ಬಿಗ್‌ಬಾಸ್​ ಸೀಸನ್​ 12ರ ಸ್ಪರ್ಧಿ: ಕಾಕತಾಳೀಯವಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಿಂದಾಗಿ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದು, ಆಕೆಯ ನಾಲಿಗೆ ಮೇಲಿನ ಮಚ್ಚೆಯ ಮಾತು ಇದೀಗ ಚರ್ಚೆಯಲ್ಲಿದೆ.

ವಿನುತಾ ಪರಮೇಶ್​, ಏಷ್ಯಾನೆಟ್​ ಸುವರ್ಣನ್ಯೂಸ್​

Bigg Boss Kannada Mass Elimination: ಆಕೆ ಹೇಳಿದಂತೆ ಆಯ್ತಾ? ಇಡೀ ಮನೆಯ ಸ್ಪರ್ಧಿಗಳನ್ನೇ ಹೊರಗೆ ಹಾಕ್ತೀನಿ ಅಂದಿದ್ದ ಸ್ಪರ್ಧಿ. ಹೇಳಿದ ಎರಡೇ ದಿನಕ್ಕೆ ಹೊರಗೆ ಬಂದ ಮನೆ ಸ್ಷರ್ಧಿಗಳು. ನಾಲಿಗೆ ಮೇಲಿನ ಮಚ್ಚೆಗೂ ಮಾತಿಗೂ ಇದ್ಯಾ ಲಿಂಕ್​! ಏನಿದು ಹೊಸ ರಾಮಾಯಣ. ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 12 ಶುರುವಾಗಿ ಹತ್ತೇ ದಿನ ಕಳೆದಿದೆ. ಈಗಷ್ಟೇ ಈ ಸೀಸನ್​ ರಂಗೇರುತ್ತಾ ಇತ್ತು. ಈ ಸೀಸನ್‌​ನಲ್ಲಿ ಭಾಗಿಯಾಗಿರುವ ಸ್ಪರ್ಧಿಗಳ ಒಂದೊಂದೆ ನಡೆ ನುಡಿ ವ್ಯಕ್ತಿತ್ವ ಅನಾವರಣಗೊಳ್ಳುತ್ತಿತ್ತು. ಸೋಶಿಯಲ್​ ಮೀಡಿಯಾದಲ್ಲೂ ಈ ಶೋ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿತ್ತು.

ಈ ಸೀಸನ್‌ನಲ್ಲಿ ಸಾಕಷ್ಟು ಚಿತ್ರವಿಚಿತ್ರ ತಿರುವುಗಳು ಪಡೆದುಕೊಳ್ಳುತ್ತಿತ್ತು. ಇದಪ್ಪಾ ಅಸಲಿ ಆಟ ಅನ್ನೋ ಅಷ್ಟರಲ್ಲೇ ಬಿಗ್‌​ಬಾಸ್​ ಆಯೋಜಕರಿಗೆ ಆಘಾತ ಎದುರಾಗಿದೆ. ಇಡೀ ಬಿಗ್‌​ಬಾಸ್​ ಮನೆಯ ಸ್ಪರ್ಧಿಗಳೇ ಮಾಸ್​ ಎಲಿಮನೇಟ್​ ಆಗಿದ್ದಾರೆ. ಹೀಗಿರಬೇಕಾದ್ರೆ ಕಳೆದ ಭಾನುವಾರದ ಎಪಿಸೋಡ್‌​ನಲ್ಲಿ ಈ ಸ್ಪರ್ಧಿ ಹೇಳಿದ ಅದೊಂದು ಮಾತು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗ್ತಿದೆ.

ಹೌದು, ಬಿಗ್‌​ಬಾಸ್​ ಸೀಸನ್​ 12 ಪ್ರಾರಂಭದಿಂದಲೇ ವಿಭಿನ್ನ ರೂಪದಲ್ಲಿ ಶುರುವಾಗಿತ್ತು. ಅದ್ರಂತೆ ಮನೆಗೆ ಹೋದ ಮೊದಲ ದಿನವೇ ತುಳುನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಮನೆಯವರ ಒಮ್ಮತದಿಂದ ಎಲಿಮನೇಟ್​ ಆಗಿ ಹೊರ ಬಂದು ಅಚ್ಚರಿ ಮೂಡಿಸಿದ್ದರು. ಒಂದೇ ದಿನಕ್ಕೆ ಹೊರ ಕಳಿಸೋ ಹಾಗಿದ್ರೆ ಆಯ್ಕೆ ಮಾಡಿದ್ದಾದ್ರೂ ಯಾಕೆ ಅಂತ ನೆಟ್ಟಿಗರು ಪ್ರಶ್ನಿಸಿದ್ರು. ಈ ನಡುವೆ ಮೊದಲ ವಾರದ ಸೂಪರ್​​ ಸಂಡೇ ವಿತ್‌ ಸುದೀಪನ ಪಂಚಾಯಿತಿ ಎಪಿಸೋಡ್‌​ನಲ್ಲಿ ಅಚ್ಚರಿಯಂತೆ ಎಲಿಮನೇಟ್​ ಆಗಿದ್ದ ರಕ್ಷಿತಾ ವೈಲ್ಡ್‌ಕಾರ್ಡ್​ ಎಂಟ್ರಿ ಮೂಲಕ ಮನೆಗೆ ವಾಪಸ್​ ಆಗಿದ್ದರು. ಇಲ್ಲಿವರೆಗೂ ಎಲ್ಲವೂ ಸರಿ ಇತ್ತು. ಆದ್ರೆ ಮನೆ ಒಳಗೆ ಬಂದ ರಕ್ಷಿತಾ ಆಡಿದ ಆ ಮಾತಿಗೂ ಸದ್ಯದ ಬೆಳವಣಿಗೆಗೂ ಲಿಂಕ್​ ಮಾಡಲಾಗ್ತಿದೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಬೀಗ: ಯಾರೂ ದೊಡ್ಡವರಲ್ಲ ಅಂದ್ರು ಈಶ್ವರ್ ಖಂಡ್ರೆ

ಅಷ್ಟಕ್ಕೂ ರಕ್ಷಿತಾ ಹೇಳಿದ್ದೇನು?

ಸೂಪರ್​​ ಸಂಡೇ ವಿತ್​ ಬಾದ್‌ ಶಾ ಸುದೀಪ ಪಂಚಾಯಿತಿ ಎಪಿಸೋಡ್‌ನಲ್ಲಿ, ನಿಮಗೆ ಮನೆಯಿಂದ ಹೊರಗೆ ಕಳಿಸೋ ಆಪ್ಷನ್​ ಕೊಟ್ರೆ ಯಾರನ್ನ ಕಳಿಸುತ್ತೀರಾ ಅನ್ನೋ ಪ್ರಶ್ನೆಯನ್ನ ಕಿಚ್ಚ ರಕ್ಷಿತಾ ಅವರನ್ನ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ರಕ್ಷಿತಾ, ಎಲ್ಲರನ್ನೂ ಹೊರಗೆ ಹಾಕ್ತೀನಿ ಎನ್ನುತ್ತಾರೆ.

ನಾಲಿಗೆ ಮೇಲೆ ಮಚ್ಚೆ ಇದೆ!

ಸೋಶಿಯಲ್​ ಮೀಡಿಯಾ ಮೂಲಕ ಹೆಸರು ಮಾಡಿ ಬಿಗ್‌ಬಾಸ್‌ಗೆ ಎಂಟ್ರಿಯಾಗಿದ್ದ ರಕ್ಷಿತಾ ಶೆಟ್ಟಿ ಈ ಹಿಂದೆ, ನನ್ನ ನಾಲಿಗೆ ಮೇಲೆ ಮಚ್ಚೆ ಇದೆ. ಹೇಳಿದಂತೆ ಆಗುತ್ತೆ ಅನ್ನೋ ಮಾತನ್ನ ಹೇಳಿದ್ರು, ಕಾಕತಾಳೀಯ ಎಂಬಂತೆ ರಕ್ಷಿತಾ ಹೇಳಿದ ಹಾಗೆ ಮನೆಯವರೆಲ್ಲಾ ಹೊರಗೆ ಬಂದಿದ್ದಾರೆ. ಸದ್ಯ ಬಿಗ್ ಬಾಸ್ ಮನೆ ನಿರ್ಮಾಣ ಆಗಿರುವ ‘ಜಾಲಿವುಡ್ ಸ್ಟುಡಿಯೋಸ್ ಮಾಲಿಕರು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಬಿಗ್​ಬಾಸ್​ ಮನೆಗೆ ಬೀಗ ಹಾಕಲಾಗಿದ್ದು, ಮನೆಯವರೆಲ್ಲಾ ಹೊರಗೆ ಬಂದಿದ್ದಾರೆ. ಎಲ್ಲಾ ಸ್ಪರ್ಧಿಗಳನ್ನು ರಹಸ್ಯ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ: BBK 12, Exclusive video: ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳ ದೃಶ್ಯ

Scroll to load tweet…