಿಂದ ವೀಕ್ಷಕರೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ಇದೀಗ ವೀಕ್ಷಕರಿಗೆ ಸಿಹಿ ಸುದ್ದಿ
ಅಂದಹಾಗೆ ಕೆಲವು ದಿನಗಳಿಂದ ಅಮೃತಧಾರೆ ಭಾಗ 2 ಬರುತ್ತಾ ಎಂದು ಹಲವಾರು ಜನ ಕೇಳಿದ್ದರು. ಆ ಕುರಿತು ಸಂಶಯವನ್ನೂ ವ್ಯಕ್ತಪಡಿಸಿದ್ದರು. ಇದೀಗ ಜೀ ವಾಹಿನಿಯವರೇ ಮತ್ತೆ ಅಮೃತಧಾರೆ ಹೊಸ ಟಚ್ ನೊಂದಿಗೆ ಬರುವುದಾಗಿ ತಿಳಿಸಿದ್ದಾರೆ.
ಜೀ ವಾಹಿನಿ ನೀಡಿದೆ ಗುಡ್ ನ್ಯೂಸ್
ಪ್ರತಿ ಮನೆಗಳಲ್ಲಿ, ಮನಗಳಲ್ಲಿ ಒಲವ ಅಮೃತಧಾರೆ ಅಂತ ಶುರುವಾಗೋ ಅಮೃತಧಾರೆ ಧಾರವಾಹಿ ಕನ್ನಡಿಗರ ಹೃದಯಕ್ಕೆ ಸದಾ ಹತ್ತಿರ.. ಒಂಟಿ ಜೀವಗಳಿಬ್ಬರು ಒಂದಾಗೋ ಕಥೆಯಿದು.ವಯಸ್ಸನ್ನೂ ಮೀರಿ ಮದುವೆಯಾದ್ರೂ ಗಂಡ - ಹೆಂಡ್ತಿ ಅಂದ್ರೆ ಹಿಂಗಿರ್ಬೇಕು ಅಂತ ಗೌತಮ್, ಭೂಮಿಕಾ ಜೋಡಿಯನ್ನೇ ಜನ ಉದಾಹರಣೆ ಕೊಡೋ ಮಟ್ಟಕ್ಕೆ ಈ ಪಾತ್ರಗಳು ಬೆಳೆದು ನಿಂತಿವೆ..
ಅಂತ್ಯದ ಜೊತೆಗೆ ಹೊಸ ಆರಂಭ
ಪ್ರತಿ ಆರಂಭಕ್ಕೂ ಒಂದು ಅಂತ್ಯ ಇರೋ ಹಾಗೆ, ನಿಮ್ಮ zee ಕನ್ನಡ ಹೊತ್ತು ತಂದ ಅಮೃತಧಾರೆ, ಈಗ ಕೋಟ್ಯಂತರ ಜನರ ಪ್ರೀತಿಯಿಂದ ಕೊನೆಯಾಗ್ತಿದೆ. ಈ ಕೊನೆಯು ಕೂಡ ಹೊಸ ಆರಂಭಕ್ಕೆ ಮುನ್ನುಡಿ. ಆ ಆರಂಭವೇ ಅಮೃತಧಾರೆ ೨. ಕೋಟ್ಯಂತರ ಅಭಿಮಾನಿಗಳ ಈ ಒಲವ ಅಮೃತಧಾರೆಗೆ ಹೊಸತನದ ಟಚ್ ನೊಂದಿಗೆ ಮತ್ತೆ ಬರ್ತೀವಿ. ಈ ಇಡೀ ಜರ್ನಿಯಲ್ಲಿ ನಮ್ಮೊಂದಿಗೆ ನಡೆದ ನಿಮಗೆ ನಿಮ್ಮ ಜೀ ಕನ್ನಡ ಎಂದೆಂದೂ ಆಭಾರಿ.
ವೀಕ್ಷಕರು ಫುಲ್ ಖುಷ್
ಅಮೃತಧಾರೆ 2 ಬರಲಿದೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ. ಯಾವಾಗ ಧಾರಾವಾಹಿ ಆರಂಭವಾಗಲಿದೆ ಎನ್ನುವುದನ್ನು ಕಾಯುತ್ತಿದ್ದಾರೆ. ಈ ಧಾರಾವಾಹಿಯಲ್ಲೂ ರಾಜೇಶ್ ಮತ್ತು ಛಾಯಾ ಸಿಂಗ ಅವರೇ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಹಾರೈಸಿದ್ದಾರೆ.
ಮತ್ತೆ ಬರಲಿದ್ದಾರೆಯೇ ಡುಮ್ಮ ಸರ್ -ಭೂಮಿ
ಛಾಯಾ ಸಿಂಗ್ ಮತ್ತು ರಾಜೇಶ್ ಅವರು ಮತ್ತೆ ಹೊಸ ಕಥೆಯೊಂದಿಗೆ ಬರುವ ಸಾಧ್ಯತೆ ಕಡಿಮೆ. ಲೀಡ್ ಪಾತ್ರಗಳಲ್ಲಿ ಬೇರೆ ನಟ-ನಟಿಯರು ನಟಿಸುವ ಸಾಧ್ಯತೆ ಇದೆ. ಅಂದ ಹಾಗೇ ಅಮೃತಧಾರೆ ಹಿಂದಿಯ ಬಡೇ ಅಚ್ಚೆ ಲಗ್ ತೇ ಹೋ ಧಾರಾವಾಹಿಯ ರಿಮೇಕ್ ಎನ್ನಲಾಗಿತ್ತು, ಹಿಂದಿಯಲ್ಲಿ ಕೂಡ ಪಾರ್ಟ್ 2 ಬಂದಿದೆ, ಅದೇ ಕಥೆ ಇಲ್ಲೂ ಇರಲಿದೆಯೇ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.









