- Home
- Entertainment
- TV Talk
- ಐಶ್ವರ್ಯಾ ಸಿಂಧೋಗಿ ಮನೆಯಲ್ಲಿ ಅದ್ಧೂರಿ ವರಮಹಾಲಕ್ಷ್ಮಿ ಹಬ್ಬ: ತಾಯಿಯೊಂದಿಗೆ ಬಂದ ಶಿಶಿರ್ ಶಾಸ್ತ್ರಿ!
ಐಶ್ವರ್ಯಾ ಸಿಂಧೋಗಿ ಮನೆಯಲ್ಲಿ ಅದ್ಧೂರಿ ವರಮಹಾಲಕ್ಷ್ಮಿ ಹಬ್ಬ: ತಾಯಿಯೊಂದಿಗೆ ಬಂದ ಶಿಶಿರ್ ಶಾಸ್ತ್ರಿ!
‘ಬಿಗ್ ಬಾಸ್ ಕನ್ನಡ 11’ ಖ್ಯಾತಿಯ ಐಶ್ವರ್ಯಾ ಸಿಂಧೋಗಿ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಶಿಶಿರ್ ಶಾಸ್ತ್ರಿ ತಮ್ಮ ತಾಯಿಯೊಂದಿಗೆ ಭಾಗಿಯಾಗಿದ್ದು, ಹಬ್ಬದ ಫೋಟೋಗಳು ಗಮನ ಸೆಳೆಯುತ್ತಿವೆ.

ಅದ್ದೂರಿ ವರಮಹಾಲಕ್ಷ್ಮಿ ಪೂಜೆ
‘ಬಿಗ್ ಬಾಸ್ ಕನ್ನಡ 11’ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಐಶ್ವರ್ಯಾ ಸಿಂಧೋಗಿ, ಈ ಬಾರಿ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಭಕ್ತಿ-ಶ್ರದ್ಧೆಯ ಜೊತೆಗೆ ಸಂಪ್ರದಾಯಬದ್ಧವಾಗಿ ನಡೆದ ಈ ವಿಶೇಷ ಪೂಜೆಯ ಸಂಭ್ರಮದಲ್ಲಿ ಶಿಶಿರ್ ಶಾಸ್ತ್ರಿ ಅವರು ತಮ್ಮ ತಾಯಿಯೊಂದಿಗೆ ಭಾಗಿಯಾಗಿದ್ದು, ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಐಶ್ವರ್ಯಾ ಮನೆಯಲ್ಲಿ ಕಂಗೊಳಿಸಿದ ವರಮಹಾಲಕ್ಷ್ಮಿ!
ಐಶ್ವರ್ಯಾ ಸಿಂಧೋಗಿ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಸಡಗರ ಮನೆ ಮಾಡಿತ್ತು. ದೇವಿಯ ವಿಗ್ರಹವನ್ನು ಸುಂದರವಾಗಿ ಪ್ರತಿಷ್ಠಾಪಿಸಿ, ಹೂವು ಹಾಗೂ ವಿವಿಧ ಅಲಂಕಾರಗಳಿಂದ ಕಂಗೊಳಿಸುವಂತೆ ಸಿಂಗರಿಸಲಾಗಿತ್ತು. ಬಳಿಕ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
ತಾಯಿಯೊಂದಿಗೆ ಶಿಶಿರ್ ಶಾಸ್ತ್ರಿ ಆಗಮನ
ಈ ವಿಶೇಷ ಕ್ಷಣಕ್ಕೆ ‘ಬಿಗ್ ಬಾಸ್ ಕನ್ನಡ 11’ ಖ್ಯಾತಿಯ ಶಿಶಿರ್ ಶಾಸ್ತ್ರಿ ಕೂಡ ತಮ್ಮ ತಾಯಿಯೊಂದಿಗೆ ಆಗಮಿಸಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಶಿಶಿರ್ ಹಾಗೂ ಐಶ್ವರ್ಯಾ, ಅಲಂಕೃತ ವರಮಹಾಲಕ್ಷ್ಮಿ ದೇವಿಯ ಮುಂದೆ ನಿಂತು ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ವರಮಹಾಲಕ್ಷ್ಮಿ ಹಬ್ಬ 2026
ಈ ವರ್ಷದ ಹಬ್ಬ ಹಲವಾರು ಸುಂದರ ಅರಿವುಗಳನ್ನು ಕೊಟ್ಟಿತು. ನಾವು ಇಷ್ಟಪಡುವುದನ್ನು ಮಾಡುವ ಸಂತೋಷ, ನಮ್ಮಲ್ಲಿರುವುದರಲ್ಲಿ ಸಂತೃಪ್ತಿ, ಮತ್ತು ಸುತ್ತಲೂ ತುಂಬಿರುವ ಶುದ್ಧವಾದ ಸಕಾರಾತ್ಮಕ ಶಕ್ತಿ. ಹಬ್ಬದ ನಿಜವಾದ ವೈಭವ ಅಲಂಕಾರದಲ್ಲಾಗಲೀ, ಆಚರಣೆಯಲ್ಲಾಗಲೀ ಇಲ್ಲ... ನಮ್ಮ ಸಂಭ್ರಮದ ಭಾಗವಾಗುವ ಜನರಲ್ಲಿದೆ.
ಪ್ರೀತಿಯಿಂದ ತುಂಬಿದ ಸಂಭ್ರಮ
ಅಷ್ಟಲಕ್ಷ್ಮಿಯರ ಶಕ್ತಿ, ಆಶೀರ್ವಾದ ಮತ್ತು ಸಮೃದ್ಧಿಯನ್ನು ನೆನಪಿಸುವ ಈ ಹಬ್ಬದಲ್ಲಿ, ಆ ಶಕ್ತಿಯನ್ನು ನನ್ನ ಸುತ್ತಲೂ ಅನುಭವಿಸಿದ್ದು ತುಂಬಾ ವಿಶೇಷ. ಜನರಿಂದ ವೈಭವಗೊಂಡ ಹಬ್ಬ.. ಪ್ರೀತಿಯಿಂದ ತುಂಬಿದ ಸಂಭ್ರಮ ಎಂದು ಐಶ್ವರ್ಯಾ ಸಿಂಧೋಗಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಮುಂದುವರಿದ ಬಾಂಧವ್ಯ!
‘ಬಿಗ್ ಬಾಸ್ ಕನ್ನಡ 11’ರಲ್ಲಿ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಸಿಂಧೋಗಿ ಜೋಡಿ ಪ್ರೇಕ್ಷಕರ ಗಮನ ಸೆಳೆದಿತ್ತು. ರಿಯಾಲಿಟಿ ಶೋ ಮುಗಿದು ಇಬ್ಬರೂ ದೊಡ್ಮನೆಯಿಂದ ಹೊರಬಂದ ಬಳಿಕವೂ ಇವರ ನಡುವಿನ ಸ್ನೇಹ ಹಾಗೂ ಆತ್ಮೀಯತೆ ಮುಂದುವರಿದಿದೆ.
ಸಾಮಾಜಿಕ ಜಾಲತಾಣದಲ್ಲಿ ಸದ್ದು
ಇದೀಗ ಐಶ್ವರ್ಯಾ ಅವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಶಿಶಿರ್ ತಮ್ಮ ತಾಯಿಯೊಂದಿಗೆ ಆಗಮಿಸಿರುವುದು ಮತ್ತೊಮ್ಮೆ ಗಮನ ಸೆಳೆದಿದೆ. ಈ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

