ಥೂ, ಇದೇನು? ಬಟ್ಟೆ ಹರ್ಕೊಂಡು, ಒಬ್ಬರ ಮೇಲೊಬ್ಬರ ಬಿದ್ದು ಗುದ್ದಾಟ; ಅತಿರೇಕವಾದ ಆಟ
ಬಿಗ್‌ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಾಕ್ಷಸರ ಟಾಸ್ಕ್ ಅತಿರೇಕಕ್ಕೆ ತಿರುಗಿದ್ದು, ಸ್ಪರ್ಧಿಗಳ ಕಣ್ಣಿಗೆ ಖಾರದ ಪುಡಿ ಎರಚುವಂತಹ ಘಟನೆಗಳು ನಡೆದಿವೆ. ಭಾರವಾದ ವಸ್ತುಗಳನ್ನು ಹೊರುವಾಗ ಸ್ಪರ್ಧಿಗಳ ನಡುವೆ ದೈಹಿಕ ಹಲ್ಲೆ, ಬಟ್ಟೆ ಹರಿದುಕೊಳ್ಳುವ ಮಟ್ಟಿಗೆ ಹೊಡೆದಾಟ ನಡೆದಿದೆ.

ಏನಾಗ್ತಿದೆ ಬಿಗ್‌ಬಾಸ್ ಮನೆಯಲ್ಲಿ?
ಬಿಗ್‌ಬಾಸ್ ಮನೆಯಲ್ಲಿ ಆಟಗಳು ಮತ್ತು ಸ್ಪರ್ಧಿಗಳ ವರ್ತನೆ ಅತಿರೇಕದ ಮಟ್ಟಕ್ಕೆ ತಲುಪಿದಂತಾಗಿದೆ. ಸ್ಪರ್ಧಿಗಳ ಆಟ ನೋಡಿದ ವೀಕ್ಷಕರು, ಇನ್ನು ಈ ಕಣ್ಣಲ್ಲ ಏನೇನು ನೋಡಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಮನೆಯಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂಬ ಎರಡು ಗುಂಪುಗಳಾಗಿದ್ದು, ಇವರ ನಡುವಿನ ಆಟ ಅಸಹ್ಯ ಹುಟ್ಟಿಸುವಂತಾಗಿದೆ.
ಏನಿದು ಟಾಸ್ಕ್?
ಗಂಧರ್ವರು ಮತ್ತು ರಾಕ್ಷಸರು ಎಂದು ಮನೆ ಎರಡು ಗುಂಪುಗಳಾಗಿದೆ. ರಾಕ್ಷಸರ ಆಜ್ಞೆಗಳನ್ನು ಗಂಧರ್ವರು ನಗುತ್ತಲೇ ಪಾಲಿಸಬೇಕು ಎಂದು ಹೇಳಲಾಗಿತ್ತು. ಆದ್ರೆ ರಾಕ್ಷಸರು ಈ ಒಂದು ಅಂಶದ ದುರಪಯೋಗ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಗಂಧರ್ವರ ಕಣ್ಣಿಗೆ ಖಾರದ ಪುಡಿ ಹಾಕಿರೋ ವಿಡಿಯೋಗಳು ಸಹ ಮುನ್ನಲೆಗೆ ಬಂದಿವೆ. ಬಲವಂತವಾಗಿ ಸೋನಿಕಾ ಅವರಿಗೆ ಮೆಣಸಿನಕಾಯಿ ತಿನ್ನಿಸಲಾಗಿದೆ. ಇತ್ತ ಕಿರಣ್ ಶಾಸ್ತ್ರ ಕಣ್ಣಿಗೆ ಖಾರ ಹೋಗಿದ್ದರಿಂದ ಕಿರುಚಾಡಿದ್ದಾರೆ.
ಹೆಗಲ್ಮೇಲೆ ಭಾರವಾದ ಪಾತ್ರ
ಈ ಆಟದ ಮುಂದುವರಿದ ಭಾಗದಲ್ಲಿ ಗಂಧರ್ವರು ಹೆಗಲ ಮೇಲೆ ತೆಗೆದುಕೊಂಡಿರುವ ಪಾತ್ರೆಯನ್ನು ಕೆಳಗೆ ಇಳಿಸುವಂತೆ ರಾಕ್ಷಸರು ಮಾಡಬೇಕಾಗುತ್ತದೆ. ಹಾಗಾಗಿ ರಾಕ್ಷಸರು ಪಾತ್ರೆಯಲ್ಲಿ ಭಾರದ ವಸ್ತುಗಳನ್ನು (ಜಿಮ್ ಉಪಕರಣ) ಹಾಕಿದ್ದಾರೆ. ಇಬ್ಬರು ಪಾತ್ರೆಯನ್ನು ತಮ್ಮ ಹೆಗಲ್ಮೇಲೆ ತೆಗೆದುಕೊಂಡಿದ್ರೆ, ಇನ್ನುಳಿದ ಗಂಧರ್ವರು ಪಾತ್ರೆ ಭಾರ ಕಡಿಮೆ ಮಾಡೋದಾಗಿದೆ.
ಹೊಡೆದಾಟ, ಎಳೆದಾಟ, ಕಿತ್ತಾಟ
ಪಾತ್ರೆಯೊಳಗೆ ಭಾರ ಹಾಕುವ ಮತ್ತು ತಡೆಯುವ ಸಂದರ್ಭದಲ್ಲಿ ಸ್ಪರ್ಧಿಗಳ ನಡುವೆ ಹೊಡೆದಾಟ, ಎಳೆದಾಟ, ಕಿತ್ತಾಟ ಸೇರಿದಂತೆ ಎಲ್ಲವೂ ನಡೆದಿದೆ. ದೈಹಿಕವಾಗಿ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಗಾನವಿ ಮುಖಕ್ಕೆ ಜಿಮ್ ವಸ್ತು ತಾಗಿರೋದನ್ನು ನೋಡಬಹುದು. ಮತ್ತೊಂದೆಡೆ ಸೌಂದರ್ಯಾ ಮತ್ತು ಕಾವ್ಯಾ ನಡುವೆಯೂ ರಣರೋಚಕ ಸ್ಪರ್ಧೆ ಏರ್ಪಟ್ಟಿದೆ.
ಬಟ್ಟೆ ಹರಿದುಕೊಂಡು ಕಾದಾಟ
ಇನ್ನು ಮನೆಯ ಪುರುಷ ಸದಸ್ಯರಾದ ಧನುಷ್ ಮತ್ತು ಗಗನ್ ಚಿನ್ನಪ್ಪ ಸಂಪೂರ್ಣವಾಗಿ ಹೊಡೆದಾಡುಕೊಂಡಂತೆ ಕಾಣಿಸುತ್ತಿದೆ. ಈ ವೇಳೆ ಧನುಷ್ ಅವರ ಮೇಲುಡುಗೆ ಸಂಪೂರ್ಣವಾಗಿ ಹರಿದು ಹೋಗಿದೆ. ಈ ಪ್ರೋಮೋ ನೋಡಿದ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

