- Home
- Entertainment
- TV Talk
- BBK 12: ರಕ್ಷಿತಾ ಶೆಟ್ಟಿ ಮನೆಯಿಂದ ಹೋಗುವಾಗ ದೊಡ್ಡತನ ಮೆರೆದ ಅಶ್ವಿನಿ ಗೌಡ: ಭಾವುಕರಾದ ವೀಕ್ಷಕರು
BBK 12: ರಕ್ಷಿತಾ ಶೆಟ್ಟಿ ಮನೆಯಿಂದ ಹೋಗುವಾಗ ದೊಡ್ಡತನ ಮೆರೆದ ಅಶ್ವಿನಿ ಗೌಡ: ಭಾವುಕರಾದ ವೀಕ್ಷಕರು
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆಂದು ಭಾವಿಸಿದ ಸದಸ್ಯರು ಭಾವುಕರಾದರು, ಅದರಲ್ಲೂ ಅಶ್ವಿನಿ ಗೌಡ ಕಣ್ಣೀರಿಟ್ಟರು. ಆದರೆ, ಇಬ್ಬರೂ ಸ್ಪರ್ಧಿಗಳು ಸೀಕ್ರೆಟ್ ರೂಮ್‌ನಿಂದ ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಸೀಕ್ರೆಟ್ ರೂಮ್‌ನಲ್ಲಿರುವ ಧ್ರುವಂತ್ & ರಕ್ಷಿತಾ ಶೆಟ್ಟಿ
ಈ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಬಿಗ್‌ಬಾಸ್ ಮನೆಯಲ್ಲಿರುವ ಸದಸ್ಯರೆಲ್ಲರಿಗೂ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಇಬ್ಬರು ಸ್ಪರ್ಧಿಗಳು ಮಾತ್ರ ಸೀಕ್ರೆಟ್ ರೂಮ್ ಸೇರಿಕೊಂಡಿದ್ದು, ಅಲ್ಲಿಂದಲೇ ತಮ್ಮ ಬಗ್ಗೆ ಯಾರು ಏನು ಮಾತನಾಡ್ತಿದ್ದಾರೆ ಎಂದು ಕೇಳಿಸಿಕೊಳ್ಳುತ್ತಿದ್ದಾರೆ.
ಭಾವುಕರಾಗಿ ಕಣ್ಣೀರಿಟ್ಟ ಸದಸ್ಯರು
ಧ್ರುವಂತ್ ಎಲಿಮಿನೇಟ್ ಆಗಿರೋದು ಬಹುತೇಕರಿಗೆ ಅಚ್ಚರಿಯನ್ನುಂಟು ಮಾಡಿರಲಿಲ್ಲ. ಆದ್ರೆ ಧ್ರುವಂತ್ ಜೊತೆಯಲ್ಲಿಯೇ ರಕ್ಷಿತಾ ಶೆಟ್ಟಿ ಹೊರಗೆ ಹೋಗಿರೋದನ್ನು ನೋಡಿ ಕಾವ್ಯಾ ಮತ್ತು ಸ್ಪಂದನಾ ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ರಕ್ಷಿತಾ ಹೋಗ್ತಿರೋದಕ್ಕೆ ಎಲ್ಲರೂ ಶಾಕ್
ಯಾರು ಮನೆಯಿಂದ ಹೊರಗೆ ಹೋಗಬೇಕೆಂದು ಕೇಳಿದಾಗ ರಕ್ಷಿತಾ ಹೆಸರನ್ನು ಅಶ್ವಿನಿ ಗೌಡ ಹೇಳಿದ್ದರು. ಆದ್ರೆ ಅಂತಿಮವಾಗಿ ರಕ್ಷಿತಾ ಹೊರಗೆ ಹೋಗುವಾಗ ಅಶ್ವಿನಿ ಗೌಡ ಸಹ ಅಕ್ಷರಶಃ ಭಾವುಕರಾಗಿ ಕಣ್ಣೀರು ಹಾಕಿದ್ದರು. ಮತ್ತೊಂದೆಡೆ ಜಾನ್ವಿ ಹೊರ ನಡೆದ ಬಳಿಕ ಧ್ರುವಂತ್ ಜೊತೆಯಲ್ಲಿ ಅಶ್ವಿನಿ ಗೌಡ ಹೆಚ್ಚು ಸಮಯ ಕಳೆದಿದ್ದರು. ಆದ್ರೆ ರಕ್ಷಿತಾ ಶೆಟ್ಟಿ ಔಟ್ ಆಗಿರೋದು ಅಶ್ವಿನಿ ಗೌಡ ಅವರಿಗೆ ಹೆಚ್ಚು ನೋವನ್ನುಂಟು ಮಾಡಿತ್ತು.
ದೊಡ್ಡತನ ಮರೆದ ಅಶ್ವಿನಿ ಗೌಡ
ಬಿಗ್‌ಬಾಸ್ ಎರಡನೇ ವಾರದಿಂದಲೂ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಹಲವು ಭಿನ್ನಾಭಿಪ್ರಾಯಗಳ ಉಂಟಾಗಿ ದೊಡ್ಡಮಟ್ಟದಲ್ಲಿಯೇ ಜಗಳ ನಡೆದಿವೆ. ಈ ಹಿಂದಿನ ವೀಕೆಂಡ್ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಆಟಕ್ಕೆ ಏಣಿಯಾಗಿದ್ದಾರೆ ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದರು. ಇದೀಗ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ನಡೆಯುವ ಮುನ್ನ ಅಶ್ವಿನಿ ಗೌಡ ಹೇಳಿದ ಮಾತುಗಳು ಬಿಗ್‌ಬಾಸ್ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಅಶ್ವಿನಿ ಗೌಡ ಹೇಳಿದ್ದೇನು?
ಕೊನೆಯದಾಗಿ ನಾನು ನಿನಗೆ ಥ್ಯಾಂಕ್ ಯು ಮತ್ತು ಸಾರಿ ಹೇಳಬಲ್ಲೆ. ಮನಸ್ಸಿನಲ್ಲಿ ಏನು ಇಟ್ಟುಕೊಳ್ಳಬೇಡ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ. ಹೊರಗೆ ಬಂದ್ಮೇಲೆ ನಿನ್ನನ್ನು ಕಾಂಟ್ಯಾಕ್ಟ್ ಮಾಡುತ್ತೇನೆ. ನಮ್ಮೂರಿಗೆ ನಮ್ಮ ಮನೆಗೆ ಬರಬೇಕು. ನಾನೂ ನಿಮ್ಮೂರಿಗೆ ಬರಬೇಕು. ಇಬ್ಬರು ಜೊತೆಯಾಗಿ ವ್ಲಾಗ್ ಮಾಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: BBK 12: ಎಲಿಮಿನೇಟ್ ಆಗಿಲ್ಲ ಅನ್ನೋ ಖುಷಿಗಿಂತ ರಕ್ಷಿತಾ ಶೆಟ್ಟಿಗೆ ಶುರುವಾಗಿದೆ ಹೊಸ ಚಿಂತೆ
ಅಶ್ವಿನಿ ಗೌಡ ಕಣ್ಣೀರು
ಇಷ್ಟೆಲ್ಲಾ ಹೇಳಿದ್ಮೇಲೆ ರಕ್ಷಿತಾ ಶೆಟ್ಟಿಯನ್ನು ಮಗಳಂತೆ ಅಶ್ವಿನಿ ಗೌಡ ಮುದ್ದಿಸುತ್ತಾರೆ. ಪದೇ ಪದೇ ರಕ್ಷಿತಾ ಬಳಿ Sorry ಎಂದು ಅಶ್ವಿನಿ ಗೌಡ ಹೇಳುತ್ತಾರೆ. ಸೀಸನ್ 12ರಲ್ಲಿ ಅಶ್ವಿನಿ ಗೌಡ-ರಕ್ಷಿತಾ ಶೆಟ್ಟಿ ನಡುವೆ ಅತಿ ಹೆಚ್ಚು ಜಗಳ ನಡೆದಿತ್ತು. ಆದ್ರೆ ರಕ್ಷಿತಾ ಹೋಗುವಾಗ ಮಾತ್ರ ಅತ್ಯಧಿಕವಾಗಿ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ರಘು ಸಹ ಭಾವುಕರಾಗಿ ರಕ್ಷಿತಾ ಕೈಗೆ ಯಾವುದೋ ಒಂದು ವಸ್ತು ನೀಡುತ್ತಾರೆ.
ಇದನ್ನೂ ಓದಿ: Bigg Boss: ಅಬ್ಬಬ್ಬಾ! ಗಿಲ್ಲಿ ಮೇಲೆ ಅಶ್ವಿನಿಗೆ ಇದೆಂಥ ಲವ್? ನನ್ನ ಮನಸ್ಸು ಪರಿವರ್ತಿಸಿದ್ದೂ ಇವನೇ ಅಂದ ಧ್ರುವಂತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

