ಬಿಗ್‌ಬಾಸ್ ಮೇಲೆಯೇ ತಾಂಡವ್, ಗಗನ್ ಗಂಭೀರ ಆರೋಪ! ಅವರಿಬ್ಬರಿಗಾಗಿ ಪಕ್ಷಪಾತ ನಡೀತಾ?
ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ವೇಳೆ ಪಕ್ಷಪಾತ ಮಾಡಲಾಗಿದೆ ಎಂದು ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಆರೋಪಿಸಿದ್ದಾರೆ. ಆದರೆ ಸೌಂದರ್ಯಾ ಶೆಟ್ಟಿ ಈ ಮಾತನ್ನು ವಿರೋಧಿಸಿದ್ದಾರೆ.

ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ
ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಜೊತೆಯಾಗಿ ಬಿಗ್‌ಬಾಸ್ ಮೇಲೆಯೇ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಸೌಂದರ್ಯಾ ಶೆಟ್ಟಿ, ಇವರಿಬ್ಬರ ಮಾತುಗಳನ್ನು ಒಪ್ಪಿಕೊಳ್ಳದೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಇಬ್ಬರು ಗೆಳೆಯರು ಜೊತೆಯಾಗಿ ಮಾಡಿದ ಆರೋಪ ಏನು ಎಂದು ನೋಡೋಣ ಬನ್ನಿ.
ಬಿಗ್‌ಬಾಸ್ ಮೇಲೆ ಅನುಮಾನ
ಈ ವಾರ ಮನೆಯಿಂದ ಹೊರಗೆ ಹೋಗುವ ನಾಮಿನೇಷನ್‌ನಿಂದ ನೇರವಾಗಿ ಸಂಗೀತಾ ಭಟ್ ಮತ್ತು ಆಸಿಯಾ ಫಿರ್ದೋಸ್ ಸೇವ್ ಆಗಿದ್ದಾರೆ. ಯಾವ ಸ್ಪರ್ಧಿಗಳು ಇವರಿಬ್ಬರ ಹೆಸರು ತೆಗೆದುಕೊಳ್ಳೋದನ್ನು ನೋಡಿ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಶಾಕ್ ಆಗಿದ್ದರು. ನಾಮಿನೇಷನ್ ಪ್ರಕ್ರಿಯೆ ಬಳಿಕ ಇಬ್ಬರ ನಡುವಿನ ಸಂಭಾಷಣೆಯಲ್ಲಿ ಬಿಗ್‌ಬಾಸ್ ಮೇಲೆಯೇ ಇಬ್ಬರು ಜೊತೆಯಾಗಿ ಬಿಗ್‌ಬಾಸ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಮೇಲೆ ಏನು ಆರೋಪ?
ಹೌದು, ನಾಮಿನೇಷನ್ ಪ್ರಕ್ರಿಯೆಯಲ್ಲಿ ಆಸಿಯಾ ಮತ್ತು ಸಂಗೀತಾ ಹೆಸರನ್ನು ಕೊನೆಗೆ ಕರೆಯಲಾಗುತ್ತದೆ. ಒಂದು ವೇಳೆ ಇಬ್ಬರ ಹೆಸರನ್ನು ಮೊದಲೇ ಕರೆದಿದ್ರೆ ಅವರಿಬ್ಬರ ಅಭಿಪ್ರಾಯಗಳು ಏನಾಗುತ್ತಿತ್ತು ಎಂಬುವುದು ಗೊತ್ತಾಗುತ್ತಿತ್ತು. ಆದ್ರೆ ಬಿಗ್‌ಬಾಸ್ ಅವರ ಹೆಸರನ್ನು ಕೊನೆಗೆ ಕರೆದು ಫೇವರ್ ಮಾಡಿದ್ರಾ ಎಂದು ತಾಂಡವ್ ಅನುಮಾನ ವ್ಯಕ್ತಪಡಿಸುತ್ತಾರೆ.
ಪಕ್ಷಪಾತದ ಆರೋಪ
ತಾಂಡವ್ ಮಾತುಗಳಿಗೆ ತಲೆಯಾಡಿಸಿದ ಗಗನ್ ಚಿನ್ನಪ್ಪ, ಹೌದು ಎಂದು ಹೇಳಿ ಸಂಗೀತಾ ಹೆಸರು ಯಾವಾಗ್ಲೂ ಕೊನೆಗೆ ಬರುತ್ತೆ ಅಂತಾರೆ. ಆದ್ರೆ ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸೌಂದರ್ಯಾ ಶೆಟ್ಟಿ, ಹಾಗೇನಿಲ್ಲ. ಅದು ಬಿಗ್‌ಬಾಸ್ ವಿವೇಚನೆಗೆ ಬಿಟ್ಟಿದ್ದು, ಸಹಜವಾಗಿ ಹೆಸರು ಹೇಳಿರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗಂಧರ್ವರು ಮತ್ತು ರಾಕ್ಷಸರು
ಈ ವಾರ ಮನೆಯಿಂದ ಹೊರಗಡೆ ಹೋಗಲು ಮಂಜುನಾಥ್, ಧನುಷ್, ಯಶಸ್ ಕೃಷ್ಣ, ಗಾನವಿ ಗೌಡ, ಕಾವ್ಯಾ, ಸೋನಿಕಾ, ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ನಾಮಿನೇಟ್ ಆಗಿದ್ದಾರೆ. ಸದ್ಯ ಅನಾರೋಗ್ಯದಿಂದ ಸಂಗೀತಾ ಭಟ್ ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂಬ ಟಾಸ್ಕ್ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

