- Home
- Entertainment
- TV Talk
- Bigg Boss Kannada: ಮಂಜು ಪರ್ಸನಲ್ ಲೈಫ್‌ಗೆ ಡ್ಯಾಮೇಜಿಂಗ್ ಹೇಳಿಕೆ ಕೊಟ್ಟ Gilli Nata; ತಿರುಗಿಬಿದ್ದ ಬುಜ್ಜಿ
Bigg Boss Kannada: ಮಂಜು ಪರ್ಸನಲ್ ಲೈಫ್‌ಗೆ ಡ್ಯಾಮೇಜಿಂಗ್ ಹೇಳಿಕೆ ಕೊಟ್ಟ Gilli Nata; ತಿರುಗಿಬಿದ್ದ ಬುಜ್ಜಿ
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಸೀಸನ್ 11ರ ಕೆಲ ಸ್ಪರ್ಧಿಗಳು ಬಂದಿದ್ದಾರೆ. ಈ ಬಾರಿ ರೆಸಾರ್ಟ್, ಅತಿಥಿಗಳ ಟಾಸ್ಕ್ ನಡೆಯುತ್ತಿದೆ. ಸೀಸನ್ 12ರ ಸ್ಪರ್ಧಿಗಳು ರೆಸಾರ್ಟ್‌ನಲ್ಲಿ ಮ್ಯಾನೇಜರ್, ವೇಟರ್, ಸೀಸನ್ 11 ಸ್ಪರ್ಧಿಗಳ ಅತಿಥಿಗಳಾಗಿದ್ದಾರೆ. ಆದರೆ ಗಿಲ್ಲಿ ಮಾತು ಅತಿರೇಕ ಆಗಿದೆಯಂತೆ.

ನಾನು ಬೇರೆ ಆಗ್ತೀನಿ
ಬಿಗ್ ಬಾಸ್ ಎಲ್ಲರ ಮುಂದೆ ಮ್ಯಾಕ್ಸ್ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂದು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ಎರಡನೇಯದೋ, ಮೂರನೆಯದೋ” ಎಂದು ಕೇಳಿದ್ದಾರೆ. ಆಮೇಲೆ ಇದನ್ನು ಪ್ರಶ್ನೆ ಮಾಡಿದಾಗ, ಗಿಲ್ಲಿ ನಟ ಅವರು, “ಯುಟ್ಯೂಬ್‌ನಲ್ಲಿ ಹೋದ ವರ್ಷ ಮದುವೆ ಆಗಿದೆ ಎಂದು ಓದಿದ್ದೆ” ಎಂದಿದ್ದಾರೆ. ಆಗ ಮಂಜು ಅವರು, “ನೀನು ಲಿಮಿಟ್ ಮೀರಿ, ಪರ್ಸನಲ್ ಆಗಿ ಹೋದರೆ ನಾನು ಬೇರೆ ಆಗ್ತೀನಿ” ಎಂದಿದ್ದಾರೆ.
ಕಾಮಿಡಿ ಮಾಡು
“ನಾವು ಬಹಳ ಅತಿರೇಕ ನನ್ನ ಮಕ್ಕಳು, ನೀನು ಅತಿರೇಕ ಮಾಡೋಕೆ ಹೋಗಬೇಡ. ನೀನು ಯಾಕೆ ಮಾತಾಡ್ತಿತ್ತಿದ್ಯಾ?” ಎಂದು ಮಂಜು ಹೇಳಿದ್ದಾರೆ. ಈ ಬಗ್ಗೆ ರಜತ್ ಕೂಡ ಮಾತನಾಡಿದ್ದು, “ಮಂಜುಗೆ ಎರಡನೇಯದಾ? ಮೂರನೇಯದಾ ಎಂದು ಪ್ರಶ್ನೆ ಮಾಡಿದ್ದರೆ ಬೇಸರ ಆಗುತ್ತದೆ, ಕಾಮಿಡಿ ಮಾಡು, ಆ ಥರ ಮಾಡಬಾರದು” ಎಂದು ಹೇಳಿದ್ದಾರೆ.
ಇರಿಟೇಟ್ ಆದ ಸ್ಪರ್ಧಿಗಳು
ಗಿಲ್ಲಿ ನಟ ಅವರ ಕಾಮಿಡಿ, ಉಳಿದ ಸ್ಪರ್ಧಿಗಳಿಗೆ ಇರಿಟೇಟ್ ಆಗಿದೆ. ಇದನ್ನು ತ್ರಿವಿಕ್ರಮ್, ಮಂಜು, ರಜತ್ ಅವರು ಮಾತನಾಡಿಕೊಂಡಿದ್ದಾರೆ. ಉಳಿದ ಎಲ್ಲ ಸ್ಪರ್ಧಿಗಳು ಸೈಲೆಂಟ್ ಆಗಿದ್ದು, ಸಪ್ಲೈಯರ್ ಆಗಿದ್ದರು. ಇನ್ನೊಂದು ಕಡೆ ಗಿಲ್ಲಿ ಬಿಟ್ಟು ಉಳಿದವರು ಯಾರೂ ಅಗತ್ಯಕ್ಕಿಂತ ಜಾಸ್ತಿ ಮಾತನಾಡಿಲ್ಲ.
ಯುಟ್ಯೂಬ್‌ನಲ್ಲಿ ಬಂದಿದ್ದೆಲ್ಲವೂ ಸತ್ಯಾನಾ?
“ಎಲ್ಲರದ್ದು ಒಂದು ಸ್ಪೇಸ್ ಅಂತ ಇರುತ್ತದೆ, ಚೆನ್ನಾಗಿ ಆಡುತ್ತಿದ್ದೀಯಾ, ಎಲ್ಲರ ಪೇಮೆಂಟ್‌ನ್ನು ನೀನೇ ತಗೋತಿದ್ಯಾ? ಮಾತು ಲಿಮಿಟ್ ಇರುತ್ತದೆ. ನನ್ನ ಮದುವೆಗೆ ನೀನು ಬಂದಿದ್ಯಾ? ಯುಟ್ಯೂಬ್‌ನಲ್ಲಿ ಬಂದಿದ್ದೆಲ್ಲವೂ ಸತ್ಯಾನಾ? ಮಾತು ಲಿಮಿಟ್ ಅಲ್ಲಿ ಇರಬೇಕು” ಎಂದು ಗಿಲ್ಲಿ ನಟನಿಗೆ ಮಂಜು ಬುದ್ಧಿ ಹೇಳಿದ್ದರು.
ಕ್ಷಮೆ ಕೇಳಿದ ಗಿಲ್ಲಿ ನಟ
ಗಿಲ್ಲಿ ನಟ ಅವರು ತಾವು ಆಡಿದ ಮಾತಿಗೆ ಪದೇ ಪದೇ ಕ್ಷಮೆ ಕೇಳಿದ್ದಾರೆ. ಆದರೂ ಕೂಡ ಪದೇ ಪದೇ ಈ ವಿಷಯವು ಚರ್ಚೆ ಆಗಿದೆ. ಹಾಗಾದರೆ ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

