ಕರ್ಣ ಸೀರಿಯಲ್‌ನಲ್ಲಿ ನಯನತಾರಾಳೇ ತನ್ನ ಪೋಷಕರ ಹಂತಕಿ ಎಂಬ ಸತ್ಯ ನಿತ್ಯಾಗೆ ತಿಳಿದಿದೆ. ಆದರೆ ಈ ವಿಚಾರವನ್ನು ಕರ್ಣನಿಗೆ ತಿಳಿಸುವ ಬದಲು ನಯನತಾರಾಗೆ ಕರೆ ಮಾಡಿ ನಿತ್ಯಾ ಎಡವಟ್ಟು ಮಾಡಿದ್ದಾಳೆ. ಇದರಿಂದ ವೀಕ್ಷಕರು ನೇರವಾಗಿ ನಟಿ ನಮ್ರತಾ ಗೌಡ ಅವರ ಮೇಲೆ ತೀವ್ರ ಕೋಪಗೊಂಡಿದ್ದಾರೆ.
ಕರ್ಣ ಸೀರಿಯಲ್‌ನಲ್ಲಿ (Karna Serial) ನಿತ್ಯಾಗೆ ತನ್ನ ಅಪ್ಪ-ಅಮ್ಮನ ಕೊಲೆ ಮಾಡಿದ್ದು, ಕರ್ಣನನ್ನು ತಂದೆಯಿಂದ ದೂರ ಮಾಡಿದ್ದು ನಯನತಾರಾ ಎನ್ನುವ ವಿಷ್ಯ ಗೊತ್ತಾಗಿದೆ. ಇಷ್ಟು ವರ್ಷಗಳಿಂದ ಹುಡುಕುತ್ತಿದ್ದ ಕ್ಷಣ ಕೊನೆಗೂ ಬಂದು ಬಿಟ್ಟಿದೆ. ಆದರೆ ಇಲ್ಲೊಂದು ಎಡವಟ್ಟು ಆಗಿರುವ ಕಾರಣದಿಂದ ಕರ್ಣ ಸೀರಿಯಲ್ ವೀಕ್ಷಕರು ನಿತ್ಯಾಳ ಮೇಲೆ ಕೋಪ ತೋರಿಸುವುದನ್ನು ಬಿಟ್ಟು, ಸೀರಿಯಲ್ಗಳನ್ನೂ ನಿಜ ಜೀವನವೇ ಎಂದುಕೊಳ್ಳುವ ಕೆಲವು ವೀಕ್ಷಕರು, ನಿತ್ಯಾ ಪಾತ್ರ ಮಾಡ್ತಿರೋ ನಟಿ ನಮ್ರತಾ ಗೌಡ ಅವರ ಮೇಲೆ ಕೋಪಗೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ತೋಟದ ಮಾಲಿ ನಯನತಾರಾನೇ ನಿಧಿ ಮತ್ತು ನಿತ್ಯಾಳ ಅಪ್ಪ-ಅಮ್ಮನನ್ನು ಕೊಲೆ ಮಾಡಿದ್ದು ಎನ್ನುವ ವಿಷ್ಯ ತಿಳಿಸಿದ್ದಾನೆ. ಜೊತೆಗೆ ಕರ್ಣನಿಂದ ಅಪ್ಪನನ್ನು ಬೇರೆ ಮಾಡಿರುವ ವಿಷ್ಯವನ್ನೂ ಬರೆದು ತಿಳಿಸಿದ್ದಾನೆ. ಇದನ್ನು ಓದುತ್ತಿದ್ದಂತೆಯೇ ನಿತ್ಯಾಳ ಜೀವವೇ ಬಾಯಿಗೆ ಬಂದಂತಾಗಿದೆ. ಈಗ ಅವರ ಮುಂದಿದ್ದದ್ದು ಒಂದೇ ಆಯ್ಕೆ. ಅದೇನೆಂದರೆ ಈ ವಿಷ್ಯವನ್ನು ಅವಳು ನಿಧಿ ಮತ್ತು ಕರ್ಣನಿಗೆ ತಿಳಿಸಬೇಕಿತ್ತು. ಆದರೆ ಸೀರಿಯಲ್ ಮುಂದೆ ಹೋಗಬೇಕಲ್ಲಾ, ಅದಕ್ಕಾಗಿಯೇ ಈ ವಿಷ್ಯವನ್ನು ಅವರಿಗೆ ಮೊದಲು ತಿಳಿಸುವ ಬದಲು ನೇರವಾಗಿ ನಿತ್ಯಾ, ನಯನತಾರಾಳಿಗೆ ಫೋನ್ ಮಾಡಿದ್ದಾಳೆ.
ನಯನತಾರಾಗೆ ಕಾಲ್
ನೀನೇ ನಮ್ಮ ಅಪ್ಪ-ಅಮ್ಮನನ್ನು ಕೊಲೆ ಮಾಡಿದ್ದು, ಕರ್ಣನನ್ನು ಅಪ್ಪನಿಂದ ದೂರ ಮಾಡಿದ್ದು ಎಲ್ಲ ವಿಷ್ಯ ಗೊತ್ತಾಗಿದೆ ಎಂದು ನಯನತಾರಾಗೆ ಹೇಳಿದ್ದಾಳೆ. ಆ ಬಳಿಕ ಕರ್ಣನಿಗೆ ಮತ್ತು ನಿಧಿಗೆ ಕಾಲ್ ಮಾಡಿ, ಎಲ್ಲಾ ಸತ್ಯವನ್ನು ಹೇಳುವ ಸಲುವಾಗಿ ಭುವನೇಶ್ವರಿ ಮನೆಗೆ ಬರುವಂತೆ ಹೇಳಿದ್ದಾಳೆ. ಇದಕ್ಕೇ ಈಗ ವೀಕ್ಷಕರಿಗೆ ನಿತ್ಯಾ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಇದಕ್ಕೆ ಕಾರಣ, ಹೇಳಿಕೇಳಿ ನಯನತಾರಾ ಯಾರ ಜೀವವನ್ನೂ ತೆಗೆಯಲು ಹಿಂಜರಿಯುವವಳಲ್ಲ. ಅವಳಿಗೆ ಕಾಲ್ಮಾಡಿ ವಿಷ್ಯ ತಿಳಿಸಿದ್ದಾಳೆ ಎಂದ ಮೇಲೆ, ಅವಳು ನಿತ್ಯಾಗೆ ಒಂದು ಗತಿ ಕಾಣಿಸುತ್ತಾಳೆ, ಇಲ್ಲವೇ ಅವಳು ಯಾರಿಗೂ ಈ ವಿಷ್ಯವನ್ನು ಹೇಳದಂತೆ ಏನೋಒಂದು ಮಾಡುತ್ತಾಳೆ ಎನ್ನೋದು ದಿಟ.
ನಿತ್ಯಾಗೆ ಬುದ್ಧಿನೇ ಇಲ್ಲ
ಇನ್ನೊಂದು ಕಾರಣ ಎಂದರೆ, ನಿತ್ಯಾ ಕರ್ಣನಿಗೆ ನಿಮ್ಮ ಅಮ್ಮ ಯಾರು ಎಂದು ಗೊತ್ತಾಗಿದೆ ಎಂದಳೇ ವಿನಾ, ಭುವನೇಶ್ವರಿಯೇ ನಿನ್ನ ಅಮ್ಮ ಎಂದು ಒಂದು ಮಾತನ್ನೂ ಹೇಳಲಿಲ್ಲ. ನಿಧಿಗೆ ಕಾಲ್ಮಾಡಿ, ನಯನತಾರಾನೇ ಕೊಲೆ ಮಾಡಿದ್ದು ಎಂದು ಫೋನ್ನಲ್ಲಿ ಹೇಳಲಿಲ್ಲ. ಅಲ್ಲಿಗೆ ಯಾರಿಗೂ ಈ ಸತ್ಯವನ್ನು ನಿಧಿ ಹೇಳಲಿಲ್ಲ, ಬದಲಿಗೆ ನಯನತಾರಾಗೆ ಹೇಳಿದಳು. ಇನ್ನು ಈ ವಿಷ್ಯವನ್ನು ಅವರಿಗೆ ಹೇಳಲು ನಯನತಾರಾ ಬಿಡುವುದಿಲ್ಲ ಎನ್ನುವುದು ದಿಟ. ಅಷ್ಟಕ್ಕೂ ಸೀರಿಯಲ್ ಇನ್ನಷ್ಟು ಮುಂದೆ ಹೋಗಬೇಕು ಎಂದರೆ ಇದು ಅನಿವಾರ್ಯ ಕೂಡ. ಅದಕ್ಕಾಗಿಯೇ ನಿರ್ದೇಶಕರು, ಕಥೆಗಾರರು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾರೆ. ಆದರೆ, ಸೀರಿಯಲ್‌ನಲ್ಲಿ ಇರುವವರು ಪಾತ್ರಧಾರಿಗಳಷ್ಟೇ ಎನ್ನೋದನ್ನು ಮರೆಯುವ ಕೆಲವು ವೀಕ್ಷಕರು ಈಗ ನಿತ್ಯಾಗೆ ಬುದ್ಧಿನೇ ಇಲ್ಲ ಎಂದು ನಟಿ ನಮ್ರತಾ ಗೌಡ ಅವರ ಮೇಲೆಯೇ ಕೋಪಮಾಡಿಕೊಂಡು ಕಮೆಂಟ್ಸ್ ಹಾಕುತ್ತಿದ್ದಾರೆ! ಇದೇ ಸೀರಿಯಲ್ ಪವರ್!






