ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸ್ನಾನ ಮಾಡಿಲ್ಲವೆಂದು ರಕ್ಷಿತಾ ಮತ್ತು ಗಿಲ್ಲಿ ಕಾಲೆಳೆದಾಗ ಮನೆಯಲ್ಲಿ ಗೊಂದಲ ಸೃಷ್ಟಿಯಾಯಿತು. ತಾನು ಸ್ನಾನ ಮಾಡಿದ್ದೇನೆಂದು ಸೂರಜ್ ಪದೇ ಪದೇ ಸಮಜಾಯಿಷಿ ನೀಡಿದರೂ, ಒಪ್ಪದಿದ್ದಾಗ ದೇವರಾಣೆ ಮಾಡಿದರು. ಆಗ ರಕ್ಷಿತಾ ಶೆಟ್ಟಿ ಪ್ಲೈಯಿಂಗ್ ಕಿಸ್ ಕೊಟ್ಟು ಖುಷಿಪಟ್ಟರು.
ಅಶ್ವಿನಿ ಗೌಡ ಅವರು, ಯಾರಿದ್ದಾರೆ ಸೂರಜ್ ಸ್ನಾನಕ್ಕೆ ಯಾರು ಹೋಗಿದ್ದಾರೆ, ಹೋಗಿ ಸ್ನಾನ ಮಾಡಿ ಫ್ರೆಶ್‌ಅಪ್ ಆಗಿ ಚೆನ್ನಾಗಿ ಕಾಣುತ್ತೀರಿ ಎಂದು ಹೇಳುತ್ತಾರೆ. ಆದರೆ, ಸೂರಜ್ ನಾನು ಸ್ನಾನ ಮಾಡಿದ್ದೇನೆ, ಆಗಲೇ ಮಾಡಿದೆ ಎಂದು ಹೇಳುತ್ತಾರೆ. ಅವರ ಮಾತನ್ನು ಕೇಳಿದ ಕೂಡಲೇ ಅಲ್ಲಿದ್ದ ರಕ್ಷಿತಾ, ಗಿಲ್ಲಿನಟ ಹಾಗೂ ಮಾಳು ಅವರು ಸೇರಿದಂತೆ ಅಶ್ವಿನಿ ಗೌಡ ಅವರೂ ನಗಾಡುತ್ತಾರೆ.
ಆಗ ರಕ್ಷಿತಾ ಶೆಟ್ಟಿ ನಂಗೆ ಇದು ಬೇಕಿತ್ತು, ಥ್ಯಾಂಕ್ಯೂ ಸೋ ಮಚ್ ಆಯ್ತಾ.., ಎಂದು ಜೋರಾಗಿ ಗಹಗಹಿಸಿ ನಗುತ್ತಾರೆ. ಇದೇ ವೇಳೆ ಇದೇನಣ್ಣಾ ಹಿಂಗ್ ಕೂತ್ಕೊಂಡಿದಿಯೇ..? ಯಾಕೆ ಸಪ್ಪಗಿದ್ದೀಯ ಎಂದು ಕೇಳುತ್ತಾರೆ. ನಿಜವಾಗಿಯೂ ಸ್ನಾನ ಮಾಡಿದ್ದೀಯಾ ನೀನು? ಎಂದು ಗಿಲ್ಲಿ ಆಶ್ಚರ್ಯದಿಂದ ಮತ್ತೊಮ್ಮೆ ಪ್ರಶ್ನೆ ಮಾಡುತ್ತಾರೆ. ಆಗ ಸೂರಜ್ ಪರವಹಿಸಿ ಮಾತನಾಡಿದ ಮಾಳು ನಿಪನಾಳ ಅವರು, ಸೂರಜ್ ಆಗಲೇ ಸ್ನಾನ ಮಾಡಿದ್ದಾರೆ ಎಂದು ಬೆಂಬಲಕ್ಕೆ ನಿಲ್ಲುತ್ತಾರೆ. ಆಗ ಇದೆಲ್ಲಾ ಸುಳ್ಳು, ನೀವು ಸ್ನಾನ ಮಾಡಿಯೇ ಇಲ್ಲ ಎಂದು ಸೂರಜ್‌ಗೆ ರಕ್ಷಿತಾ ಹೇಳುತ್ತಾರೆ.
ದೇವ್ರಾಣೆಗೂ ನಾನು ಸ್ನಾನ ಮಾಡಿದ್ದೇನೆ:
ಆಗ ಸೂರಜ್ ಅವರು ನಾನು ದೇವ್ರಾಣೆಗೂ ಸ್ನಾನ ಮಾಡಿದ್ದೇನೆ ಎಂದು ಹೇಳುತ್ತಾರೆ. ಅಶ್ವಿನಿ ಅವರು ಹೌದಾ ಅಯ್ಯಯ್ಯೋ ಗೊತ್ತೇ ಆಗ್ತಿಲ್ಲ ಎನ್ನುತ್ತಾರೆ. ಆಗ ರಕ್ಷಿತಾ, ಇವರು ಸ್ನಾನ ಮಾಡಿದ್ದಾರೆ ಅನ್ನಿಸುತ್ತಲೇ ಇಲ್ಲ ಎಂದು ಧ್ವನಿ ಗೂಡಿಸುತ್ತಾರೆ. ನಾನು ಅವಾಗಲೇ ಮೇಲೆ ಟಿಶರ್ಟ್ ಅನ್ನು ಮೇಲೆ ಜಿಪ್ ಇರೋದು ಹಾಕಿದ್ದೆ, ಈಗ ರೌಂಡ್ ನೆಕ್ ಇಟೋ ಟೀಶರ್ಟ್ ಹಾಕಿದ್ದೇನೆ ಎಂದು ಸೂರಜ್ ಸಮಜಾಯಿಷಿ ಕೊಡುತ್ತಾರೆ.
ಅಣ್ಣೋ ನಿನ್ ಕೋದಲು ನೋಡಿಬಿಟ್ಟು ಹೇಳ್ತೀನಿ, ನೀನು ಸ್ನಾನ ಮಾಡಿಲ್ಲ ಎಂದು ಗಿಲ್ಲಿ ಹೇಳುತ್ತಾರೆ. ಇದಕ್ಕೆ ಧ್ವನಿಗೂಡಿಸಿದ ಅಶ್ವಿನಿ ಗೌಡ ಅವರು ಇವತ್ತು ಸೂರಜ್ ಮುಖದಲ್ಲಿ ಫ್ರೆಶ್‌ನೆಸ್ ಕಾಣಿಸ್ತಿಲ್ಲ ಯಾಕೆ? ಎಂದು ಪ್ರಶ್ನಿಸುತ್ತಾರೆ. ನಿಜವಾಗಿಯೂ ನಾನು ಸ್ನಾನ ಮಾಡಿದ್ದೇನೆ ಎಂದು ಸೂರಜ್ ಹೇಳ್ತಾರೆ. ನೀನು ಸ್ನಾನ ಮಾಡಿಲ್ಲ, ಸ್ನಾನ ಮಾಡಿದ್ದರೆ ತುಂಬಾ ಫ್ರೆಶ್ ಇರ್ತೀರಿ ಎಂದು ಅಶ್ವಿನಿ ಗೌಡ ಹೇಳ್ತಾರೆ.
ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸ
ಆಗ ರಕ್ಷಿತಾ ಅವರು ಒಬ್ಬ ಮನುಷ್ಯ ಸ್ನಾನ ಮಾಡಿ ನನ್ನ ತರಹದ್ದೇ ಕಾಂಪ್ಲಿಮೆಂಟ್ ಕೇಳಿದರೆ ಎಷ್ಟು ಖುಷಿ ಆಗುತ್ತದೆ ಗೊತ್ತಾ ಎಂದು ಅಶ್ವಿನಿ ಗೌಡ ಅವರಿಗೆ ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಡುತ್ತಾರೆ. ಆಗ ಅಶ್ವಿನಿ ಗೌಡ ಅವರು ಎಂತಹದ್ದರಲ್ಲಿ ಖುಷಿ ಪಡ್ತಿದ್ದಾಳೆ ನೋಡು ಎಂದು ಕಿಚಾಯಿಸುತ್ತಾರೆ. ಸ್ನಾನ ಮಾಡಿಲ್ಲ ಅಂದರೂ ಒಬ್ಬರು ಹೀಗೆ ಕಾಣಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಾಯ್ತಲ್ಲ ಎಂದು ರಕ್ಷಿತಾ ಹೇಳುತ್ತಾರೆ.
ರಕ್ಷಿತಾ ಪರವಾಗಿಲ್ಲ ನಿಮಗೆ 2 ಬಕೆಟ್ ಇಡ್ತೇನೆ ಬಂದು ಸ್ನಾನ ಮಾಡಿ ಎಂದು ಹೇಳುತ್ತಾರೆ. ನೀನು ನೀರು ಕಾಯಿಸಿಲ್ಲ ಅಂದರೂ ಪರವಾಗಿಲ್ಲ ನಾನು ಸ್ನಾನ ಮಾಡದ್ದೇನೆ ಎಂದು ಸೂರಜ್ ಹೇಳ್ತಾರೆ.
ಗಿಲ್ಲಿ ಸ್ನಾನ ಮಾಡಿದರೆ 10 ನಿಮಿಷ ಬೆಳ್ಳಗೆ ಕಾಣ್ತಾರೆ:
ನಮ್ಮ ಗಿಲ್ಲಿ ಸ್ನಾನ ಮಾಡಿದ ನಂತರ ಗೊತ್ತಾಗುತ್ತದೆ ಎಂದು ರಕ್ಷಿತಾ ಶೆಟ್ಟಿ ಹೇಳ್ತಾರೆ. ಆಗ ಅಶ್ವಿನಿ ಗೌಡ ಅವರು, ಹೌದು ಗೊತ್ತಾಗುತ್ತೆ. ಸ್ವಲ್ಪ ಬೆಳ್ಳಗೆ ಕಾಣಿಸ್ತಾನಲ್ಲ ಒಂದು 10 ನಿಮಿಷ ಹಾಗಾಗಿ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಗಿಲ್ಲಿ ಕೋಪದಿಂದಲೇ ಹೌದು 10 ನಿಮಿಷ ಎಂದು ಗುರಾಯಿಸುತ್ತಾರೆ.
ಆಗ ರಕ್ಷಿತಾ ಬರೀ 10 ನಿಮಿಷ ಬೆಳ್ಳಗೆ ಕಾಣ್ತಾರಾ ಎಂದು ನಗಾಡುತ್ತಾರೆ. ಮುಂದುವರೆದು ನೀವು ಸ್ನಾನ ಮಾಡಿದ ನಂತರ ಮನೆಯವರ ಮುಂದೆಲ್ಲಾ ಸುತ್ತಾಡಿ ಬನ್ನಿ. ಆಗ ಸ್ನಾನ ಮಾಡಿದ್ದೀರಿ ಎಂದು ಎಲ್ಲರೂ ತಿಳಿದುಕೊಳ್ತಾರೆ. ಇಲ್ಲವೆಂದರೆ ನೀವು ಸ್ನಾನ ಮಾಡಿಲ್ಲ ಅಂತಲೇ ಎಲ್ಲರೂ ಭಾವಿಸ್ತಾರೆ ಎಂದು ರಕ್ಷಿತಾ ಹೇಳುತ್ತಾರೆ. 10 ನಿಮಿಷದ ನಂತರ ಅದೇ ಹಳೆಯ ಗಿಲ್ಲಿ ಕಾಣಿಸುತ್ತಾರೆ.


