- Home
- Entertainment
- TV Talk
- ಗಿಲ್ಲಿ ಅಂಟೆ ಗಿಲ್ಲಿ: ತೆಲುಗು ಅಭಿಮಾನಿಗಳಿಂದ ಸೂಪರ್ ಸಾಂಗ್ ಬಿಡುಗಡೆ, ಹುಚ್ಚೆದ್ದು ಕುಣಿಯುತ್ತಿರೋ ಫ್ಯಾನ್ಸ್
ಗಿಲ್ಲಿ ಅಂಟೆ ಗಿಲ್ಲಿ: ತೆಲುಗು ಅಭಿಮಾನಿಗಳಿಂದ ಸೂಪರ್ ಸಾಂಗ್ ಬಿಡುಗಡೆ, ಹುಚ್ಚೆದ್ದು ಕುಣಿಯುತ್ತಿರೋ ಫ್ಯಾನ್ಸ್
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ತಮ್ಮ ವಿಶಿಷ್ಟ ಶೈಲಿಯಿಂದ ಜನಪ್ರಿಯತೆ ಗಳಿಸುತ್ತಿದ್ದಾರೆ. ಅವರ ಆಟದ ವೈಖರಿಯನ್ನು ಮೆಚ್ಚಿ ತೆಲುಗು ಭಾಷಿಕರು 'ಗಿಲ್ಲಿ ಅಂಟೆ ಗಿಲ್ಲಿ' ಎಂಬ ಹಾಡನ್ನು ರಚಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೂಪರ್ ಸಾಂಗ್ ಬಿಡುಗಡೆ
ಸ್ಪರ್ಧಿ ಗಿಲ್ಲಿ ನಟ ಅವರಿಂದಾಗಿ ಬಿಗ್‌ಬಾಸ್ ಕನ್ನಡ ಸೀಸನ್ 12 ಒನ್ ಮ್ಯಾನ್ ಶೋ ಆಗಿದೆ ಎಂಬುವುದು ಹಲವರ ಅಭಿಪ್ರಾಯವಾಗಿದೆ. ಮೊದಲ ದಿನದಿಂದಲೇ ಮನೆಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಗಿಲ್ಲಿ ನಟ, ಎದುರಾಳಿಗಳಿಗೆ ಆ ಕ್ಷಣದಲ್ಲಿ ಪಂಚ್ ಡೈಲಾಗ್ ಮೂಲಕ ತಿರುಗೇಟು ನೀಡುವ ಜಾಣತನ ಹೊಂದಿದ್ದಾರೆ.
ಇದರೊಂದಿಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡಿರುವ ಗಿಲ್ಲಿ ನಟ ಅವರ ಸ್ಥಳೀಯ ಶೈಲಿಯ ಮಾತು, ಗೀತೆಗಳು ವೈರಲ್ ಆಗುತ್ತಿರುತ್ತವೆ.
ಗಿಲ್ಲಿ ಅಂಟೆ ಗಿಲ್ಲಿ
ಇದೀಗ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋವನ್ನು ಬೇರೆ ಭಾಷೆಯ ಜನರು ಸಹ ನೋಡಲು ಆರಂಭಿಸಿದ್ದಾರೆ. ಇದಕ್ಕೆ ಸಾಕ್ಷಿ ತೆಲುಗು ಭಾಷಿಕರು ಗಿಲ್ಲಿ ಅವರ ಆಟದ ಶೈಲಿಯನ್ನು ವಿವರಿಸುವ ಹಾಡು ರಚನೆ ಮಾಡಿದ್ದಾರೆ. ಸದ್ಯ "ಗಿಲ್ಲಿ ಅಂಟೆ ಗಿಲ್ಲಿ" ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಮುನ್ನಲೆಗೆ ಬಂದಿದ್ದು, ಅಭಿಮಾನಿಗಳು ಹೆಚ್ಚೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಹಾಡಿನ ಮೂಲಕ ಗಿಲ್ಲಿ ಗುಣಗಾನ
ಬಿಗ್‌ಬಾಸ್ ಮನೆಯಲ್ಲಿರುವ ಸಿಂಪಲ್ ಹುಡುಗ ಅಂದ್ರೆ ಗಿಲ್ಲಿ ನಟ. ಇದಕ್ಕಾಗಿ ನೋಡುಗರಿಗೆ ಗಿಲ್ಲಿ ನಟ ನೋಡಿಗರಿಗೆ ಇಷ್ಟವಾಗುತ್ತಾರೆ. ದೊಡ್ಡದೊಡ್ಡದಾಗಿ ಮಾತನಾಡಲ್ಲ, ಕಾಮಿಡಿಯಾಗಿ ಮಾತನಾಡಿ ಎಲ್ಲರನ್ನು ನಗಿಸುವ ಗುಣವುಳ್ಳ ವ್ಯಕ್ತಿ. ಗಿಲ್ಲಿ ಅಂದ್ರೆ ಮನೆಯಲ್ಲಿರುವ ಸ್ಟ್ರೆಸ್ ಬಸ್ಟರ್. ಸರಳ ಸ್ವಭಾವವೇ ಗಿಲ್ಲಿಯ ಐಡೆಂಟಿಟಿ. ಜನರಿಗೂ ಸಹ ಇದೇ ಇಷ್ಟ ಎಂಬ ಸಾಲುಗಳನ್ನು ಹೊಂದಿದೆ.
ಹೆಚ್ಚುತ್ತಿರುವ ಗಿಲ್ಲಿ ಜನಪ್ರಿಯತೆ
ಇಡೀ ಹಾಡಿನಲ್ಲಿ ಗಿಲ್ಲಿ ನಟ ಅವರ ವ್ಯಕ್ತಿತ್ವ ಹೇಗೆ ಎಂಬುದನ್ನು ವಿವರಿಸಲಾಗಿದೆ. ಈ ಹಾಡು ಕೇಳಿರುವ ಕನ್ನಡಿಗರು ಗಿಲ್ಲಿ ನಟ ಅಭಿಮಾನಿಗಳ ಅಭಿಮಾನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿಶೇಷ ಮತ್ತು ವಿಭಿನ್ನ ಶೈಲಿಯ ಕಾಮಿಡಿಯಿಂದ ಕರುನಾಡಿನ ಮನೆ ಮಾತಾಗಿರುವ ಗಿಲ್ಲಿ ನಟ ಭವಿಷ್ಯದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಇದನ್ನು ಓದಿ: BBK 12: ಗಿಲ್ಲಿಯ ಚಿತ್ತಾಲ ಪತ್ತಾಲ್ ಆಟಕ್ಕೆ ಸುಸ್ತಾದ ರಾಶಿಕಾ; ಈ ವಾರದ ಕ್ಯಾಪ್ಟನ್ ಯಾರು?
ಕ್ಯಾಪ್ಟನ್ಸಿ ಟಾಸ್ಕ್
ಈ ವಾರ ರಘು ಜೊತೆಯಲ್ಲಿ ಗಿಲ್ಲಿ ನಟ ಕ್ಯಾಪ್ಟನ್ಸಿ ಟಾಸ್ಕ್ ಆಡಿದ್ದಾರೆ. ಈಗಾಗಲೇ ಆಟದ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನಡುವೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ತಮ್ಮ ಪ್ಯಾರ್ ಸಿನಿಮಾ ತಂಡದೊಂದಿಗೆ ಬಿಗ್‌ಬಾಸ್ ಮನೆಗೆ ಆಗಮಿಸಿದ್ದಾರೆ. ಪ್ಯಾರ್ ಸಿನಿಮಾದಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ: BBK 12: ಬಿಗ್‌ಬಾಸ್ ಮನೆಗೆ ಬಂದ ಸ್ಟಾರ್ ಹೀರೋ: ಗಿಲ್ಲಿಗೆ ಮೋಸ ಆಗ್ತಿದೆ ಎಂದ ಅಭಿಮಾನಿಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

