- Home
- Entertainment
- TV Talk
- BBK 12: ಸೀರಿಯಸ್ ಟೈಮ್‌ನಲ್ಲೂ ಗಿಲ್ಲಿ ವಿಚಿತ್ರ ವರ್ತನೆ; ಇತ್ತ ರಿಷಾ ಗೌಡ ಎಲಿಮಿನೇಷನ್‌ನಲ್ಲಿತ್ತು ಅಚ್ಚರಿ
BBK 12: ಸೀರಿಯಸ್ ಟೈಮ್‌ನಲ್ಲೂ ಗಿಲ್ಲಿ ವಿಚಿತ್ರ ವರ್ತನೆ; ಇತ್ತ ರಿಷಾ ಗೌಡ ಎಲಿಮಿನೇಷನ್‌ನಲ್ಲಿತ್ತು ಅಚ್ಚರಿ
ಬಿಗ್‌ಬಾಸ್ ಮನೆಯಿಂದ ರಿಷಾ ಗೌಡ ಎಲಿಮಿನೇಟ್ ಆಗಿದ್ದು, ಈ ಗಂಭೀರ ಸಂದರ್ಭದಲ್ಲಿ ಗಿಲ್ಲಿ ನಟ ತಮಾಷೆ ಮಾಡಿ ಕಾವ್ಯಾ ಅವರ ಬೇಸರಕ್ಕೆ ಕಾರಣರಾಗಿದ್ದಾರೆ. ಅನಿರೀಕ್ಷಿತವಾಗಿ ರಿಷಾ ಅವರನ್ನು ಮುಖ್ಯ ದ್ವಾರದ ಬದಲು ಕನ್ಫೆಷನ್ ರೂಮ್ ಮೂಲಕ ಹೊರಗೆ ಕಳುಹಿಸಲಾಯಿತು.

ಗಿಲ್ಲಿ ನಟ
ಬಿಗ್‌ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಯಾವಾಗ ಕಾಮಿಡಿ ಮಾಡ್ತಾರೆ ಅನ್ನೋದು ಗೊತ್ತಿಲ್ಲ. ನಾಲ್ಕೈದು ವಾರ ತಮ್ಮೊಂದಿಗೆ ಆಟವಾಡಿದ್ದ ಸ್ಪರ್ಧಿ ರಿಷಾ ಗೌಡ ಎಲಿಮಿನೇಷನ್ ಆಗಿ ಹೊರಡುತ್ತಿರುವ ಸಂದರ್ಭದಲ್ಲಿಯೂ ಗಿಲ್ಲಿ ನಟ ತಮಾಷೆಯಾಗಿ ನಡೆದುಕೊಂಡಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ
ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಧ್ರುವಂತ್, ಜಾನ್ವಿ ಮತ್ತು ರಿಷಾ ನಿಂತುಕೊಂಡಿದ್ದರು. ರಿಷಾ ಗೌಡ ಔಟ್ ಆಗುತ್ತಿದ್ದು, ಮನೆಯಿಂದ ಹೊರಗೆ ಬರಲು ಮುಖ್ಯದ್ವಾರದ ಬಳಿ ಬರುತ್ತಾರೆ. ಆದ್ರೆ ಕನ್ಫೆಷನ್ ರೂಮ್ ಮೂಲಕ ಹೊರಗೆ ಬರುವಂತೆ ರಿಷಾ ಗೌಡ ಅವರಿಗೆ ಸೂಚಿಸಲಾಗುತ್ತದೆ.
ಕಾವ್ಯಾ ಬೇಸರ
ಬಿಗ್‌ಬಾಸ್ ಸೂಚನೆ ಮೇರೆಗೆ ಮುಖ್ಯದ್ವಾರದ ಮುಂದೆ ನಿಂತಿದ್ದ ರಿಷಾ ಗೌಡ ಮನೆಯೊಳಗೆ ಬರುತ್ತಾರೆ. ಇನ್ನುಳಿದ ಸ್ಪರ್ಧಿಗಳು ರಿಷಾ ಹಿಂದೆಯೇ ಮನೆಯೊಳಗೆ ಬರುತ್ತಾರೆ. ಈ ಸಂದರ್ಭದಲ್ಲಿ ಕಾವ್ಯಾ ಕೈ ಹಿಡಿದುಕೊಂಡು ಗಿಲ್ಲಿ ನಟ, ನಾವಿಬ್ಬರು ಈ ಡೋರ್ ಮೂಲಕ ಹೋಗೋಣ ಎಂದು ಹೇಳುತ್ತಾರೆ. ಸೀರಿಯಸ್ ಟೈಮ್‌ನಲ್ಲಿ ಗಿಲ್ಲಿ ತಮಾಷೆಗೆ ಕಾವ್ಯಾ ಬೇಸರ ವ್ಯಕ್ತಪಡಿಸುತ್ತಾರೆ.
ಎಲಿಮಿನೇಷನ್‌ನಲ್ಲಿತ್ತು ಅಚ್ಚರಿ
ಸಾಮಾನ್ಯವಾಗಿ ಮನೆಯಿಂದ ಯಾವುದೇ ಸ್ಪರ್ಧಿ ಎಲಿಮಿನೇಟ್ ಆದ್ರೆ ಮುಖ್ಯದ್ವಾರದಿಂದಲೇ ಕಳುಹಿಸಿ ಕೊಡಲಗುತ್ತದೆ. ತದನಂತರ ಮನೆಯಿಂದ ಹೊರಬಂದ ಸ್ಪರ್ಧಿಯನ್ನು ವೇದಿಕೆ ಮೇಲೆ ಕರೆಸಿ ಸುದೀಪ್ ಅವರು ಗೌರವಯುತವಾಗಿ ಬೀಳ್ಕೊಡುತ್ತಾರೆ. ಆದ್ರೆ ರಿಷಾ ಅವರನ್ನು ಕನ್ಫೆಷನ್ ರೂಮ್ ಮೂಲಕ ಹೊರಗೆ ಕರೆಸಿಕೊಳ್ಳಲಾಗಿದೆ. ಹೀಗೆ ಆಗಿದ್ದು ಏಕೆ ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹುಟ್ಟುಹಬ್ಬ ಸಂಭ್ರಮದಲ್ಲಿ Bigg Boss ಅಶ್ವಿನಿ ಗೌಡ: ವಯಸ್ಸೆಷ್ಟು? ನಟಿಯ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ
ಭಾನುವಾರದ ಸಂಚಿಕೆ
ಭಾನುವಾರದ ಸಂಚಿಕೆ ಕೊನೆಗೆ ಸ್ಪರ್ಧಿಗಳಿಗೆ ಗಾರ್ಡನ್ ಏರಿಯಾದಲ್ಲಿ ಟಾಸ್ಕ್ ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಯಾವುದೇ ಟಿವಿ ಇಲ್ಲ. ಹಾಗಾಗಿ ತಾತ್ಕಾಲಿಕವಾಗಿ ಮುಖ್ಯದ್ವಾರದ ಬಳಿಯಲ್ಲಿಯೇ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಆದ್ದರಿಂದ ಮುಖ್ಯದ್ವಾರ ತೆರೆಯೋದು ಸಾಧ್ಯವಾಗದ ಕಾರಣ ರಿಷಾ ಅವರನ್ನು ಕನ್ಫೇಷನ್ ರೂನ್‌ನಿಂದ ಕ ಕರೆಸಿಕೊಳ್ಳಲಾಯ್ತು.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು- Bigg Boss ಮಂಜು ಭಾಷಿಣಿ ಕೊನೆಯ ದಿನದ ಶೂಟಿಂಗ್: ಉಮಾಶ್ರೀ ಕಣ್ಣೀರು- ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

