Kannada

ಜನಪ್ರಿಯ ನಟಿಯರು

ಇಂದು ಇನ್ನಿತರ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದು ಮಿಂಚುತ್ತಿರುವ ಈ ನಟಿಯರು, ನಟನೆಗೆ ಎಂಟ್ರಿ ಕೊಟ್ಟಿದ್ದು, ಕನ್ನಡ ಸಿನಿಮಾ ಮೂಲಕ. ಆ ನಟಿಯರು ಯಾರ್ಯಾರು ನೋಡೋಣ.

Kannada

ದೀಪಿಕಾ ಪಡುಕೋಣೆ

ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ ಮೊದಲ ಸಿನಿಮಾ ರಿಯಾಲ್ ಸ್ಟಾರ್ ಉಪೇಂದ್ರ ಜೊತೆ ನಟಿಸಿದ ‘ಐಶ್ವರ್ಯ’. ಬಳಿಕ ‘ಓಂ ಶಾಂತಿ ಓಂ’ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದರು.

Image credits: Instagram
Kannada

ರಶ್ಮಿಕಾ ಮಂದಣ್ಣ

ಕನ್ನಡತಿ ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಮೂಲಕ ಯಶಸ್ಸು ಪಡೆದರು. ನಂತರ ತಮಿಳು, ತೆಲುಗು, ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಹೆಸರು, ಜನಪ್ರಿಯತೆ ಪಡೆದರು.

Image credits: X
Kannada

ಶ್ರೀಲೀಲಾ

ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಈಗ ತೆಲುಗಿನ ಜನಪ್ರಿಯ ನಟಿ. ತೆಲುಗಿನಲ್ಲಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Image credits: instagram
Kannada

ಪ್ರಿಯಾಂಕ ಮೋಹನ್

ನಟಿ ಪ್ರಿಯಾಂಕಾ ಮೋಹನ್ ‘ಒಂದ್ ಕಥೆ ಹೇಳ್ಲಾ’ಸಿನಿಮಾ ಮೂಲಕ ಎಂಟ್ರಿ ಕೊಟ್ಟರೂ ಸಹ ಜನಪ್ರಿಯತೆ ಪಡೆದದ್ದು ಮಾತ್ರ, ತಮಿಳು ಸಿನಿಮಾಗಳಲ್ಲಿ.

Image credits: Instagram
Kannada

ರಕುಲ್ ಪ್ರೀತ್ ಸಿಂಗ್

ತೆಲುಗು ಚಿತ್ರರಂಗದಲ್ಲಿ ಮಿಂಚಿ, ಇದೀಗ ಬಾಲಿವುಡ್ ನಲ್ಲೂ ಸುದ್ದಿಯಲ್ಲಿರುವ ನಟಿ ರಕುಲ್ ಪ್ರೀತ್ ಸಿಂಗ್ ನಟಿಸಿದ ಮೊದಲ ಸಿನಿಮಾ ‘ಗಿಲ್ಲಿ’. ನಂತರ ತೆಲುಗಿನಲ್ಲಿ ನಟಿ ಜನಪ್ರಿಯತೆ ಪಡೆದರು.

Image credits: insta
Kannada

ಯಾಮಿ ಗೌತಮ್

ಸದ್ಯ ಹಿಂದಿಯಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟಿ ಯಾಮಿ ಗೌತಮ್ ಸಿನಿ ಜರ್ನಿ ಶುರುವಾಗಿದ್ದು ಸಹ ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾ ಮೂಲಕ.

Image credits: Yami gautam Instagram
Kannada

ನಿತ್ಯಾ ಮೆನನ್

ಕನ್ನಡದ 7 ಓ ಕ್ಲಾಕ್ ಚಿತ್ರದ ಮೂಲಕ ಎಂಟ್ರಿ ಕೊಟ್ಟ ನಿತ್ಯಾ ಮೆನನ್ ಬಳಿಕ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದರು.

Image credits: our own

ವಿವಾಹ ವಾರ್ಷಿಕೋತ್ಸವದ ದಶಕದ ಸಂಭ್ರಮದಲ್ಲಿ ‘ರಂಗಿತರಂಗ’ ನಟ ನಿರೂಪ್ ಭಂಡಾರಿ

ಸಂಗೀತ ಶೃಂಗೇರಿಗೆ ಲವ್ ಆಗಿದ್ಯಾ? ಫೋಟೊ ಜೊತೆಗಿನ ಕ್ಯಾಪ್ಶನ್ ಗುಟ್ಟೇನು?

ತಮ್ಮ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಾವನ್ನಪ್ಪಿದ ಕನ್ನಡ ನಟರು

ಸಿನಿಮಾದಲ್ಲಿ ತಮ್ಮ ಮಕ್ಕಳೊಂದಿಗೆ ನಟಿಸಿದ್ದ ಚಂದನವನದ ಸ್ಟಾರ್ ನಟರು