ಮಲಯಾಳಂ ಸಂದರ್ಶನಲ್ಲಿ ಕನ್ನಡ ಸಿನಿಮಾ ಸೆಟ್‌ನಲ್ಲಿ ಆಗಿರುವ ಗ್ರೇಟ್ ಎಕ್ಸ್‌ಪೀರಿಯನ್ಸ್ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಸುದೀಪ್ ನಟನೆಯ 'ಬಚ್ಚನ್' ಸಿನಿಮಾದ ವಿಲನ್ ಪಾತ್ರದ ಬಗ್ಗೆ ಹೇಳಿಕೊಂಡಿರುವ ನಟಿ ಭಾವನಾ, 'ಅಲ್ಲಿ ನಾನು ಎತ್ತರದಿಂದ ಕೆಳಗೆ ಬಿದ್ದು ಗಾಯವಾಗುವ ಸನ್ನಿವೇಶವಿತ್ತು. ಜೆಸಿಬಿ..
ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಚಿತ್ರಕ್ಕೆ ನಾಯಕಿಯಾಗಿ ಕನ್ನಡಕ್ಕೆ ಕಾಲಿಟ್ಟ ನಟಿ ಭಾವನಾ ಮೆನನ್!
ಕನ್ನಡಿಗರಿಗೆ ಮಲಯಾಳಂ ನಟಿ ಭಾವನಾ ಮೆನನ್ (Bhavana Menon) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಪುನೀತ್ ರಾಜ್‌ಕುಮಾರ್ ನಟನೆಯ ಜಾಕಿ, ಕಿಚ್ಚ ಸುದೀಪ್ ನಟನೆಯ ಬಚ್ಚನ್, ಶಿವರಾಜ್‌ಕುಮಾರ್ ನಟನೆಯ ಟಗರು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟಿ. 2010ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಚಿತ್ರಕ್ಕೆ ನಾಯಕಿಯಾಗಿ ಕನ್ನಡಕ್ಕೆ ಕಾಲಿಟ್ಟ ನಟಿ ಭಾವನಾ ಮೆನನ್. ಆ ಸಿನಿಮಾ ಸೂಪರ್ ಹಿಟ್ ಅದ ಬಳಿಕ ಕನ್ನಡದಲ್ಲಿ ಅವರಿಗೆ 'ಜಾಕಿ ಭಾವನಾ' ಎಂದೇ ಕರೆಯುತ್ತಾರೆ. ಕಾರಣ, ಕನ್ನಡದಲ್ಲಿ ಅದಾಗಲೇ ಭಾವನಾ ಹೆಸರಿನ ಇಬ್ಬರು ನಟಿಯರಿದ್ದರು.
ಜಾಕಿ ಭಾವನಾ (Jackie Bhavana) ಅವರು ಒಮ್ಮೆ ಮಲಯಾಳಂ ಸಂದರ್ಶನಲ್ಲಿ ಕನ್ನಡ ಸಿನಿಮಾ ಸೆಟ್‌ನಲ್ಲಿ ಆಗಿರುವ ಗ್ರೇಟ್ ಎಕ್ಸ್‌ಪೀರಿಯನ್ಸ್ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಸುದೀಪ್ ನಟನೆಯ 'ಬಚ್ಚನ್' ಸಿನಿಮಾದ ವಿಲನ್ ಪಾತ್ರದ ಬಗ್ಗೆ ಹೇಳಿಕೊಂಡಿರುವ ನಟಿ ಭಾವನಾ, 'ಅಲ್ಲಿ ನಾನು ಎತ್ತರದಿಂದ ಕೆಳಗೆ ಬಿದ್ದು ಗಾಯವಾಗುವ ಸನ್ನಿವೇಶವಿತ್ತು. ಜೆಸಿಬಿ ಮೂಲಕ ನನ್ನನ್ನು ಎತ್ತಿಎತ್ತಿ ಹಾಕಲಾಗುತ್ತಿತ್ತು. ಬೇರೆಬೇರೆ ಆಂಗಲ್‌ನಿಂದ ಶೂಟಿಂಗ್ ಮಾಡುತ್ತಿದ್ದ ಕಾರಣಕ್ಕೆ ಅದು ರೀಟೇಕ್ ಅಗುತ್ತಿತ್ತು. ಹೀಗಾಗಿ ಆ ಪಾತ್ರದಲ್ಲಿ ನನ್ನನ್ನು ಅದೆಷ್ಟು ಬಾರಿ ಮೇಲಿಂದ ಕೆಳಕ್ಕೆ ಹಾಕಿಲಾಗಿದೆ ಎಂದರೆ ಅದೊಂದು ಅಪೂರ್ವ ಅನುಭವ' ಎಂದಿದ್ದಾರೆ.
ಬಚ್ಚನ್ ಸಿನಿಮಾದ ವಿಲನ್ ರೋಲ್ ಬಗ್ಗೆ ಮಲಯಾಳಂ ಸಂದರ್ಶನದಲ್ಲಿ ಹೇಳಿಕೆ!
ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಭಾವನಾ ಮೆನನ್ (ಜಾಕಿ ಭಾವನಾ) ಅವರು ಕನ್ನಡ ಸಿನಿಮಾಗಳ ಬಗ್ಗೆ, ಕನ್ನಡ ಸಿನಿಮಾ ಉದ್ಯಮದ ಬಗ್ಗೆ ಬಹಳಷ್ಟು ಪ್ರೀತಿ-ಅಭಿಮಾನ ಇಟ್ಟುಕೊಂಡಿದ್ದಾರೆ. ಆಗಾಗ ತಮ್ಮ ನೆನಪಿನ ಮೂಟೆ ಬಿಚ್ಚಿ ಕೆಲವೊಂದು ಘಟನೆಗಳನ್ನು ಮಾಧ್ಯಮಗಳು ಹಾಗೂ ಯೂಟ್ಯೂಬ್ ಮುಂದೆ ಹಂಚಿಕೊಳ್ಳುತ್ತಾರೆ. ಇದೀಗ ಕನ್ನಡದ ಬಚ್ಚನ್ ಸಿನಿಮಾದ ವಿಲನ್ ರೋಲ್ ಬಗ್ಗೆ ಮಲಯಾಳಂ ಸಂದರ್ಶನದಲ್ಲಿ ಹೇಳಿಕೊಂಡಿರುವುದು ವೈರಲ್ ಆಗಿದೆ.
ನಟಿ ಭಾವನಾ ಅವರು ಕನ್ನಡ ಸಿನಿಮಾಗಳು!
ಅಂದಹಾಗೆ, ನಟಿ ಭಾವನಾ ಅವರು ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳನ್ನು ಮಾಡಿದ್ದಾರೆ. 2010ರಲ್ಲಿ 'ಜಾಕಿ'ಯಿಂದ ಶುರುವಾದ ಅವರ ಕನ್ನಡ ಸಿನಿಮಾ ಜರ್ನಿ, 2011ರಲ್ಲಿ ವಿಷ್ಣುವರ್ಧನ, 2012ರಲ್ಲಿ ರೋಮಿಯೋ ಹಾಗೂ ಯಾರೇ ಕೂಗಾಡಲಿ, 2013ರಲ್ಲಿ ಮೈತ್ರಿ ಹಾಗೂ ಟೋಪಿವಾಲಾ, 2018ರಲ್ಲಿ ಟಗರು, 2021ರಲ್ಲಿ ಭಜರಂಗಿ ಹಾಗೂ ಗೋವಿಂದಾ ಗೋವಿಂದಾ ಸಿನಿಮಾಗಳಲ್ಲಿ ನಟಿ ಭಾವನಾ ಮೆನನ್ ಅವರು ನಟಿಸಿದ್ದಾರೆ. ಕನ್ನಡ ಸಿನಿಮಾಪ್ರೇಕ್ಷಕರ ನೆನಪಲ್ಲಿ ಅವರು ಶಾಶ್ವತವಾಗಿ ಸ್ಥಾನ ಪಡಿದಿದ್ದಾರೆ. ಅದು ಅವರಿಗೂ ಅರಿವಿದೆ ಎನ್ನಬಹುದು.
