- Home
- Entertainment
- TV Talk
- ರಾಜ್ಯ, ರಾಷ್ಟ್ರ ರಾಜಕಾರಣದ ನೆಚ್ಚಿನ ಐಷಾರಾಮಿ ಕೇಂದ್ರಕ್ಕೆ ಸೇರಿದ 17 ಬಿಗ್‌ಬಾಸ್ ಸ್ಪರ್ಧಿಗಳು!
ರಾಜ್ಯ, ರಾಷ್ಟ್ರ ರಾಜಕಾರಣದ ನೆಚ್ಚಿನ ಐಷಾರಾಮಿ ಕೇಂದ್ರಕ್ಕೆ ಸೇರಿದ 17 ಬಿಗ್‌ಬಾಸ್ ಸ್ಪರ್ಧಿಗಳು!
Bigg Boss Kannada contestants moved: ಮಾಲಿನ್ಯ ಮಂಡಳಿಯ ನೋಟಿಸ್‌ನಿಂದಾಗಿ ಬಿಗ್‌ಬಾಸ್ ಸೆಟ್ ಇರುವ ಜಾಲಿವುಡ್ ಸ್ಟುಡಿಯೋ ಸೀಜ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ 17 ಸ್ಪರ್ಧಿಗಳನ್ನು ಬಿಡದಿಯ ಐತಿಹಾಸಿಕ ಹಾಗೂ ರಾಜಕೀಯವಾಗಿ ಸುದ್ದಿಯಾಗಿದ್ದ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.

17 ಸ್ಪರ್ಧಿಗಳು
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹೋಬಳಿಯ ಇಂಡಸ್ಟ್ರಿಯಲ್ ಏರಿಯಾದ ಬಿಗ್‌ಬಾಸ್ ಅದ್ದೂರಿ ಮನೆಯಲ್ಲಿದ್ದ ಎಲ್ಲಾ 17 ಸ್ಪರ್ಧಿಗಳನ್ನು ಯಾವುದೇ ಹೋಟೆಲ್‌ಗೆ ಕರೆದುಕೊಂಡು ಹೋಗದೇ ಖ್ಯಾತ, ಐಷಾರಾಮಿ ರೆಸಾರ್ಟ್‌ಗೆ ಕರೆದುಕೊಂಡು ಬರಲಾಗಿದೆ.
ರೆಸಾರ್ಟ್‌ಗೆ ಶಿಫ್ಟ್
ಬಿಗ್‌ಬಾಸ್ ಸ್ಪರ್ಧಿಗಳನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬುದನ್ನು ಗೌಪ್ಯ ಮಾಡಲಾಗಿತ್ತು. ಹೀಗಾಗಿ ಕಾರುಗಳನ್ನು ಎರಡು ಮಾರ್ಗದಲ್ಲಿ ಡೈವರ್ಟ್ ಮಾಡಲಾಗಿತ್ತು. ಅಂತಿಮವಾಗಿ ಎಲ್ಲಾ 17 ಸ್ಪರ್ಧಿಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿ ಬಳಿಯಲ್ಲಿರುವ ಬಿಡದಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.
ಈಗಲ್ ಟನ್ ಗಾಲ್ಫ್ ರೆಸಾರ್ಟ್
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿಯುಂಟಾಗಿರುವ ಸಂದರ್ಭದಲ್ಲಿ ಈ ರೆಸಾರ್ಟ್ ಮುನ್ನಲೆಗೆ ಬಂದಿರುತ್ತದೆ. ಈ ಹಿಂದೆ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಈಗಲ್ ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಈಗಲ್ ಟನ್ ಗಾಲ್ಫ್ ರೆಸಾರ್ಟ್ ನತ್ತ ಇಡೀ ದೇಶದ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿಯೇ ಇಂದಿನ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು.
ಸಿನಿಮಾಗಳ ಚಿತ್ರೀಕರಣ
2019ರಲ್ಲಿ ಈಗಲ್ ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ಬಿಜೆಪಿ ಮಾಜಿ ಸಚಿವ ಆನಂದ್ ಸಿಂಗ್ ಮತ್ತು ಕಾಂಗ್ರೆಸ್ ಶಾಸಕ ಗಣೇಶ್ ನಡುವೆ ಗಲಾಟೆ ನಡೆದಿತ್ತು. ರೆಸಾರ್ಟ್ ರಾಜಕಾರಣ ಅಂದ್ರೆ ಎಲ್ಲರ ಕಣ್ಮುಂದೆ ಬಿಡದಿಯ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಬರುತ್ತದೆ. ಇದೀಗ ಇದೇ ರೆಸಾರ್ಟ್‌ಗೆ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ಎಲ್ಲಾ ಸ್ಪರ್ಧಿಗಳು ಶಿಫ್ಟ್ ಆಗಿದ್ದಾರೆ. ಈ ರೆಸಾರ್ಟ್‌ನಲ್ಲಿ ಹಲವು ಸಿನಿಮಾಗಳ ಚಿತ್ರೀಕರಣವೂ ನಡೆದಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದು 17 ಸ್ಪರ್ಧಿಗಳು ಹೋಗಿದ್ದೆಲ್ಲಿಗೆ? ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್ ದೃಶ್ಯಾವಳಿ!
ಮುಂದೇನು?
ಮಾಲಿನ್ಯ ಮಂಡಳಿ ನೋಟಿಸ್ ನೀಡಿದ ಹಿನ್ನೆಲೆ ಬಿಗ್‌ಬಾಸ್ ಸೆಟ್ ನಿರ್ಮಾಣವಾಗಿರುವ ಜಾಲಿವುಡ್ ಸ್ಟುಡಿಯೋ ಸೀಜ್ ಮಾಡಲಾಗಿದೆ. ಈ ಹಿನ್ನೆಲೆ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿದೆ. ಮಾಲಿನ್ಯ ಮಂಡಳಿ ಆದೇಶ ಪ್ರಶ್ನಿಸಿ ಜಾಲಿವುಡ್ ಸ್ಟುಡಿಯೋ ಮತ್ತು ಬಿಗ್‌ಬಾಸ್ ಆಡಳಿತ ಮಂಡಳಿ ನ್ಯಾಯಾಲಯ ಮೊರೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಾಲಿಗೆ ಮೇಲಿನ ಮಚ್ಚೆ! ಆಕೆ ಭವಿಷ್ಯದಂತೆ ಬಿಗ್‌ಬಾಸ್ ಮಾಸ್ ಎಲಿಮಿನೇಷನ್!