- Home
- Entertainment
- TV Talk
- ಬಿಗ್‌ಬಾಸ್ ಮನೆಯಲ್ಲಿ ಆತಂಕ: ಸಂಗೀತಾ ಭಟ್ ಆರೋಗ್ಯದಲ್ಲಿ ತೀವ್ರ ಏರುಪೇರು, ಆಸ್ಪತ್ರೆಗೆ ಶಿಫ್ಟ್!
ಬಿಗ್‌ಬಾಸ್ ಮನೆಯಲ್ಲಿ ಆತಂಕ: ಸಂಗೀತಾ ಭಟ್ ಆರೋಗ್ಯದಲ್ಲಿ ತೀವ್ರ ಏರುಪೇರು, ಆಸ್ಪತ್ರೆಗೆ ಶಿಫ್ಟ್!
ಬಿಗ್‌ಬಾಸ್ ಮನೆಯ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ವೇಳೆ ಉಸಿರಾಟದ ಸಮಸ್ಯೆಯಿಂದ ಬಳಲಿದ ಸಂಗೀತಾ ಭಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆದು ಮತ್ತೆ ಮನೆಗೆ ಮರಳುತ್ತಾರಾ ಅಥವಾ ಆಟದಿಂದ ಹೊರಬರುತ್ತಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ.

ಸಂಗೀತಾ ಆರೋಗ್ಯದಲ್ಲಿ ಏರುಪೇರು
ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್‌ನಲ್ಲಿ ಅಸ್ತವ್ಯಸ್ಥಗೊಂಡ ಸ್ಪರ್ಧಿ ಸಂಗೀತಾ ಭಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಗೀತಾ ಭಟ್ ಅವರನ್ನು ಎತ್ತಿಕೊಂಡು ಸ್ಪರ್ಧಿಗಳು ಕನ್ಫೆನ್ಷನ್ ರೂಮ್‌ಗೆ ಕರೆದುಕೊಂಡು ಬರುವ ವಿಡಿಯೋ ಕ್ಲಿಪ್‌ಗಳು ವೈರಲ್ ಆಗಿವೆ.
ಮನೆಯಿಂದ ಹೊರಗೆ ಹೋಗುವ ಇಂಗಿತ
ವೀಕೆಂಡ್‌ನಲ್ಲಷ್ಟೇ ಸಂಗೀತಾ ಭಟ್ ಮನೆಯಿಂದ ಹೊರಗಡೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದ್ರೆ ವೀಕ್ಷಕರು ನೀಡಿದ ಮತಗಳ ಆಧಾರದ ಮೇಲೆ ಸಂಗೀತಾ ಸೇವ್ ಆಗಿದ್ದರು. ಸಂಗೀತಾ ಈ ಹೇಳಿಕೆಗೆ ಅವರ ಆರೋಗ್ಯ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು.
inhalerಗಾಗಿ ಹುಡುಕಾಟ
ಇದೀಗ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ವೇಳೆ ಸಂಗೀತಾ ಭಟ್ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದ್ದಾರೆ. ಕಾವ್ಯಾ ಮತ್ತು ಸೌಂದರ್ಯಾ ಮನೆಯಲ್ಲಿ inhaler ಇದೆಯಾ ಎಂದು ಹುಡುಕಾಟ ನಡೆಸಿದ್ದಾರೆ. inhaler ಸಿಗದಿದ್ದಾಗ ಕೂಡಲೇ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ.
ಅಡ್ಡಿಯಾಯ್ತಾ ಆರೋಗ್ಯ ಸಮಸ್ಯೆ?
ಸಂಗೀತಾ ಭಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿಕಿತ್ಸೆ ಪಡೆದುಕೊಂಡು ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗ್ತಾರಾ ಅಥವಾ ಆಸ್ಪತ್ರೆಯಿಂದಲೇ ಆಟಕ್ಕೆ ವಿದಾಯ ಹೇಳ್ತಾರಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಎರಡನೇ ವಾರದಲ್ಲಿಯೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅನಾರೋಗ್ಯ ಹಿನ್ನೆಲೆ ಆಟದಿಂದ ಹೊರಗೆ ಬಂದಿದ್ದರು.
ನಾಮಿನೇಷನ್‌ನಿಂದ ಸೇವ್ ಆಗಿರೋ ಸಂಗೀತಾ ಭಟ್
ಈ ವಾರದ ನಾಮಿನೇಷನ್‌ನಿಂದಲೂ ಸಂಗೀತಾ ಸೇವ್ ಆಗಿದ್ದಾರೆ. ಹಾಗಾಗಿ ಸಂಗೀತಾ ಮತ್ತೆ ಮನೆಯೊಳಗೆ ಬರಬೇಕು ಮತ್ತು ತಮ್ಮ ಆಟವನ್ನು ಮುಂದುವರಿಸಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

