- Home
- Entertainment
- TV Talk
- BBK 12: ಮಾಜಿ ಸ್ಪರ್ಧಿಗಳಿಂದ ಗಿಲ್ಲಿಗೆ ಖಡಕ್ ವಾರ್ನಿಂಗ್; ಬಿಟ್ಟಿ ಕಾಮಿಡಿಗೆ ಕೆಂಡವಾದ ರಜತ್?
BBK 12: ಮಾಜಿ ಸ್ಪರ್ಧಿಗಳಿಂದ ಗಿಲ್ಲಿಗೆ ಖಡಕ್ ವಾರ್ನಿಂಗ್; ಬಿಟ್ಟಿ ಕಾಮಿಡಿಗೆ ಕೆಂಡವಾದ ರಜತ್?
ಬಿಗ್‌ಬಾಸ್ ಮನೆಯು 'ಬಿಬಿ ಪ್ಯಾಲೇಸ್' ಎಂಬ ರೆಸ್ಟೋರೆಂಟ್ ಆಗಿ ಬದಲಾಗಿದ್ದು, ಸೀಸನ್ 11ರ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಟಾಸ್ಕ್‌ನಲ್ಲಿ, ಗಿಲ್ಲಿ ನಟನ ಮಾತುಗಳಿಂದಾಗಿ ಉಗ್ರಂ ಮಂಜು ಮತ್ತು ರಜತ್ ಕೋಪಗೊಂಡು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಿಬಿ ಪ್ಯಾಲೇಸ್
ಬಿಗ್‌ಬಾಸ್ ಮನೆ ಬಿಬಿ ಪ್ಯಾಲೇಸ್ ಆಗಿ (ರೆಸ್ಟೋರೆಂಟ್) ಬದಲಾಗಿದೆ. ಸೀಸನ್ 11ರ ಸ್ಪರ್ಧಿಗಳಾದ ರಜತ್, ಉಗ್ರಂ ಮಂಜು, ಮೋಕ್ಷಿತಾ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಪಾರ್ಟಿ ಮಾಡಲು ಬಿಬಿ ಪ್ಯಾಲೇಸ್‌ಗೆ ಅತಿಥಿಗಳಾಗಿ ಬಂದಿದ್ದಾರೆ. ಐವರು ಸ್ಪರ್ಧಿಗಳ ಜೊತೆಯಲ್ಲಿಯೂ ಕಾಮಿಡಿ ಮಾಡೋಕೆ ಹೋದ ಗಿಲ್ಲಿ ಅವರಿಗೆ ರಜತ್ ಎಚ್ಚರಿಕೆ ನೀಡಿದ್ದಾರೆ.
ಮಂಜು ಖಡಕ್ ವಾರ್ನಿಂಗ್
ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ನಾವೆಲ್ಲರೂ ಬ್ಯಾಚುಲರ್ ಪಾರ್ಟಿ ಮಾಡಲು ಬಂದಿದ್ದೇವೆ ಎಂದು ಮೋಕ್ಷಿತಾ ಪೈ ಹೇಳುತ್ತಾರೆ. ಬಿಗ್‌ಬಾಸ್ ಮದುವೆ ವಿಷಯ ಹೇಳುತ್ತಿದ್ದಂತೆ ಗಿಲ್ಲಿ ನಟ, ಎರಡನೇಯದ್ದಾ ಅಥವಾ ಮೂರನೇದ್ದಾ ಅಂತ ಕೇಳುತ್ತಾರೆ.
ಕೂಡಲೇ ಮಂಜು ಕೋಪದಿಂದ ಗಿಲ್ಲಿಯತ್ತ ನೋಡುತ್ತಾರೆ. ಪರ್ಸನಲ್ ಅಂತಾ ಬಂದ್ರೆ ನೀನು ಸಪ್ಲೈಯರೂ ಅಲ್ಲ, ನಾನು ಅತಿಥಿಯೂ ಅಲ್ಲ. ಬೇರೆಯೇ ಆಗುತ್ತೆ ಎಂದು ಮಂಜು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬಿಟ್ಟಿ ಊಟ
ಇಷ್ಟಕ್ಕೆ ಸುಮ್ಮನಾಗದ ಗಿಲ್ಲಿ ನಟ, ನಿಮಗೆಲ್ಲಾ ಮಂಜಣ್ಣ ಲೀಡರ್ ಅಲ್ಲವಾ? ಬ್ಯಾಚುಲರ್ ಪಾರ್ಟಿ ಮಾಡೋಕೆ ಬಂದಿದ್ದೇವೆ ಎಂದ ಮೋಕ್ಷಿತಾ ಅವರಿಗೆ ನೀವು ಬಿಟ್ಟಿ ಊಟ ಮಾಡೋಕೆ ಬಂದಿದ್ದೀರಾ ಅಂತ ಕೇಳ್ತಾರೆ. ಈ ವೇಳೆ ಮಧ್ಯೆ ಬಂದ ರಜತ್, ನೀನು ನಮಗೆ ಬಿಟ್ಟಿ ಊಟ ಕೊಡ್ತಿದ್ದೇನಪ್ಪಾ? ಮಾತುಗಳು ಸರಿಯಾಗಿರಲಿ. ಎಲ್ಲರ ಹತ್ತಿರ ಮಾತನಾಡಿದಂತೆ ನನ್ನೊಂದಿಗೆ ಮಾತಾಡಬೇಡ ಎಂದು ಹೇಳಿದ್ದಾರೆ.
ರೆಸ್ಟೋರೆಂಟ್ ಮಾದರಿಯ ಟಾಸ್ಕ್
ಸೀಸನ್ 11ರಲ್ಲಿಯೂ ರೆಸ್ಟೋರೆಂಟ್ ಮಾದರಿಯ ಟಾಸ್ಕ್ ನೀಡಲಾಗಿತ್ತು. ಹಾಗಾಗಿ ಐವರು ಮಾಜಿ ಸ್ಪರ್ಧಿಗಳಿಗೆ ಈ ಟಾಸ್ಕ್ ಹೇಗೆ ಆಡಬೇಕು? ಯಾವ ರೀತಿ ಸೇವೆಗಳನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಗೊತ್ತಿದೆ. ಹಾಗಾಗಿ ಸಣ್ಣ ತಪ್ಪಾದ್ರೂ ಅದನ್ನು ದೊಡ್ಡದಾಗಿ ತೋರಿಸುವ ಮಾಜಿಗಳ ಮುಂದೆ ಹಾಲಿಗಳು ಹೇಗೆ ಆಟವಾಡುತ್ತಾರೆ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್‌ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
ಬಿಗ್‌ಬಾಸ್ ಸೀಸನ್ 12
ಬಿಗ್‌ಬಾಸ್ ಸೀಸನ್ 12ರ ಎಲ್ಲಾ ಸ್ಪರ್ಧಿಗಳು ಪ್ಯಾಲೇಸ್‌ನ ಸಿಬ್ಬಂದಿಗಳಾಗಿದ್ದಾರೆ. ಗಿಲ್ಲಿ ಮುಂದೆಯೇ ಕಾವ್ಯಾ ಅವರಿಗೆ ರಜತ್, ಕಾವು ಎಂದು ಕರೆಯುತ್ತಾರೆ. ಇದಕ್ಕೆ ನೀವು ಕಾವು ಅಂದ್ರೆ ನನಗೆ ನೋವು ಆಗುತ್ತೆ ಅಂತ ಗಿಲ್ಲಿ ನಟ ಹೇಳಿದ್ದಾರೆ. ನೀನು ರೋಧನೆ ಆದ್ರೆ ನಾವುಗಳು ಎಕ್ಸ್ ರೋಧನೆ ಎಂದು ಗಿಲ್ಲಿಗೆ ರಜತ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Ashwini Gowdaರನ್ನು ಹೊಗಳುತ್ತಲೇ Bigg Boss 12 ವಿನ್ನರ್ ಯಾರೆಂದು ಘೋಷಿಸಿಯೇ ಬಿಟ್ಟ Risha Gowda
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

