- Home
- Entertainment
- TV Talk
- Bigg Boss ಮನೆಗೆ ಬಂದ ಮಲ್ಲಮ್ಮ ಮೇಲೆ ಧ್ರುವಂತ್‌ಗೆ ಅಸಮಾಧಾನ; ತಲೆ ಮೇಲೆ ನೀರು ಸುರಿದ್ರು!
Bigg Boss ಮನೆಗೆ ಬಂದ ಮಲ್ಲಮ್ಮ ಮೇಲೆ ಧ್ರುವಂತ್‌ಗೆ ಅಸಮಾಧಾನ; ತಲೆ ಮೇಲೆ ನೀರು ಸುರಿದ್ರು!
Bigg Boss Kannada Season 12 Mallamma: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಇದೆ. ಹೀಗಿರುವಾಗ ಈ ಸೀಸನ್‌ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳು ದೊಡ್ಮನೆಗೆ ಬರುತ್ತಿದ್ದಾರೆ. ಮಲ್ಲಮ್ಮ ಕೂಡ ಬಂದಿದ್ದಾರೆ. ಪ್ರೋಮೋ ರಿಲೀಸ್ ಆಗಿದೆ.

ಏನ್ ಮಲ್ಲಮ್ಮ ಬ್ಯೂಟಿಫುಲ್ ಆಗಿದ್ಯಾ?
ಮಲ್ಲಮ್ಮ ಅವರು ದೊಡ್ಮನೆಗೆ ಬಂದಿದ್ದಾರೆ. ಮಲ್ಲಮ್ಮ ಅವರು, “ಏನ್ ಗಿಲ್ಲಿ, ಮಾತನಾಡಿಸೋದಿಲ್ಲವಾ?” ಎಂದು ಹೇಳಿದ್ದಾರೆ. ಗಿಲ್ಲಿ ನಟ ಅವರು “ಏನ್ ಮಲ್ಲಮ್ಮ ಬ್ಯೂಟಿಫುಲ್ ಆಗಿದ್ಯಾ?” ಎಂದು ಮಾತನಾಡಿಸಿದ್ದಾರೆ.
ಫುಲ್ ನಂದೇ ಹವಾ
ಗಿಲ್ಲಿ ನಟ ಅವರು ಮಲ್ಲಮ್ಮಗೆ “ನಿನಗೆ ಫುಲ್ ಫ್ಯಾನ್ಸ್, ಫಾಲೋವರ್ಸ್?” ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮಲ್ಲಮ್ಮ ಅವರು, “ಫುಲ್ ನಂದೇ ಹವಾ” ಎಂದು ಹೇಳಿದ್ದಾರೆ.
ನಿಮ್ಮನ್ನು ತುಂಬ ಮಿಸ್ ಮಾಡಿಕೊಂಡೆ
ಧ್ರುವಂತ್ ಅವರು ಮಲ್ಲಮ್ಮನನ್ನು ನೋಡಿ ಖುಷಿಯಿಂದ ಅಪ್ಪಿಕೊಂಡಿದ್ದರು. ಮಲ್ಲಮ್ಮ ಹಾಗೂ ಧ್ರುವಂತ್ ಕ್ಲೋಸ್ ಆಗಿದ್ದರು. ಈಗ ಧ್ರುವಂತ್ ಅವರು, “ನಾನು ನಿಮ್ಮನ್ನು ತುಂಬ ಮಿಸ್ ಮಾಡಿಕೊಂಡೆ, ನೀವು ಹೋದಮೇಲೆ ನನಗೆ ಜೋಡಿ ಇರಲಿಲ್ಲ, ಏನೆಲ್ಲಾ ಆಯ್ತು” ಎಂದು ಪ್ರಶ್ನೆ ಕೇಳಿದ್ದಾರೆ.
ಎಲ್ಲೋ ಜರ್ಕ್ ಕಾಣಿಸ್ತಿದೆ
ಅಶ್ವಿನಿ ಗೌಡ ಬಳಿ ಧ್ರುವಂತ್ ಅವರು, “ಮಲ್ಲಮ್ಮ ಮೊದಲಿನ ಥರ ಇಲ್ಲ, ಎಲ್ಲೋ ಜರ್ಕ್ ಕಾಣಿಸ್ತಿದೆ” ಎಂದಿದ್ದಾರೆ. ಆಗ ಅಶ್ವಿನಿ ಗೌಡ ಅವರು, “ಇರಲಿ, ನನಗೆ ನೀನು, ನಿನಗೆ ನಾನು” ಎಂದು ಹೇಳಿದ್ದಾರೆ.
ನೀರು ಸುರಿದರು
ಅದಾದ ಬಳಿಕ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಲ್ಲಮ್ಮನ ತಲೆ ಮೇಲೆ ನೀರು ಸುರಿಯಲಾಗಿದೆ. ಇದ್ಯಾಕೆ ಎಂದು ರಿವೀಲ್ ಆಗಬೇಕಿದೆ. ಮಲ್ಲಮ್ಮ ಬಂದಮೇಲೆ ಏನೇನು ಚೇಂಜಸ್ ಆಗಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

