ಕಾನೂನು ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಡದಿಯ ಜಾಲಿವುಡ್ ಸ್ಟೂಡಿಯೋಸ್‌ನಲ್ಲಿರುವ ಬಿಗ್ ಬಾಸ್ ಮನೆಯನ್ನು ರಾಜ್ಯ ಸರ್ಕಾರ ಕ್ಲೋಸ್ ಮಾಡಿಸಿದೆ. ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳು ಸ್ಟುಡಿಯೋಗೆ ಬೀಗ ಜಡಿದಿದ್ದು, ಎಲ್ಲಾ 17 ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿ, ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ
ಬೆಂಗಳೂರು/ರಾಮನಗರ (ಅ.07): ಜಾಲಿವುಡ್ ಸ್ಟೂಡಿಯೋಸ್‌ನಿಂದ ಬಿಗ್ ಬಾಸ್ ಮನೆಯನ್ನು ಕಾನೂನಿನ ನಿಯಮಗಳನ್ನು ಮೀರಿ ನಡೆಸುತ್ತಿದ್ದರಿಂದ ರಾಜ್ಯ ಸರ್ಕಾರದಿಂದ ಇದೀಗ ಮನೆಯನ್ನು ಕ್ಲೋಸ್ ಮಾಡಿಸಲಾಗಿದೆ. ಇದೀಗ ಎಲ್ಲ ಸ್ಪರ್ಧಿಗಳನ್ನು ಸಂಜೆ 7 ಗಂಟೆಯೊಳಗೆ ಹೊರಗೆ ಕಳಿಸುವಂತ ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಲ್ಲಿಯೇ ಹಿಂಬದಿ ಗೇಟಿನಿಂದ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಪೊಲೀಸರು ಬಿಗ್ ಬಾಸ್ ಮನೆಯೊಳಗೆ ಹೋಗುವ ವೇಳೆಗೆ ಎಲ್ಲ ಸ್ಪರ್ಧಿಗಳನ್ನು ಈ ಆವರಣದಲ್ಲಿ ಕೂಡಿ ಹಾಕಲಾಗಿತ್ತು.
ಬಿಗ್ ಬಾಸ್ ಮನೆಯೊಳಗೆ ನಡೆಯುತ್ತಿರುವ ಹೈಡ್ರಾಮಾವನ್ನು ಸುವರ್ಣ ನ್ಯೂಸ್‌ನಲ್ಲಿ ಎಕ್ಸ್‌ಕ್ಲ್ಯೂಸಿವ್ ಆಗಿ ಸರೆಹಿಡಿಯಲಾಗಿದೆ. ಎಲ್ಲ ಸ್ಪರ್ಧಿಗಳನ್ನು ಕೂಡಲೇ ಮನೆಯಿಮದ ಹೊರಗೆ ಕಳುಹಿಸಿ, ಲೈಟ್ಸ್ ಆಫ್ ಮಾಡಲಾಗುತ್ತು. ಎಲ್ಲ 3 ಗೇಟುಗಳನ್ನು ರಾಮನಗರದ ತತಹಶೀಲ್ದಾರ್ ನೇತೃತ್ವದಲ್ಲಿ ಕ್ಲೋಸ್ ಮಾಡಲಾಗಿದೆ. ಇನ್ನು ಒಂದು ಗೇಟ್ ಮಾತ್ರ ಬಾಕಿಯಿದೆ. ಈಗ ಎಲ್ಲ 17 ಸ್ಪರ್ಧಿಗಳು ಇದೀಗ ಕಿಚ್ಚ ಸುದೀಪ್ ವಾರಾಂತ್ಯದ ಕಾರ್ಯಕ್ರಮವನ್ನ ನಡೆಸಿಕೊಡುವ ಜಾಲಿವುಡ್ ಥಿಯೇಟರ್ ಆವರಣಕ್ಕೆ ಕರೆತಂದು ಕೂರಿಸಲಾಗಿದೆ.

ಘಟನೆಯ ಹಿನ್ನೆಲೆಯೇನು?
ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ, 'ಬಿಗ್ ಬಾಸ್ ಕನ್ನಡ ಸೀಸನ್ 12' ರ ರಿಯಾಲಿಟಿ ಶೋ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ 7 ಗಂಟೆಯೊಳಗೆ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುವಂತೆ ಸೂಚನೆ ನೀಡಲಾಗಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೋಟಿಸ್ ನೀಡಿದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಟುಡಿಯೋಗೆ ಆಗಮಿಸಿದ್ದು, ಸಂಜೆ 7 ಗಂಟೆಯೊಳಗೆ ಎಲ್ಲ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಲು ಸೂಚನೆ ನೀಡಿದ್ದರು.
ಸ್ಟುಡಿಯೋ ಪ್ರವೇಶಿಸಿದ ಅಧಿಕಾರಿಗಳ ತಂಡ:
ಸಚಿವರ ಹೇಳಿಕೆಯ ಬೆನ್ನಲ್ಲೇ, ಜಾಲಿವುಡ್ ಸ್ಟುಡಿಯೋ ನಡೆಯುತ್ತಿರುವ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಆಗಮಿಸಿದೆ. ತಹಶೀಲ್ದಾರ್ ತೇಜಸ್ವಿನಿ, ಬಿಡದಿ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಸೇರಿದಂತೆ ಆರ್.ಐ. ಮತ್ತು ವಿ.ಎ. ಅಧಿಕಾರಿಗಳು ಸ್ಟುಡಿಯೋ ಒಳಗಡೆ ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮ ಮೀರಿ ಸ್ಟುಡಿಯೋ ನಡೆಸುತ್ತಿರುವುದು ಖಚಿತವಾದರೆ, ಕೆಲವೇ ಕ್ಷಣಗಳಲ್ಲಿ ಸ್ಟುಡಿಯೋಗೆ ಬೀಗ ಹಾಕಿದ್ದರು. ಇದೀಗ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಲು ಥಿಯೇಟರ್ ಒಳಗೆ ಸರ್ಕಾರದ ಸಿಬ್ಬಂದಿ ಹೋಗಿದ್ದಾರೆ. ಅಲ್ಲಿಂದ ಎಲ್ಲಿಗೆ ಹೋಗ್ತಾರೆ ಎನ್ನುವ ಮಾಹಿತಿ ಇಲ್ಲಿದೆ.
ಅಂತಿಮವಾಗಿ ಬಿಗ್ ಬಾಸ್ ಸ್ಪರ್ಧಿಗಳು ಎಲ್ಲಿಗೆ ಹೋಗ್ತಾರೆ?
ಬಿಗ್ ಬಾಸ್ ಎಲ್ಲ 17 ಸ್ಪರ್ಧಿಗಳನ್ನು ಬೇರೆ ಹೋಟೆಲ್ ಅಥವಾ ಖಾಸಗಿ ರೆಸಿಡೆನ್ಸಿಗೆ ಶಿಫ್ಟ್ ಮಾಡುವುದಕ್ಕೆ ಮುಂದಾಗಿದೆ. ಎಲ್ಲ ಸ್ಪರ್ಧಿಗಳನ್ನು ಬೇರೆಡೆ ಶಿಫ್ಟ್ ಮಾಡುವುದಕ್ಕೆ ಒಟ್ಟು 10 ಇನ್ನೋವಾ ಕಾರುಗಳನ್ನು ತರಿಸಲಾಗಿದೆ. ಬಿಗ್ ಬಾಸ್ ಎಲ್ಲ ಸ್ಪರ್ಧಿಗಳನ್ನು ಹೈಡ್ ಮಾಡಿ ಇಡುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇದೀಗ ಜಾಲಿವುಡ್ ಸ್ಟೂಡಿಯೋಸ್ನ ಎ,ಬಿ, ಸಿ ಮೂರೂ ಗೇಟ್‌ಗಳು ಬೀಗ ಹಾಕಲಾಗಿದೆ. ಡಿ ಗೇಟ್ ಬಾಕಿಯಿದ್ದು, ಅಲ್ಲಿಂದ ಸ್ಪರ್ಧಿಗಳನ್ನು ಹೊರಗೆ ಕರೆತರುವ ಯತ್ನ ನಡೆಯುತ್ತಿದೆ.
